ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರಿಂದ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ
ವಿಜಯಪುರ: ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಹಂತದ ಅಧಿಕಾರಿಗಳು ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ತಪ್ಪದೇ ಪಾಲಿಸಬೇಕು ಎಂದು ಬಿಜಾಪೂರ ನಗರ ಹಾಗೂ ನಾಗಠಾಣ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕ ಉದೀತ ಪ್ರಕಾಶ ರೈ ಅವರು ಸೂಚಿನೆ ನೀಡದರು. ಜಿ. ಪಂ. ಸಭಾಂಗಣದಲ್ಲಿ ನಾನಾ ತಂಡಗಳ ನೋಡಲ್ ಅಧಿಕಾರಿಗಳ, ನಿರ್ವಚನಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ […]
ವಿಜಯಪುರ ಸೈನಿಕ ಶಾಲೆ ಮತ ಎಣಿಕೆ ಕೇಂದ್ರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಚುನಾವಣೆ ವೀಕ್ಷಕರು
ವಿಜಯಪುರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮೇ.10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಏಣಿಕೆ ಕೇಂದ್ರಕ್ಕೆ ಶನಿವಾರ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಭೇಟಿ ನೀಡಿ, ಮತ ಎಣಿಕೆ ಕಾರ್ಯದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. 26-ಮುದ್ದೇಬಿಹಾಳ ಮತ್ತು 27-ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಎಂ. ಅರವಿಂದ, 28-ಬಸವನ ಬಾಗೇವಾಡಿ ಮತ್ತು 29-ಬಬಲೇಶ್ವರ ವಿಧಾನ ಸಭೆ […]
ಶೇ.90 ಮತದಾನ ಮಾಡಿದರೆ, 40 ಸಾವಿರ ಮತಗಳಿಂದ ಗೆಲುವು- ಯತ್ನಾಳ
ವಿಜಯಪುರ: ಕಳೆದ ಬಾರಿ ಮುಸ್ಲಿಂ ಸಮುದಾಯ ಪ್ರದೇಶಗಳಲ್ಲಿ ಸಾವಿರಕ್ಕೆ ಒಂದೇರಡು ಮತಗಳು ಮಾತ್ರ ನಮಗೆ ಬಿದ್ದಿವೆ. ಅದೇ ರೀತಿ ನಮ್ಮ ಹಿಂದೂಗಳು ಕೂಡ ಜಾಗೃತರಾಗಿ ಒಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನನಗೆ ಮತ ನೀಡಬೇಕು ಎಂದು ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ವಾರ್ಡ ನಂ. 29 ಮತ್ತು 30ರ ಕಾಸಗೇರಿ ಓಣಿ, ಗೌಡರ ಓಣಿ, ರಾಮನಗರ, ರಾಜಾಜಿನಗರದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಬಾರಿ ನಮ್ಮವರು ಶೇ. 58 […]
ಲಿಂಗಾಯಿತರು ಬಿಜೆಪಿಯಿಂದ ಬಹಿರ್ಮುಖಿಯಾಗಿದ್ದಾರೆ- ಶಾಸಕರು, ಪಕ್ಷ, ಹೈಕಮಾಂಡ್ ಅಸ್ತು ಎಂದರೆ ನಾನೂ ಸಿಎಂ ಆಗಬಹುದು- ಎಂ ಬಿ ಪಾಟೀಲ
ವಿಜಯಪುರ: ಲಿಂಗಾಯಿತ ನಾಯಕರು ಬಿಜೆಪಿಯಿಂದ ಬಹಿರ್ಮುಖಿಯಾಗಿದ್ದಾರೆ. ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಲಿಂಗಾಯಿತ ನಾಯಕರನ್ನು ದಮನ ಮಾಡುತ್ತಿದೆ. ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ಗಾಬರಿಯಾಗಿದ್ದಾರೆ. ಬಿಜೆಪಿ ಈಗ ವಿರೇಂದ್ರ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸುತ್ತಿದೆ. ವಿರೇಂದ್ರ ಪಾಟೀಲ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು. ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ತೊಂದರೆಯಾದ ಕಾರಣ ಅಂದು ರಾಜ್ಯದ ಹಿತದೃಷ್ಟಿಯಿಂದ […]
ಏ. 23 ಬಸವ ಜಯಂತಿಯಂದು ಬಸವ ನಾಡಿಗೆ ರಾಹುಲ ಗಾಂಧಿ ಭೇಟಿ- ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ- ಎಂ. ಬಿ. ಪಾಟೀಲ
ವಿಜಯಪುರ: ಎಐಸಿಸಿ ಮುಖಂಡ ರಾಹುಲ ಗಾಂಧಿ ಏ. 23 ರಂದು ರವಿವಾರ ಬಸವ ನಾಡು ವಿಜಯಪುರ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 23 ರಂದು ಬೆ. 10.30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಅವರು, 11.40ಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮಕ್ಕೆ ಆಗಮಿಸಲಿದ್ದಾರೆ. ಬೆ. 11.50ಕ್ಕೆ ಬಸವಣ್ಣನವರ ಐಕ್ಯಸ್ಥಳ ಮತ್ತು ಸಂಗಮನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೇ, ಉತ್ಸವ ಸಮಿತಿ […]