ವಿಜಯಪುರ: ಸಿದ್ಧರಾಮಯ್ಯ ಇಡೀ ವೀರಶೈವ ಲಿಂಗಾಯಿತರನ್ನು ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರೆಲ್ಲರೂ ಬ್ರಷ್ಟರು ಎಂದು ಸಿದ್ರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ ಮತ್ತು ವೈಯಕ್ತಿಕವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಇಡೀ ಲಿಂಗಾಯತ ಸಿಎಂ ಗಳು ಭ್ರಷ್ಟರು ಎಂಬುದು ಎಷ್ಟು ಸರಿ. ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಕಳೆದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ರಾಮಯ್ಯ ಅವರು ನೀಡಿರುವ ಹೇಳಿಕೆಯಿಂದ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಅಪಮಾನವಾಗಿದೆ. ಲಿಂಗಾಯತರನ್ನು ಒಡೆಯುವುದು, ಹಿಂದೂ ಧರ್ಮಕ್ಕೆ ಅಪಮಾನ ಮಾಡುವುದಾಗಲಿ ಆಗಬಾರದು. ಈ ಕೂಡಲೇ ಸಿದ್ರಾಮಯ್ಯನವರು ರಾಜ್ಯದ ಜನ್ರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಡಾ. ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ನೀಡಲಿಲ್ಲ. ಕಾಂಗ್ರೆಸ್ ನಾಯಕರಿಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಬದಲಾಗಿ ಕಾಂಗ್ರೆಸ್ ನಾಯಕರೇ ಸ್ವತಃ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಬಿಜೆಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.
ಡಿ. ಕೆ. ಶಿವಕುಮಾರ ಲಿಂಗಾಯಿತಿ ಡ್ಯಾಂ ಒಡೆಯುವ ವಿಚಾರ
ಡಿ. ಕೆ. ಶಿವಕುಮಾರ ಲಿಂಗಾಯಿತ ಡ್ಯಾಂ ಒಡೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ, ಲಿಂಗಾಯಿತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಿಮ್ಮ ಹಣೆ ಬರಹಕ್ಕೆ ಮೇಕೆದಾಟು ಯೋಜನೆ ಮಾಡಿಕೊಳ್ಳು ಆಗಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಮೀಸಲಾತಿ ವಿಚಾರ
ಹೊಸಗಾದಿ ಪ್ರಕಟಿಸಲಾಗಿರುವ ಮೀಸಲಾತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತೀರಿ. ನಿಮ್ಮಲ್ಲಿ ತಾಕತ್ ಇದ್ರೆ, ಧಮ್ ಇದ್ರೆ ಇನ್ನೊಮ್ಮೆ ಈ ಮಾತನ್ನು ಹೇಳಿ ನೋಡಿ. ನಾನು ಡಿ. ಕೆ. ಶಿವಕುಮಾರ ಅವರಿಗೆ ಸವಾಲು ಹಾಕುತ್ತೇನೆ. ಲಿಂಗಾಯಿತಿ ಡ್ಯಾಂ ಅಲ್ಲ, ಅದರಿಂದ ಒಂದೇ ಒಂದು ಚಿಪ್ ಕಲ್ಲು ತೆಗೆಯಲು ಆಗಲ್ಲ. ಮೇ 10 ರಂದು ಕಾಂಗ್ರೆಸ್ಸಿನಲ್ಲಿ ಉಳಿದಿರುವ ಒಂದೇ ಒಂದು ಕೊನೆಯ ಮೊಳೆ ಹೊಡಿತಾರೆ ಎಂದು ಅವರು ಹೇಳಿದರು.
ಎಂ. ಬಿ. ಪಾಟೀಲ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ ವಿಚಾರ
ಮುಖ್ಯಮಂತ್ರಿಯಾಗಲು ನಾನೂ ಸಮರ್ಥನಾಗಿದ್ದೇನೆ ಎಂದು ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆಗಲಿ ಬಿಡಿ. ಒಳ್ಳೆಯದು. ಆದರೆ, ಎಂ. ಬಿ. ಪಾಟೀಲ ಅವರನ್ನು ಸಿಎಂ ಆಗಲು ಎಲ್ಲಿ ಬಿಡ್ತಾರೆ? ಡಿ. ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ ಅವರು ಎಂ. ಬಿ. ಪಾಟೀಲ ಮುಖ್ಯಮಂತ್ರಿಯಾಗಲು ಬಿಡ್ತಾರಾ? ಎಂದು ಅವರು ಪ್ರಶ್ನಿಸಿದರು.
ರಾಹುಲ ವಿಜಯಪುರಕ್ಕೆ ಆಗಮನ ವಿಚಾರ
ರಾಹುಲ್ ಗಾಂಧಿ ಅವರಿಗೆ ವಿಜಯಪುರಕ್ಕೆ ಸ್ವಾಗತ ಮಾಡುತ್ತೇವೆ. ರಾಹುಲ ಗಾಂಧಿ ಹೋದ ಕಡೆಗೆಲ್ಲ ಕಾಂಗ್ರೆಸ್ ಸೋಲುತ್ತದೆ. ರಾಹುಲ್ ಗಾಂಧಿ ಅವರು ಬಿಜೆಪಿ ಸ್ಟಾರ್ ಕ್ಯಾಂಪೇನರ್ ಇದ್ದಂತೆ. ಮೊದಲು 15 ಸಾವಿರ ಲೀಡ್ ನಿಂದ ನಾನು ಗೆದ್ದು ಬರುತ್ತೇನೆ ಎಂದುಕೊಂಡಿದ್ದೆ. ಈಗ ರಾಹುಲ್ ಗಾಂಧಿ ಬಂojz ನಾನು 50 ಸಾವಿರ ಲೀಡ್ ನಿಂದ ಗೆದ್ದು ಬರುತ್ತೇನೆ ಎಂದು ಅವರು ಹೇಳಿದರು.
ಮೇ 29 ರಂದು ಮೋದಿ ವಿಜಯಪುರಕ್ಕೆ ಭೇಟಿ
ಇದೇ ವೇಳೆ ಮೇ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಜಯಪುರಕ್ಕೆ ಪ್ರಚಾರಕ್ಕೆ ಬರುತ್ತಾರೆ. ಅಂದು ಮ. 2ಕ್ಕೆ ವಿಜಯಪುರ ನಗರದಲ್ಲಿ ಪ್ರಧಾನಿಯವರ ಕಾರ್ಯಕ್ರಮ ಇದೆ. ಮೋದಿ ಬಂದ ಮೇಲೆ ಮತ್ತೆ 30 ರಿಂದ 40 ಹೆಚ್ಚಿಗೆ ಸೀಟುಗಳು ಬರುತ್ತವೆ. ಈ ಬಾರಿ ಕಾಂಗ್ರೆಸ್ 60 ರಿಂದ 70 ಸೀಟ್ ಬರುತ್ತವೆ. ಬಿಜೆಪಿ 140 ರಿಂದ 150 ಸೀಟುಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು.
ರಾಹುಲ ಗಾಂಧಿ ಕೂಡಲ ಸಂಗಮ ಭೇಟಿ ವಿಚಾರ
ರಾಹುಲ ಗಾಂಧಿ ಕೂಡಲ ಸಂಗಮ ಭೇಟಿ ನೀಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ ಗಾಂಧಿ ಅವರನ್ನು ಸುಮ್ಮನೆ ಕರೆದುಕೊಂಡು ಬರುತ್ತಾರೆ. ಇವನರ್ವ ಇವನರ್ವ್ ಎಂದು ರಾಹುಲ ಗಾಂಧಿ ಹೇಳುತ್ತಾರೆ. ಯಾವ ನರ್ವ್ ಅವರಿಗೆ ಗೊತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಚಿತ್ರನಟ ಸುದೀಪ ಪ್ರಚಾರ ವಿಚಾರ
ಚಿತ್ರನಟ ಸುದೀಪ ಸೇರಿದಂತೆ ಸ್ಟಾರ್ ಪ್ರಚಾರಕರು ವಿಜಯಪುರಕ್ಕೆ ಬರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ನಮ್ಮ ನಾಯಕರಿಗೆ ಹೇಳಿದ್ದೇನೆ. ನನಗೆ ಪ್ರಧಾನಿ, ಅಮೀತ್ ಶಾ ಟಿಪಿ ಸಾಕು. ಯಾವುದೇ ಸಿನಿಮಾ ನಟರುಗಳು ನನಗೆ ಬೇಡಿ. ಚಿತ್ರ ನಟರಿಗಿಂತಲೂ ನಾನೇನು ಕಡಿಮೆ ಇಲ್ಲ. ಡೈರೆಕ್ಟರ್, ಆಕ್ಟರ್, ಕಥಾ ಸಂಕಲನ ನಾನೇ ಮಾಡ್ತಿನಿ. ಇನ್ನು 25ಕ್ಕೆ ದೇವರ ಹಿಪ್ಪರಗಿಯಲ್ಲಿ ಅಮೀತ್ ಶಾ ಕಾರ್ಯಕ್ರಮ ಇದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಿಂದ ಲಿಂಗಾಯತ ಮುನ್ನೆಲೆ ವಿಚಾರ
ಕಾಂಗ್ರೆಸ್ ಲಿಂಗಾಯಿತ ವಿಚಾರವನ್ನು ಮುನ್ನೆಲೆಗೆ ತಂದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಂದೆಡೆ ಎಲ್ಲಾ ಮಠಾಧೀಶರ ಬಳಿಗೆ ಹೋಗುತ್ತಿದ್ದೀರಿ. ಸ್ಬಾಮೀಜಿಗಳ ಕಾಲು ಹಿಡಿದು ಸಹಾಯ ಮಾಡಿ ಅಂತೀರಿ. ಈಗ್ಯಾಕೆ ಹೋಗುತ್ತಿದ್ದೀರಿ? ಮೊದಲು ದರ್ಗಾಕ್ಕೆ ಹೋಗುತ್ತಿದ್ದೀರಿ. ಈಗ್ಯಾಕೆ ಸ್ವಾಮೀಜಿಗಳ ಬಳಿ ಹೋಗುತ್ತೀರಿ? ವಿಜಯಪುರದಲ್ಲಿ ಹಿಂದೂ – ಮುಸ್ಲಿಂ ಗಲಾಟೆ ಇಲ್ಲದೆ ಶಾಂತವಾಗಿದೆ. ಹಿಂದೂಗಳು ಎಂದೂ ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ. ಯಾರದ್ದೂ ನಾ ಆಸ್ತಿ ಕಸಿದುಕೊಂಡಿಲ್ಲ. ಮುಸ್ಲಿಮರೂ ಆರಾಮ ಆಗಿ ಇದ್ದಾರೆ. ಎಷ್ಟು ಅಭಿವೃದ್ಧಿ ಮಾಡಬೇಕು ಅಷ್ಟು ಮಾಡಿದ್ದೇನೆ ಎಂದು ಅವರು ಹೇಳಿದರು.
ಯತ್ನಾಳ ಲಿಂಗಾಯತ ಸಿಎಂ ವಿಚಾರ
ಯತ್ನಾಳ ಲಿಂಗಾಯಿತರ ಸಿಎಂ ಆಗುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಯಾವುದು ವಿಚಾರ ಮಾಡಿಲ್ಲ. ಧರ್ಮೆಂದ್ರ ಪ್ರಧಾನ ಅವರು ಮೀಟಿಂಗ್ ಕರೆದಿದ್ದರು. ಯಡಿಯೂರಪ್ಪ ಅವರಿಗೆ ವಯಸ್ಸಾಗಿತ್ತು, ಅದಕ್ಕೆ ಸರಿಸಿದ್ದಾರೆ. ಆದರೂ, ಬಿ. ಎಸ್. ಯಡಿಯೂರಪ್ಪ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಜಗದೀಶ ಶೆಟ್ಟರ, ಲಕ್ಷ್ಮಣ ಸವದಿ ಬಿಜೆಪಿ ತೊರೆದ ವಿಚಾರ
ಮಾಜಿ ಸಿಎಂ ಜಗದೀಶ ಶೆಟ್ಟರ ಮತ್ತು ಮಾಜಿ ಡಿಸಿಎಂ ಲಕ್ಷ್ಣಣ ಬಿಜೆಪಿ ತೊರೆದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರು ಏನು ಅನ್ಯಾಯ ಆಗಿದೆ ಅಂತ ಹೋದ್ರು? ಹಾಗಿದ್ದರೆ ಅವರು ಪಕ್ಷೇತರ ನಿಲ್ಲಬೇಕಿತ್ತು. ಗೋಹತ್ಯೆ ಕಾಯ್ದೆ, ಮೀಸಲಾತಿ ತೆಗಿತಿನಿ ಅಂತಾರೆ, ಶೆಟ್ಟರೇ ನಿಮಗೆ ಒಪ್ಪಿಗೆ ಇದೆಯಾ? ಧಮ್ ಇದ್ರೆ, ತಾಕತ್ ಇದ್ರೆ, ನಿಮ್ಮ ಶಕ್ತಿ ಇದ್ರೆ ಸ್ವತಂತ್ರವಾಗಿ ನಿಲ್ಲಬೇಕಿತ್ತು. ಧಮ್ ಇದ್ರೆ, ತಾಕತ್ ಇದ್ರೆ ಕಾಂಗ್ರೆಸ್ ನವರು ಲಿಂಗಾಯಿತ ಸಿಎಂ ಘೋಷಣೆ ಮಾಡಲಿ ಎಂದು ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ಸಿಗೆ ಸವಾಲು ಹಾಕಿದರು.