ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರನ್ನು ಬೆಂಬಲಿಸಿ, ಬಬಲೇಶ್ವರ ಪಕ್ಷೇತರ ಅಭ್ಯರ್ಥಿ ದುಂಡಸಿ ಅಬ್ದುಲ್‍ರಹಿಮಾನ ಮಹಮ್ಮದ ಹನೀಫ್ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಅವರು, ನಾನು ಬಬಲೇಶ್ವರ ಮತಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿದಾಗ ಅಲ್ಲಿನ ಮತದಾರರು ಎಂ. ಬಿ. ಪಾಟೀಲ ಅವರ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಕೂಡ ಅವರನ್ನು ಬೆಂಬಲಿಸಿ ಚುನಾವಣೆ ಕಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮುಂದೆ ನಾನು ಕಾಂಗ್ರೆಸ್‍ನ್ನು ಬೆಂಬಲಿಸುತ್ತೇನೆ. ಅಲ್ಲದೇ, ನನ್ನ ಬೆಂಬಲಿಗರು ಕೂಡಾ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.