ವಿಜಯಪುರ: ಎಂ. ಬಿ. ಪಾಟೀಲರು ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ಮತಕ್ಷೇತ್ರದ ಹಂಚನಾಳ ಎಲ್.ಟಿ.-1, ಎಲ್.ಟಿ.-2, ಎಲ್.ಟಿ.-3, ಹಂಚನಾಳ ಪಿ.ಎಚ್. ಗ್ರಾಮ, ಬರಟಗಿ ಎಲ್.ಟಿ.-3 ಮತ್ತು ಎಲ್.ಟಿ.-3 ಬಿ ಗಳಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಪರ ಮತಯಾಚಿಸಿ ಅವರು ಮಾತನಾಡಿದರು.
ಜಲಸಂಪನ್ಮೂಲ ಸಚಿವರಾಗಿ ಮತ್ತು ಶಾಸಕರಾಗಿ ಎಂ. ಬಿ. ಪಾಟೀಲರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತಾಪಿ ಮತ್ತು ಶ್ರಮಿಕರು ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ. ಸರ್ವ ಜನರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ ಪೂರ್ಣಗೊಳಿಸಿದ್ದಾರೆ. ಜಾತ್ಯತೀತ ಮತ್ತು ಧರ್ಮಾತೀತವಾಗಿ ಕೆಲಸ ಮಾಡಿದ್ದಾರೆ. ಈಗ ಸಮುದಾಯ ಸ್ಥಳೀಯವಾಗಿ ಕಾಯಕ ಮಾಡಲು ಅನುಕೂಲವಾಗಿದೆ. ಅಷ್ಟೇ ಅಲ್ಲ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಕುಡಿಯಲು ನೀರು ಪೂರೈಕೆ, ಶಾಲಾ ಕಟ್ಟಡಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಿ.ಸಿ ರಸ್ತೆ ಹಾಗೂ ನೀರಾವರಿ ಮಾಡುವ ಮೂಲಕ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.
ಲಂಬಾಣಿ ಉಡುಪುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಒದಗಿಸಲು ಎಂ. ಬಿ. ಪಾಟೀಲರು ಯೋಜನೆ ರೂಪಿಸಿದ್ದಾರೆ. ಇದರಿಂದ ಈ ಉಡುಪುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಮುದಾಯದ ಜನರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಅಂಗನವಾಡಿ ಕಾರ್ಯಕರ್ತ ಗೌರವ ಧನ ಹೆಚ್ಚಳಗಳಂಥ ಗ್ಯಾರಂಟಿ ಸ್ಕೀಂ ಗಳ ಮೂಲಕ ಡಬಲ್ ಎಂಜಿನ್ ಬಿಜೆಪಿ ಸರಕಾರಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಸಮ್ಯಸೆಗಳಿಗೆ ಪರಿಹಾರ ಒದಗಿಸಲಿವೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಪಾಟೀಲ, ನೀಲು ನಾಯಕ, ಬಿ.ಜಿ.ಪಾಟೀಲ, ಸಂಗಮೇಶಗೌಡ ದಾಶ್ಯಾಳ, ಪದ್ದು ಚವ್ಹಾಣ, ರವಿ ಚವ್ಹಾಣ, ಮಿಟ್ಟು ಚವ್ಹಾಣ, ಸಂಗೀತಾ ಅಶೋಕ ರಾಠೋಡ, ಸೋಮು ಚವ್ಹಾಣ, ಶ್ರೀಕಾಂತ ಬಿರಾದಾರ, ಹುನ್ನು ನಾಯಕ, ಗುರುಪಾದಪ್ಪ ದಾಶ್ಯಾಳ, ಸಿದ್ದಪ್ಪ ಸಜ್ಜನ, ದಯಾನಂದ ಜೋರಾಪುರ, ಆನಂದ ತಮಗೊಂಡ, ರೇವಣಸಿದ್ದ ತಮಗೊಂಡ, ಬಾಳಪ್ಪ ಹಚಡದ, ಜೇಮಲು ರಜಪೂತ, ದೇವೂ ರಜಪೂತ, ಶ್ರೀಕಾಂತ ಜಾಧವ, ಕವಿತಾ ರಜಪೂತ, ವಿಜಯ ರಜಪೂತ, ಅಶೋಕ ರಾಠೋಡ, ಸುರೇಶ ರಜಪೂತ, ಕಿಟ್ಟು ರಾಠೋಡ ಮುಂತಾದವರು ಉಪಸ್ಥಿತರಿದ್ದರು.