ವಿಧಾನಸಭೆ ಚುನಾವಣೆ: ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಜಿ. ಪಂ. ಸಿಇಒ ರಾಹುಲ ಶಿಂಧೆ

ವಿಜಯಪುರ: ಕಳೆದ ಚುನಾವಣೆಗಿಂತ ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಸಂಚರಿಸುವ ಬಸ್‌ಗಳಿಗೆ ಮತದಾನ ಜಾಗೃತಿ ಸ್ವೀಕರ್ಸ್ಗಳನ್ನು ಅಂಟಿಸುವುದು, ಬಸ್ ನಿಲ್ದಾಣದಲ್ಲಿ ಸೇಲ್ಪಿ ಸ್ಟ್ಯಾಂಡ್ ಅಳವಡಿಸಿ, ಕರ ಪತ್ರ ಹಂಚಿ, ಜಾಗೃತಿ ಗೀತೆಗಳನ್ನು ಹಾಡಿ, ಮತದಾನದ ಮಹತ್ವವುಳ್ಳ ಘೋಷಣೆಗಳನ್ನು ಕೂಗಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ಮೇ.೧೦ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ಬಲವರ್ಧನೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕ ಬಸ್ಸುಗಳಿಗೆ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಳೆದ ಹಲವು ದಿನಗಳಿಂದ ಜಿಲ್ಲೆಯ ಎಲ್ಲ ಗ್ರಾಮದಲ್ಲಿ ಪ್ರತಿ ನಿತ್ಯ ತಾಲೂಕು ಸ್ವೀಪ್ ಸಮಿತಿ ಮತ್ತು ಗ್ರಾಮ ಪಂಚಾಯತಿ ಮಟ್ಟದ ಸ್ವೀಪ್ ಸಮಿತಿಗಳ ವತಿಯಿಂದ ಮತದಾನ ಜಾಗೃತಿ ಕುರಿತು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಅಭಿಯಾನದ ಭಾಗವಾಗಿ ಜಾಗೃತಿ ಜಾಥಾ, ಮನೆ-ಮನೆಗೆ ಭೇಟಿ, ಎತ್ತಿನ ಗಾಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ, ಮೆಹಂದಿ ಸ್ಪರ್ಧೆ, ವಿಶೇಷಚೇತನರ ಬೈಕ್ ಜಾಥಾ, ಮಕ್ಕಳಿಂದ ಪಾಲಕರಿಗೆ ಮನವಿ ಪತ್ರ, ಮತದಾನ ಆಮಂತ್ರಣ ಪತ್ರಿಕೆ ಹೀಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಇಂದು ಸಹ  ಎಲ್ಲ ಸರಕಾರಿ ಬಸ್ ಗಳಿಗೆ ಮತದಾನ ಜಾಗೃತಿ ಸ್ಟೀಕರ್ಸ್ ಅಂಟಿಸುವ ಮೂಲಕ ಪ್ರತಿ ಹಳ್ಳಿ-ಹಳ್ಳಿಗೂ ಮತದಾನದ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾರರು ಸಹ ಉತ್ತಮವಾಗಿ ಪ್ರತಿಕ್ರಿಯೆ ನೀಡುವುದನ್ನು ಗಮನಿಸಿದಾಗ ಈ ಸಲ ಮತದಾರರು ಅತಿ  ಉತ್ಸಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಾದ್ಯಂತ ತಮ್ಮ ಮತವನ್ನು ಚಲಾಯಿಸಲಿದ್ದಾರೆ ಎಂದು ಹೇಳಿದರು.

ಬಸ್ ಏರಿ ಮತದಾನ ಕರ ಪತ್ರ ಹಂಚಿದ ಸಿಇಓÄ:  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗ ರಾಹುಲ್ ಶಿಂಧೆ ಅವರು ಬಸ್ ಏರಿ ಬಸ್ಸಿನೊಳಗಿದ್ದ ಜನರಿಗೆ ಮತದಾನ ಕುರಿತು ಪ್ರಶ್ನೆಗಳನ್ನು ಕೇಳಿ, ಅವರಿಂದ ಉತ್ತರ ಪಡೆದುಕೊಂಡು ನಂತರ ಅವರಿಗೆ ಜಾಗೃತಿಯ ಕರಪತ್ರ ನೀಡಿ, ಮೇ-೧೦ಕ್ಕೆ ಕಡ್ಡಾಯವಾಗಿ ಮತದಾನ ಮಾಡುವಂತೆ  ಮನವಿ ಮಾಡಿಕೊಂಡ ಅವರು, ಬಸ್ ನಿಲ್ದಾಣದಲ್ಲಿ ಕಾಲೇಜ ವಿಧ್ಯಾರ್ಥಿಗಳತ್ತ ಹೋಗಿ, ವಿದ್ಯಾರ್ಥಿಗಳಲ್ಲಿ ಮತದಾನ ಮಹತ್ವ ತಿಳಿಸಿ, ಸ್ವತಃ ತಾವೇ ಕರಪತ್ರಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀ ನಿಂಗಪ್ಪ ಗೋಠೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಮ್.ಎ.ಮುಲ್ಲಾ, ಸಾರಿಗೆ ಅಧಿಕಾರಿ ಎಮ್.ಎಸ್.ಹಿರೇಮಠ,  ಜೆ.ಕೆ.ಹುಗ್ಗೆಣ್ಣವರ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಎ.ಬಿ.ಅಲ್ಲಾಪುರ, ಸೇರಿದಂತೆ ಘಟಕದ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ಚಾಲಕ-ನಿರ್ವಾಹಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌