ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿಯಿದೆ- ಮತದಾರರ ಮೇಲೆ ನಂಬಿಕೆಯಿದೆ- ಗೆಲ್ಲುವ ವಿಶ್ವಾಸವಿದೆ- ಎಂ. ಬಿ. ಪಾಟೀಲ
ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಸಂತೃಪ್ತಿ ಇದೆ. ಮತದಾರರ ಮೇಲೆ ಪೂರ್ಣ ನಂಬಿಕೆ ಇದೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ಇಂದು ತಿಕೋಟಾದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು ಮತದಾರರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ನೀಡಿದರೆ ಇನ್ನೂ 10 ಪಟ್ಟು ಹೆಚ್ಚಾಗಿ ಕೆಲಸ ಮಾಡುತ್ತೇನೆ. ಈವರೆಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಹಕ್ಕಿನಿಂದ ಮತ ಕೇಳುತ್ತಿದ್ದೇನೆ. ನಂದನವನವಾಗಿರುವ ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು […]
ಈ ಚುನಾವಣೆ ಹಿಂದುತ್ವ, ಅಭಿವೃದ್ಧಿ, ಸ್ವಾಭಿಮಾನದ ಮೇಲೆ ನಡೆಯುತ್ತಿದೆ- ಕನಿಷ್ಠ ಶೇ. 90ರಷ್ಟು ಮತದಾನ ಮಾಡಬೇಕು- ಯತ್ನಾಳ
ವಿಜಯಪುರ: ಈ ಚುನಾವಣೆ ಹಿಂದುತ್ವ, ಅಭಿವೃದ್ಧಿ, ಸ್ವಾಭಿಮಾನದ ಮೇಲೆ ನಡೆಯುತ್ತಿದೆ. ಕನಿಷ್ಠ ಶೇ. 90 ರಷ್ಟು ಮತದಾನ ಮಾಡುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ರೋಡ್ ಶೋ ದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಹಿಂದುತ್ವ ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ಆದರೆ, ಯಾವ ಕಾರಣಕ್ಕೂ ಅವರ ಉದ್ದೇಶ ಈಡೇರಲು ಸಾಧ್ಯವಿಲ್ಲ. ನಮ್ಮವರು ಕೂಡ ಒಂದಾಗಿದ್ದಾರೆ ಎಂದು ಅವರು ತಿಳಿಸಿದರು. ಐದು ವರ್ಷ ಅಧಿಕಾರ ಕೊಟ್ಟಿದ್ದೀರಿ. ಮಹಾಮಾರಿ ಕೊರೊನಾದಿಂದ ಎರಡು ವರ್ಷ […]
ಎಸ್. ಯು. ಸಿ. ಐ ಅಭ್ಯರ್ಥಿಯಿಂದ ಗುಮ್ಮಟ ನಗರಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ
ವಿಜಯಪುರ: ಎಸ್. ಯು. ಸಿ. ಐ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್. ಟಿ. ಅವರು ಚುನಾವಣೆ ಬಹಿರಂಗ ಸಭೆಯ ಕೊನೆಯ ದಿನ ನಗರದ ಪ್ರಮುಖ ರಸ್ತೆಗಳು ಮತ್ತು ಪ್ರಮುಖ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ವಿಜಯಪುರ ನಗರದ ಜಲನಗರ, ಕಿರ್ತಿನಗರ, ಶ್ರೀ ಸಿದ್ದೇಶ್ವರ ರಸ್ತೆ, ತೊರವಿ ರಸ್ತೆ, ಸ್ಟೇಷನ್ ರಸ್ತೆ, ಬಾಗಲಕೋಟ ರಸ್ತೆ, ಜುಮ್ಮಾ ಮಸೀದಿ ರಸ್ತೆಗಳಲ್ಲಿ ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ರೋಡ್ ಶೋ ಮಾಡಿದ ಅವರು ಮತಯಾಚನೆ ನಡೆಸಿದರು. ಈ […]
ಮತದಾರರ ಆಶೀರ್ವಾದದಿಂದ ಬಬಲೇಶ್ವರ ಮತಕ್ಷೇತ್ರದಲ್ಲಿ ಹುಲ್ಲು ಬೆಳೆಯದ ಜಾಗದಲ್ಲಿ ಕಬ್ಬು ಬೆಳೆಯಲಾಗುತ್ತಿದೆ- ಆಶಾ ಎಂ. ಪಾಟೀಲ
ವಿಜಯಪುರ: ಜನರ ಆಶೀರ್ವಾದದಿಂದ ಬಬಲೇಶ್ವರ ಮತಕ್ಷೇತ್ರದ ಹುಲ್ಲು ಬೆಳೆಯದ ಜಾಗದಲ್ಲಿಯೂ ಈಗ ಕಬ್ಬು ಕಾಣಿಸುತ್ತಿದೆ ಎಂದು ಆಶಾ ಎಂ. ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಅವರು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಮಾತನಾಡಿದರು. ಕ್ಷೇತ್ರದ ಮತದಾರರು ಎಂ. ಬಿ. ಪಾಟೀಲರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಅವರು ಶಾಸಕರಷ್ಟೇ ಅಲ್ಲ, ನೀರಾವರಿ ಮಂತ್ರಿಯೂ ಆಗಿದ್ದಾರೆ. ಅವರು ಕೈಗೊಂಡ ಯೋಜನೆಗಳಿಂದ ನಿಮ್ಮ […]
ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ದ: ಮೇ 10ರಂದು ಮತದಾನ- ಜಿಲ್ಲೆಯ 8 ಕ್ಷೇತ್ರದಲ್ಲಿ 95 ಅಭ್ಯರ್ಥಿಗಳು ಕಣದಲ್ಲಿ
ವಿಜಯಪುರ: ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೇ.10ರಂದು ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸುಭದ್ರವಾದ ಸರ್ಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತವು ಅಮೂಲ್ಯವಾಗಿರುವುದರಿಂದ ಜಿಲ್ಲೆಯ ಅರ್ಹ ಎಲ್ಲ ಮತದಾರರು ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಮತ ಚಲಾಯಿಸುಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲ್ಲಿಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಿದ್ಧತಾ ಕಾರ್ಯಗಳ ಬಗ್ಗೆ ವಿವರ […]
ನಾಗಠಾಣ ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ ಚವ್ಹಾಣ, ವಿರಾಜ ರವಿಕಾಂತ ಪಾಟೀಲರಿಂದ ಮತಕ್ಷೇತ್ರದ ನಾನಾ ಕಡೆ ಪ್ರಚಾರ
ವಿಜಯಪುರ: ನಾಗಠಾಣ(ಮೀ) ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ ಚವ್ಹಾಣ ಮತ್ತು ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಪುತ್ರ ವಿರಾಜ ರವಿಕಾಂತ ಪಾಟೀಲ ಮತಕ್ಷೇತ್ರದ ನಾನಾ ಕಡೆಗಳಲ್ಲಿ ಪ್ರಚಾರ ಕೈಗೊಂಡರು. ಇಂಚಗೇರಿ, ಇಂಚಗೇರಿ ಮಹಾವೀರ ನಗರ, ಕನ್ನೂರ, ಶಿಕಾರಖಾನೆ, ಹಲಸಂಗಿ ಗ್ರಾಮಗಳಲ್ಲಿ ಬೈಕ್ ನಲ್ಲಿ ಸಂಚರಿಸುತ್ತ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಅವರ ಉನ್ನತ ಶಿಕ್ಷಣಕ್ಕಾಗಿ ಮರಗೂರ, ನಾಗಠಾಣ ಗ್ರಾಮಗಳಲ್ಲಿ ಮುರಾರ್ಜಿ ದೇಸಾಯಿ ಶಾಲೆ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ […]
ಹಮೀದ್ ಮುಶ್ರಿಫ್ ಪರ ವಿಜಯಪುರ ನಗರದ ಮತಕ್ಷೇತ್ರದಲ್ಲಿ ಎಂ. ಬಿ. ಪಾಟೀಲ ಪ್ರಚಾರ
ವಿಜಯಪುರ: ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಿ ಅಭ್ಯರ್ಥಿಗಳ ಗೆಲುವಿಗೆ ಹಗಲು ರಾತ್ರಿ ಶ್ರಮಿಸಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ. ವಿಜಯಪುರ ನಗರ ಮತಕ್ಷೇತ್ರದ ಆದರ್ಶ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುಶ್ರಿಫ್ ಪರ ಪಾದಯಾತ್ರೆ ಮೂಲಕ ಪ್ರಚಾರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಾದಷ್ಟು ಮತದಾರರನ್ನು ಭೇಟಿ ಮಾಡಬೇಕು. ಮತದಾನ ಪ್ರಮಾಣ ಹೆಚ್ಚಾಗುವಂತೆ […]