ವಿಜಯಪುರ 29: ಎಂ. ಬಿ. ಪಾಟೀಲರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಕೆಲಸಗಳನ್ನು ಪರಿಗಣಿಸಿ ಮತ ಹಾಕಬೇಕು ಎಂದು ಆಶಾ ಎಂ. ಪಾಟೀಲ ಕರೆ ನೀಡಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ವಿರೋಧಿಗಳಲ್ಲಿ ಈಗ ಪ್ರಸ್ಥಾಪಿಸಲು ಯಾವುದೇ ವಿಷಯಗಳಿಲ್ಲ. ಎಲ್ಲ ಅಸ್ತ್ರಗಳು ಮುಗಿದಿರುವ ಹಿನ್ನಲೆಯಲ್ಲಿ ಅಳುವ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಗುಂಡಾಗಿರಿ ನಡೆಸಿದರು. ಅದು ವರ್ಕೌಟ್ ಆಗದ ಕಾರಣ ಈಗ ಅಳುವ ತಂತ್ರ ಅನುಸರಿಸುತ್ತಿದ್ದಾರೆ. ಇದು ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.
ಎಂ. ಬಿ. ಪಾಟೀಲರು ಕೆಲಸದ ತೀವ್ರ ಒತ್ತಡದ ನಡೆವೆಯೂ ಸಾಮಥ್ರ್ಯ ಮೀರಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತ ಮತಕ್ಷೇತ್ರದ ಜನರ ಬದುಕು ಬಂಗಾರವಾಗಿಸಲು ಶ್ರಮ ಪಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಬೇಕು. ಈ ಮೂಲಕ ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವಾಗಲು ಕೈಜೋಡಿಸಬೇಕು ಎಂದು ಆಶಾ ಎಂ. ಪಾಟೀಲ ಹೇಳಿದರು.
ಮುಖಂಡರಾದ ಯಲ್ಲಾಲಿಂಗ ಹೊನವಾಡ, ಪ್ರಕಾಶ ಆಯತವಾಡ ಮತ್ತು ರಾವಸಾಬ ಬಿರಾದಾರ ಮಾತನಾಡಿ ಕಾಂಗ್ರೆಸ್ಸಿಗರು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಸೇರಿ ಎಂ. ಬಿ. ಪಾಟೀಲರನ್ನು ರಾಜ್ಯದಲ್ಲಿಯೇ ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಉನ್ನತ ಸ್ಥಾನಕ್ಕೇರಿಸುತ್ತೇವೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ರಾವಸಾಬ ಬಿರಾದಾರ, ಪಾರೀಶ ಆಯತವಾಡ, ಸಿದ್ದಗೊಂಡ ರುದ್ರಗೌಡರ, ಭಾಗರಥಿ ತೇಲಿ, ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ಸುನಿತಾ ನೂಲಿ, ಪ್ರತಿಭಾ ಪಾಟೀಲ, ಯಲ್ಲಪ್ಪ ಹೊನಕಟ್ಟಿ, ಕರೀಂ ಏಳಾಪುರ, ಪ್ರಭಾವತಿ ನಾಟಿಕಾರ, ಶಂಕರಗೌಡ ಬಿರಾದಾರ, ಜ್ಯೋತಿ ಅಯತವಾಡ, ಅನೀಲ ಕಾಂಬಳೆ, ಸಂಗಯ್ಯಸ್ವಾಮಿ, ಕಾಶಿರಾಯ ಡೆಂಗೆನವರ, ಕಸ್ತೂರಿ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.