ಸ್ವೀಪ್ ಸಮಿತಿಯಿಂದ ನಾನಾ ಮತದಾನ ಜಾಗೃತಿ: ಕಲಾತ್ಮಕ ಚಿತ್ರದಲ್ಲಿ ಅರಳಿದ ಮತದಾನದ ಮಹತ್ವ

ವಿಜಯಪುರ: ಸ್ವೀಪ್ ಸಮಿತಿ ವತಿಯಿಂದ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸಿ, ಮತದಾನದ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಕಲಾತ್ಮಕ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ನೂತನವಾರಿ ಹೆಸರು ಸೇರ್ಪಡೆ ಹೊಂದಿ ಯುವ ಮತದಾರರು, ಮಹಿಳೆಯರು ಭಾಗವಹಿಸಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ತಾಲೂಕು ಪಂಚಾಯತಿಯ ಐಇಸಿ ಸಂಯೋಜಕ ಶಾಂತಪ್ಪ ಇಂಡಿ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬ ಅರ್ಹ ಮತದಾರರು  ಕಡ್ಡಾಯವಾಗಿ ಮತಚಲಾಯಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಾದ ಶ್ರೀಮತಿ ಸುನೀತಾ ಪಾಟೀಲ್, ಶ್ರೀಮತಿ ಮಹದೇವಿ ಚಿಕ್ಕಲಕಿ, ಶ್ರೀಮತಿ ಸವಿತಾ ವಸಟ್ಟಿ, ವಿಶಾಲ ಹಳ್ಳದ,  ಭಾಗ್ಯಶ್ರೀ ಪತ್ತಾರ ಇತರರು ಉಪಸ್ಥಿತರಿದ್ದರು.

ನಿಡಗುಂದಿಯಲ್ಲಿ ಕಾರ್ಯಕ್ರಮ

ತಾಲೂಕಿನ ಯಲಗೂರ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಯಲಗೂರು ಗ್ರಾಮ ಪಂಚಾಯಿತಿ ವತಿಯಿಂದ ದಿನಾಂಕ: ೨೯.೦೪.೨೦೨೩ರಂದು ಮತದಾನದ ಜಾಗೃತಿ ಅಂಗವಾಗಿ ಮೆಣದಬತ್ತಿ ಜಾಥಾ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಜೀಜ್ ಬಾರೇ ಇಮಾಮ್ ಮಾತನಾಡಿ ಬರುವ ಮೇ-೧೦ ರಂದು ಜರುಗುವ ಮತದಾನದಂದು ಪ್ರತಿಯೊಬ್ಬರೂ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಯಾವದೇ ಆಮಿಷಕ್ಕೆ ಒಳಗಾಗದೇ ಮತವನ್ನು ಚಲಾಯಿಸಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಗ್ರಾಮದ ಮಾರುತಿ ದೇವಸ್ಥಾನ ಪಾದಗಟ್ಟೆಯ ಸರ್ಕಲ್ನಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂಬ ವ್ಯಾಕ್ಯ ರಚಿಸಿ ಮತದಾನ ಜಾಗೃತಿ ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು. ನಂತರ, ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಪ್ರತಿಜ್ಞೆಯನ್ನು ತಾಲೂಕು ಐಇಸಿ ಸಂಯೋಜಕರಾದ ದಸ್ತಗೀರ್ ಗುಡಿಹಾಳ ಅವರು ಭೋಧಿಸಿದರು.

ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕರಾದ ದಸ್ತಗೀರ್ ಗುಡಿಹಾಳ, ಬಿಲ್ ಕಲೆಕ್ಟರ್ ಶಿವಾನಂದ ಆರ್.ನಾಯಕ, ಡಿಇಒ ಮಲ್ಲಯ್ಯ ಹಿರೇಮಠ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಿಡಗುಂದಿ ಪಟ್ಟಣದ ವಾರದ ಸಂತೆಯಲ್ಲಿ ತಾಲ್ಲೂಕು ಪಂಚಾಯತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಕರಪತ್ರ ವಿತರಣೆ ಅಭಿಯಾನ ಆಯೋಜಿಸಲಾಯಿತು.

ಸಂತೆಗೆ ಬಂದ ಜನರಿಗೆ ಮತದಾನ ಜಾಗೃತಿಯ ಕರಪತ್ರ ನೀಡಿ ಮತದಾನದ ಅರಿವು ಮೂಡಿಸಲಾಯಿತು. ಮತದಾನ ಜಾಗೃತಿಯ ಕರಪತ್ರಗಳನ್ನು ಹಿಡಿದು ಜಾಗೃತಿ ಗೀತೆಗಳೊಂದಿಗೆ ವಾರದ ಸಂತೆ ಹಾದಿಯಲ್ಲಿ ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕರು ( ಪಂ.ರಾ) ಎಸ್.ಜೆ.ಉದಯಕುಮಾರ್ ಹಾಗೂ ಬಿ.ಎಂ.ಅAಕದ ಪ್ರಭಾರ ಸಹಾಯಕ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.

ಸಂತೆಗೆ ಬಂದ ಜನರಿಗೆ ಮೇ.೧೦ ರಂದು ನಡೆಯುವ ಚುನಾವಣೆಯಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೇ. ತಪ್ಪದೇ ಮತ ಚಲಾಯಿಸಿ, ನಿಮ್ಮ ಮತ ಅಮೂಲ್ಯ. ಓಟ ಮಾಡಿದವನೇ ಹೀರೋ. ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಿ ಎಂದು ಸೇರಿದ ಜನರಲ್ಲಿ ಅಧಿಕಾರಿಗಳು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಗಂಗಾಧರ ಕರಡಿ, ಶ್ರೀಮತಿ ಸವಿತಾ ಬಿರಾದಾರ, ತಾಲ್ಲೂಕು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಸಂಯೋಜಕರಾದ ದಸ್ತಗೀರ್ ಗುಡಿಹಾಳ, ತಾಲೂಕು ಪಂಚಾಯತಿ ಸಿಬ್ಬಂದಿಗಳಾದ ಜಾಫರ್ ಸಾಲಿಮನಿ, ಸರಸ್ವತಿ ಸಜ್ಜನ, ಸುರೇಶ್ ವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌