ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ- ಎಂ. ಬಿ. ಪಾಟೀಲ
ವಿಜಯಪುರ: ಕೃಷ್ಣಾ ತೀರದ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ. ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕಣಬೂರ, ಶಿರಬೂರ ಮತ್ತು ಸುತಗುಂಡಿ ಗ್ರಾಮಗಳಲ್ಲಿ ಅವರ ಪ್ರಚಾರ ಕೈಗೊಂಡ ಅವರು ಕಣಬೂರ ಗ್ರಾಮದಲ್ಲಿ ಮಾತನಾಡಿದರು. ಕಣಬೂರ ಸೇರಿದಂತೆ ಕೃಷ್ಣಾ ತೀರದ ಗ್ರಾಮಗಳಲ್ಲಿ ರಸ್ತೆ, ಶಾಲೆಗಳ ಅಭಿವೃದ್ಧಿ ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ.136 ಕೋಟಿ ಖರ್ಚು ಮಾಡಿದ್ದೇನೆ. ಅಲ್ಲದೇ, ಈ ಗ್ರಾಮಗಳ ಬಾಕಿ ಅಭಿವೃದ್ಧಿ ಕಾರ್ಯಗಳನ್ನು […]
ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಲ್ಲಿ ಅಂತಿಮವಾಗಿ 95 ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವ 95 ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಎಂಟು ಮತಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ 122 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿ 115 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯುವ ದಿನವಾದ ಒಟ್ಟು 20 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಈಗ ಒಟ್ಟು 95 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]
ವಿಜಯಪುರ ನಗರದಲ್ಲಿ ಭೂಮಾಪಿಯಾ ಸಂಪೂರ್ಣ ಬಂದ್ ಆಗಿದೆ- ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ನಗರದಲ್ಲಿ ಭೂಮಾಪಿಯಾದದವರದೇ ದರ್ಬಾರ ಆಗಿತ್ತು. ಅದನ್ನು ಸಂಪೂರ್ಣ ಬಂದ ಮಾಡಿರುವೆ. ಎಲ್ಲಿಯೇ ಖಾಲಿ ಜಾಗ ಇದ್ದರೂ, ಓಣಿಯ ಜನರನ್ನು ಸೇರಿಸಿ ಉದ್ಯಾನ, ಸಮುದಾಯ ಭವನ, ಓಪನ್ ಮಾಡಲಾಗುವುದು ಎಂದು ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದರು. ಮತಕ್ಷೇತ್ರ ವ್ಯಾಪ್ತಿಯ ಶಾಸ್ತ್ರಿ ನಗರದಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ವಿಜಯಪುರಕ್ಕೆ ಕೋಟಿ ಎನ್ನುವುದು ಗೊತ್ತೆ ಇರಲಿಲ್ಲ. ಕಳೆದ ಐದು ವರ್ಷಗಳಲ್ಲಿ ನೂರಾರು ಕೋಟಿ ಅನುದಾನ ತರುವ ಮೂಲಕ ಜನರ ನಿರೀಕ್ಷೆ ಮೀರಿ […]
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ- ಜೆಡಿಎಸ್ ದ್ವಿತೀಯ, ಬಿಜೆಪಿ ತೃತೀಯ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದ ಪ್ರಭು ದುಂಡಯ್ಯ ಚೌಕಿಮಠ
ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ 145ಕ್ಕೂ ಹೆಚ್ಚು ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆಯಲಿದೆ. ಜೆಡಿಎಸ್ ದ್ವಿತೀಯ ಮತ್ತು ಬಿಜೆಪಿ ಮೂರನೇ ಸ್ಥಾನ ಪಡೆಯಲಿದೆ ಎಂದು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಪ್ರಭು ದುಂಡಯ್ಯ ಚೌಕಿಮಠ ಭವಿಷ್ಯ ನುಡಿದಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಸ್.ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ ಮತ್ತು ಎಚ್.ಕೆ.ಪಾಟೀಲ ಅವರು 50 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ […]
ಕೇಂದ್ರ, ರಾಜ್ಯ ಸರಕಾರಗಳ ಯೋಜನೆ ಕುರಿತು ಜಾಗೃತಿ ಮೂಡಿಸಿ ಯತ್ನಾಳ ಗೆಲುವಿಗೆ ಶ್ರಮಿಸಿ- ಆರ್. ಎಸ್. ಪಾಟೀಲ ಕೂಚಬಾಳ
ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಯೋಜನೆಗಳು ಹಾಗೂ ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಜನಸಾಮಾನ್ಯರಿಗೆ ತಿಳಿಸುವ ಮೂಲಕ ಬಸನಗೌಡ ಪಾಟೀಲ ಯತ್ನಾಳ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದರು. ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರ ಚುನಾವಣೆ ಪ್ರಚಾರ ಕಾರ್ಯಾಲಯದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಪಕ್ಷಗಳ ಊಹಾಪೋಹಗಳಿಗೆ ಜನ ಕಿವಿಗೊಡುವುದಿಲ್ಲ. ಅಭಿವೃದ್ಧಿ ಮಾಡಿದವರಿಗೆ […]