ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ- ಲಿಂಗಾಯಿತರಿಗೆ ಸಿದ್ಧರಾಮಯ್ಯ ಅವಮಾನ ಮಾಡಿದ್ದಾರೆ- ಮಹಾ ಡಿಸಿಎಂ ದೇವೇಂದ್ರ ಫಡ್ನವೀಸ

ವಿಜಯಪುರ: ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಬಸವ ನಾಡು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. 

ಇಂಡಿ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಪರ ಪ್ರಚಾರ ನಡೆಸಿದ ಅವರು, ರಾಜ್ಯ ಮತ್ತು ಕೇಂದ್ರ ಸರಕಾರಗಳು ಕರ್ನಾಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿವೆ ಎಂದು ಹೇಳಿದರು.

ಇಂಡಿ ಮತಕ್ಷೇತ್ರಕ್ಕೆ ಬಿಜೆಪಿ ಸರಕಾರ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕೊಡುಗೆ ನೀಡಿದ್ದೆ.  ಈ ಮೂಲಕ ಈ ಭಾಗದ ಜನರಿಗೆ ನೀರಿನ ಸಮಸ್ಯೆ ನೀಗಲಿದೆ.  ಕಳೆದ ಬಾರಿ ಬಿಜೆಪಿಗೆ ಕಡಿಮೆ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದರು.  ಆದರೆ, ಈ ಬಾರಿ ಬಿಜೆಪಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿ ಕರ್ನಾಟಕದಲ್ಲಿ ಬಿಜೆಪಿ ಮತ್ತೋಮ್ಮೆ ಅಧಿಕಾರಕ್ಕೆ ಬರಲಿದೆ.  ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಹೇಳಿದರು.

ಕರ್ನಾಟಕ ಅಭಿವೃದ್ಧಿಯ ಮೂಲಕ ಮುಂದುವರೆಯುತ್ತಿದೆ.  ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಇಲ್ಲಿ ಆದಿವಾಸಿ, ಮಹಿಳೆಯರು, ಹಿಂದುಳಿದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಿವೆ.  ಸಾವಿರಾರು ಮನೆಗಳಿಗೆ ಕುಡಿಯಲು ನೀರು, ವಿದ್ಯುತ್, ಅಡುಗೆ ಅನಿಲವನ್ನು ಕೇಂದ್ರ ಸರಕಾರ ನೀಡಿದೆ.  ಇಂಡಿಯಲ್ಲಿ ಜಲ ಜೀವನ್ ಮಿಶನ್ ಮೂಲಕ ಮನೆ ಮನೆಗೆ ಗಂಗೆ ಹರಿದು ಬಂದಿದ್ದಾಳೆ.  ರಾಜ್ಯದಲ್ಲಿ 55 ಲಕ್ಷ ಜನರು ಕಿಸಾನ್ ಸಮ್ಮಾನ್ ಯೋಜನೆಯಡಿ ಲಾಭ ಪಡೆದಿದ್ದಾರೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.

ಇಂಡಿ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಪರ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ ಪ್ರಚಾರ ಕೈಗೊಂಡರು

ಕಾಂಗ್ರೆಸ್ ಗರಿಬಿ ಹಟಾವೂ ಎನ್ನುತ್ತಿತ್ತು.  ಆದರೆ, ಬಡತನ ಹೋಗಲಾಡಿಸಲಿಲ್ಲ.  ಡಬಲ್ ಎಂಜಿನ್ ಬಿಜೆಪಿ ಸರಕಾರ ಬಡತನ ನಿವಾರಣೆಗೆ ಕೆಲಸ ಮಾಡಿದೆ.  ಕಳೆದ ಒಂದು ದಶಕದಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ.  ಇಂಡಿ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ.  ಇಲ್ಲಿ ಭಾರತ ಜೋಡೊ ಯಾತ್ರೆಯೂ ಆಗಿಲ್ಲ.  ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿದೆ, ಎಂದು ಅವರು ಟೀಕಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಲಿಂಗಾಯತ ಸಿಎಂ ಗಳ ವಿರುದ್ಧ ಭ್ರಷ್ಟಾಚಾರ ಮಾಡಿರುವ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಲಿಂಗಾಯಿತ ಸಮಾಜ ದೊಡ್ಡ ಪರಂಪರೆಯನ್ನು ಹೊಂದಿದೆ.  ಈ ಸಮಾಜದ ವಿರುದ್ಧ ಅಪಮಾನ ಮಾಡಿರುವುದು ಸಿದ್ಧರಾಮಯ್ಯ ತಪ್ಪು ಮಾಡಿದ್ದಾರೆ.  ಅವರ ಹೇಳಿಕೆಯಿಂದ ಲಿಂಗಾಯಿತರ ಬಗ್ಗೆ ಅವರ ಹೊಂದಿರುವ ಮನಸ್ಥಿತಿ ವ್ಯಕ್ತವಾಗುತ್ತದೆ.  ಚುನಾವಣೆಯ ಮೊದಲು ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಚುನಾವಣೆ ನಂತರ ಅವರು ಇನ್ನು ಹೇಗೆ ವರ್ತಿಸಬಹುದು ಯೋಚಿಸಬೇಕು.

ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.  ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳಿಂದ ಮತದಾರರು ಸಂತುಷ್ಠರಾಗಿದ್ದಾರೆ.  ಬಿಜೆಪಿಗೆ ಇಲ್ಲಿನ ಮತದಾರರು ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.  ಇಂಡಿಯಲ್ಲಿ ನಾನು ಈಗ ಪ್ರಚಾರದಲ್ಲಿದ್ದು, ಇಂಡಿಯಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ಬಿಜೆಪಿ ಹೈಕಮಾಂಡ ಹೇಳಿದ ಕಡೆ ತೆರಳಿ ಪ್ರಚಾರ ಮಾಡುತ್ತೇನೆ.  ಎಲ್ಲ ಪಕ್ಷಗಳು ತಂತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕ ಮಾಡುತ್ತಿವೆ.  ಅದೇ ರೀತಿ ಹೈಕಮಾಂಡ ಹೇಳಿದರೆ ನಾನು ಬೆಳಗಾವಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಇಂಡಿ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ, ಮುಖಂಡರಾದ ಬಾಬುಗೌಡ ಬಿರಾದಾರ, ದಯಾಸಾಗರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌