ಚುನಾವಣೆ ಕಣದಿಂದ ಹಿಂದೆ ಸರಿದ ವಿಜಯಪುರ ನಗರ ಜೆಡಿಎಸ್ ಅಭ್ಯರ್ಥಿ- ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ ಬಿ. ಎಚ್. ಮಹಾಬರಿ
ವಿಜಯಪುರ: ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಭೇಟಿಗೂ ಒಂದು ದಿನ ಮುಂಚೆ ವಿಜಯಪುರ ಜಿಲ್ಲೆಯಲ್ಲಿ ಅಚ್ಚರಿ ಬೆಳವಣಿಗೆ ನಡೆದಿದೆ. ವಿಜಯಪುರ ನಗರ ಜೆಡಿಎಸ್ ಅಭ್ಯರ್ಥಿ ಬಿ. ಎಚ್. ಮಹಾಬರಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮಾಡಗಿ ಅವರಿಗೆ ನನ್ನ ಈ ನಿರ್ಧಾರವನ್ನು ತಿಳಿಸಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ಮಾಜಿ ಸಿಎಂ ಎಚ್. […]
ಎಂ. ಬಿ. ಪಾಟೀಲ ಬೆಂಬಲಿಸಿ ಚುಣಾವಣೆ ಕಣದಿಂದ ನಿವೃತ್ತಿ ಘೋಷಿಸಿದ ಬಬಲೇಶ್ವರ ಪಕ್ಷೇತರ ಅಭ್ಯರ್ಥಿ ದುಂಡಸಿ ಅಬ್ದುಲ್ ರಹಿಮಾನ ಮಹಮ್ಮದ ಹನೀಫ
ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರನ್ನು ಬೆಂಬಲಿಸಿ, ಬಬಲೇಶ್ವರ ಪಕ್ಷೇತರ ಅಭ್ಯರ್ಥಿ ದುಂಡಸಿ ಅಬ್ದುಲ್‍ರಹಿಮಾನ ಮಹಮ್ಮದ ಹನೀಫ್ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಅವರು, ನಾನು ಬಬಲೇಶ್ವರ ಮತಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿದಾಗ ಅಲ್ಲಿನ ಮತದಾರರು ಎಂ. ಬಿ. ಪಾಟೀಲ ಅವರ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಕೂಡ ಅವರನ್ನು ಬೆಂಬಲಿಸಿ ಚುನಾವಣೆ ಕಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮುಂದೆ ನಾನು ಕಾಂಗ್ರೆಸ್‍ನ್ನು […]
ಸ್ವೀಪ್ ಸಮಿತಿಯಿಂದ ನಾನಾ ಮತದಾನ ಜಾಗೃತಿ: ಕಲಾತ್ಮಕ ಚಿತ್ರದಲ್ಲಿ ಅರಳಿದ ಮತದಾನದ ಮಹತ್ವ
ವಿಜಯಪುರ: ಸ್ವೀಪ್ ಸಮಿತಿ ವತಿಯಿಂದ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸಿ, ಮತದಾನದ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಕಲಾತ್ಮಕ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ನೂತನವಾರಿ ಹೆಸರು ಸೇರ್ಪಡೆ ಹೊಂದಿ ಯುವ ಮತದಾರರು, ಮಹಿಳೆಯರು ಭಾಗವಹಿಸಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು. ತಾಲೂಕು ಪಂಚಾಯತಿಯ ಐಇಸಿ ಸಂಯೋಜಕ ಶಾಂತಪ್ಪ ಇಂಡಿ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ […]
ನಾಗಠಾಣ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಪ್ರಚಾರ
ವಿಜಯಪುರ: ನಾಗಠಾಣ ಜೆಡಿಎಸ್ ಅಭ್ರ್ಥಿ ದೇವಾನಂದ ಚವ್ಹಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ತಾಲೂಕಿನ ಹೇಗಡಿಹಾಳ, ಉಕುಮನಾಳ, ಕತಕನಹಳ್ಳಿ, ಹಾಲಹಳ್ಳಿ, ಶಿರಾಡೋಣ, ರೇವತಗಾಂವ, ದಸೂರ, ಉಮರಜ, ಗೋವಿಂದಪೂರ, ನಿವರಗಿ, ಹೊಳಿಸಂಖ, ಹತ್ತಳ್ಳಿ, ಹಾವಿನಾಳ, ಗೋಡಿಹಾಳ, ಬರಡೋಲ, ಬರಡೋಲ ತಾಂಡಾ, ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐದು ವರ್ಷಗಳಿಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ನಾಗಠಾಣ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಅಭಿವೃದ್ಧಿ ಯೋಜನೆಗಳು ತಲುಪಿವೆ ಎಂದು ಹೇಳಿದರು. ಎಚ್. ಡಿ. ಕುಮಾರಸ್ವಾಮಿ ಅಧಿಕಾರಕ್ಕೆ […]
ಜಾತ್ಯತೀತ, ಪಕ್ಷಾತೀತವಾಗಿ ಕೆಲಸ ಮಾಡಿರುವ ಎಂ. ಬಿ. ಪಾಟೀಲರನ್ನು ಕೆಲಸ ಪರಿಗಣಿಸಿ ಮತಹಾಕಿ- ಆಶಾ ಎಂ. ಪಾಟೀಲ
ವಿಜಯಪುರ 29: ಎಂ. ಬಿ. ಪಾಟೀಲರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಕೆಲಸಗಳನ್ನು ಪರಿಗಣಿಸಿ ಮತ ಹಾಕಬೇಕು ಎಂದು ಆಶಾ ಎಂ. ಪಾಟೀಲ ಕರೆ ನೀಡಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ವಿರೋಧಿಗಳಲ್ಲಿ ಈಗ ಪ್ರಸ್ಥಾಪಿಸಲು ಯಾವುದೇ ವಿಷಯಗಳಿಲ್ಲ. ಎಲ್ಲ ಅಸ್ತ್ರಗಳು ಮುಗಿದಿರುವ ಹಿನ್ನಲೆಯಲ್ಲಿ ಅಳುವ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ. ಕಳೆದ ಮೂರು […]
80 ವರ್ಷ ಮೇಲ್ಪಟ್ಟ ಮತದಾರರ ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ
ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭೆ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 38727 ಮತದಾರರು, 20273 ವಿಶೇಷಚೇತನ ಮತದಾರರಿಗೆ ಏ. 29 ರಿಂದ ಮೇ 1ರ ವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 80 ವರ್ಷ […]