ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ- ಜೆಡಿಎಸ್ ದ್ವಿತೀಯ, ಬಿಜೆಪಿ ತೃತೀಯ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದ ಪ್ರಭು ದುಂಡಯ್ಯ ಚೌಕಿಮಠ

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ 145ಕ್ಕೂ ಹೆಚ್ಚು ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆಯಲಿದೆ. ಜೆಡಿಎಸ್ ದ್ವಿತೀಯ ಮತ್ತು ಬಿಜೆಪಿ ಮೂರನೇ ಸ್ಥಾನ ಪಡೆಯಲಿದೆ ಎಂದು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಪ್ರಭು ದುಂಡಯ್ಯ ಚೌಕಿಮಠ ಭವಿಷ್ಯ ನುಡಿದಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಸ್.ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ ಮತ್ತು ಎಚ್.ಕೆ.ಪಾಟೀಲ ಅವರು 50 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಅವರು ತಿಳಿಸಿದರg. ಉತ್ತರ ಕರ್ನಾಟಕದಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ. ಬೀಳಗಿಯ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಟಿ.ಪಾಟೀಲ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ರಾಜಕೀಯ ಭವಿಷ್ಯ ನುಡಿದದರು.

ಬೀಳಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಸಿದ್ಧರಾಮೇಶ್ವರ ದೇವಸ್ಥಾನ ಹಾಗೂ ಕೂಡಲ ಸಂಗಮನಾಥನ ಆರಾಧಕರಾಗಿರುವ ಅವರು, ಯಾವುದೇ ಹೇಳಿಕೆ ನೀಡುವ ಮೊದಲು ಬೀಳಗಿ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ದೈವದ ಅನುಮತಿ ಪಡೆದು ರಾಜಕೀಯ ಭವಿಷ್ಯ ನುಡಿಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಮುಂಚೆಯಿಂದಲೂ ರಾಜಕೀಯ ಭವಿಷ್ಯ ನುಡಿಯುತ್ತ ಬಂದಿರುವ ಇವರ ಹೇಳಿಕೆಗಳು ನಿಜವಾಗುತ್ತಿರುವುದು ಗಮರ್ನಾಹವಾಗಿದೆ.

ದೈವಾರಾಧಕರಾಗಿರುವ ಪ್ರಭು ದುಂಡಯ್ಯ ಚೌಕಿಮಠ ಕಳೆದ ಸುಮಾರು 36ಕ್ಕೂ ಹೆಚ್ಚು ವರ್ಷಗಳಿಂದ ಅವರು ರಾಜಕೀಯ ಭವಿಷ್ಯ ನುಡಿಯುತ್ತಿದ್ದಾರೆ. ಅಲ್ಲದೇ, 1991ರಲ್ಲಿ ಸಿದ್ದು ನ್ಯಾಮಗೌಡ ಅವರು ರಾಮಕೃಷ್ಣ ಹೆಗಡೆ ಅವರು ವಿರುದ್ಧ 22 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ನಿಖರವಾಗಿ ನುಡಿದಿದ್ದ ಭವಿಷ್ಯ ನಿಜವಾಗಿರುವುದು ಇಂದಿಗೂ ಹಲವರು ಇದನ್ನು ಸ್ಮರಿಸುತ್ತಾರೆ.

ಈ ಹಿಂದೆಯೂ ಇವರು ನುಡಿದಿರುವ ರಾಜಕೀಯ ಭವಿಷ್ಯ ನಿಖರವಾಗಿರುವುದು ಮತದಾರರಲ್ಲಿ ಕುತೂಹಲ ಕೆರಳಿಸಿದೆ.

Leave a Reply

ಹೊಸ ಪೋಸ್ಟ್‌