ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ದ: ಮೇ 10ರಂದು ಮತದಾನ- ಜಿಲ್ಲೆಯ 8 ಕ್ಷೇತ್ರದಲ್ಲಿ 95 ಅಭ್ಯರ್ಥಿಗಳು ಕಣದಲ್ಲಿ

ವಿಜಯಪುರ: ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೇ.10ರಂದು ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸುಭದ್ರವಾದ ಸರ್ಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತವು ಅಮೂಲ್ಯವಾಗಿರುವುದರಿಂದ  ಜಿಲ್ಲೆಯ ಅರ್ಹ ಎಲ್ಲ ಮತದಾರರು ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಮತ ಚಲಾಯಿಸುಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲ್ಲಿಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಿದ್ಧತಾ ಕಾರ್ಯಗಳ ಬಗ್ಗೆ ವಿವರ ನೀಡಲು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಇದೇ ಮೇ.10 ರಂದು ನಡೆಯುವ ಮತದಾನ ಹಾಗೂ ಮೇ.13 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿದ್ದು, ಈ ಪೈಕಿ 7 ಸಾಮಾನ್ಯ ಹಾಗೂ 1 ಪರಿಶಿಷ್ಟ ಜಾತಿ(ಎಸ್.ಸಿ) ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 40 ಸಖಿ ಮತಗಟ್ಟೆ, 8 ವಿಶೇಷಚೇತನರ ಮತಗಟ್ಟೆ, 8 ಯುವ ಮತದಾರರ ಮತಗಟ್ಟೆ ಹಾಗೂ 8 ವಿಷಯಾಧಾರಿತ ಮತಗಟ್ಟೆ ಒಟ್ಟು 2072 ಹಾಗೂ 6 ಹೆಚ್ಚುವರಿ ಸೇರಿದಂತೆ 2078 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಲ್ಲಿ 95 ಅಭ್ಯರ್ಥಿಗಳು ಕಣದಲ್ಲಿದ್ದು 9,66,535 ಪುರುಷ, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ 18,92,852 ಮತದಾರರಿದ್ದಾರೆ ಎಂದು ಹೇಳಿದರು.

95 ಅಭ್ಯರ್ಥಿಗಳು ಅಂತಿಮ ಕಣದಲ್ಲಿ : ವಿಧಾನಸಭಾವಾರು ವಿವರದಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 08, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 13, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 13, ಬಬಲೇಶ್ವರ ಮತಕ್ಷೇತ್ರದಲ್ಲಿ 14, ಬಿಜಾಪುರ ನಗರ ಮತಕ್ಷೇತ್ರದಲ್ಲಿ 14, ನಾಗಠಾಣ ಮತಕ್ಷೇತ್ರದಲ್ಲಿ 15, ಇಂಡಿ ಮತಕ್ಷೇತ್ರದಲ್ಲಿ 09 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 09 ಅಭ್ಯರ್ಥಿಗಳು ಸೇರಿದಂತೆ ಅಂತಿಮವಾಗಿ ಕಣದಲ್ಲಿ 95 ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದರು.

18,92,852 ಮತದಾರರು : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರವಾರು ಮತದಾರರ ವಿವರದಂತೆ À ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ  1,10,091 ಪುರುಷ, 1,06,897 ಮಹಿಳಾ, 21 ಇತರೆ ಸೇರಿದಂತೆ 2,17,009 ಮತದಾರರಿದ್ದಾರೆ.           27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1,10,091 ಪುರುಷ, 1,06,402 ಮಹಿಳಾ, 20 ಇತರೆ ಸೇರಿದಂತೆ 2,19,131 ಮತದಾರರಿದ್ದಾರೆ.

28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,07,003 ಪುರುಷ, 1,02,799 ಮಹಿಳಾ, 12 ಇತರೆ ಸೇರಿದಂತೆ 2,09,814 ಮತದಾರರಿದ್ದಾರೆ.       29-ಬಬಲೇಶ್ವರ ಮತಕ್ಷೇತ್ರದಲ್ಲಿ 1,10,801 ಪುರುಷ, 1,06,346 ಮಹಿಳಾ, 4 ಇತರೆ ಸೇರಿದಂತೆ 2,17,151 ಮತದಾರರಿದ್ದಾರೆ.

30-ಬಿಜಾಪುರ ನಗರ ಮತಕ್ಷೇತ್ರದಲ್ಲಿ 1,39,699 ಪುರುಷ, 1,41,826 ಮಹಿಳಾ, 93 ಇತರೆ ಸೇರಿದಂತೆ 2,81,618 ಮತದಾರರಿದ್ದಾರೆ.

31-ನಾಗಠಾಣ ಮತಕ್ಷೇತ್ರದಲ್ಲಿ 1,38,473 ಪುರುಷ, 1,30,647 ಮಹಿಳಾ, 22 ಇತರೆ ಸೇರಿದಂತೆ 2,69,142 ಮತದಾರರಿದ್ದಾರೆ.

32-ಇಂಡಿ ಮತಕ್ಷೇತ್ರದಲ್ಲಿ 1,25,592 ಪುರುಷ, 1,16,855 ಮಹಿಳಾ, 19 ಇತರೆ ಸೇರಿದಂತೆ 2,42,466 ಮತದಾರರು ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ  1,22,167 ಪುರುಷ, 1,14,324 ಮಹಿಳಾ, 30 ಇತರೆ ಸೇರಿದಂತೆ 2,36,521 ಮತದಾರರಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 18,92,852 ಮತದಾರರಿದ್ದಾರೆ. ಅದರಂತೆ ಜಿಲ್ಲೆಯಲ್ಲಿರುವ 1851 ಸೇವಾ ಮತದಾರರಿಗೆ ಈಗಾಗಲೇ ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ 2078 ಮತಗಟ್ಟೆ ಸ್ಥಾಪನೆ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 2072 ಮುಖ್ಯ ಮತಗಟ್ಟೆಗಳು ಹಾಗೂ 6 ಸಹಾಯಕ ಮತಗಟ್ಟೆ ಸೇರಿದಂತೆ 2078 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ವಿಧಾನಸಭಾವಾರು ವಿವರದಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 241 ಮುಖ್ಯ ಮತಗಟ್ಟೆ, 01 ಸಹಾಯಕ ಮತಗಟ್ಟೆ ಸೇರಿದಂತೆ 242 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಅದರಂತೆ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 232, ಬಬಲೇಶ್ವರ ಮತಕ್ಷೇತ್ರದಲ್ಲಿ 243 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಜಾಪುರ ನಗರ ಮತಕ್ಷೇತ್ರದಲ್ಲಿ 269 ಮುಖ್ಯ ಮತಗಟ್ಟೆ ಹಾಗೂ 5 ಸಹಾಯಕ ಮತಗಟ್ಟೆ ಸೇರಿದಂತೆ 274 ಮತಗಟ್ಟೆಗಳು ಮತ್ತುನಾಗಠಾಣ ಮತಕ್ಷೇತ್ರದಲ್ಲಿ 296, ಇಂಡಿ ಮತಕ್ಷೇತ್ರದಲ್ಲಿ 268 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಮತಗಟ್ಟೆಗಳತ್ತ ಮತದಾರರ ಆಕರ್ಷಣೆ : ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಿ ಮತದಾನಕ್ಕೆ ಪ್ರೇರೆಪಿಸಲು ಶೇಕಡಾವಾರು ಮತದಾನ ಕಡಿಮೆ ಇರುವ ಒಂದು ಸಾವಿರಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮತಗಟ್ಟೆಗಳಲ್ಲಿ ವೇಟಿಂಗ್ ರೂಂಗಳ ಸ್ಥಾಪನೆ, ಅವಶ್ಯವಿರುವ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ವಿಶೇಷ ಚೇತನ ಮತದಾರರಿಗೆ ವ್ಹೀಲ್ ಚೇರ್, ಭೂತ ಕನ್ನಡ ಹಾಗೂ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ  ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ 64 ವಿಶೇಷ ಮತಗಟ್ಟೆಗಳ ಸ್ಥಾಪನೆ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾವಾರು  ತಲಾ 5 ಸಖಿ, ತಲಾ  01 ವಿಶೇಷ ಚೇತನರ ಮತಗಟ್ಟೆ, ತಲಾ 01 ಯುವ ಮತದಾರರ ಮತಗಟ್ಟೆ ಹಾಗೂ ತಲಾ 01 ವಿಷಯಾಧಾರಿತ ಮತಗಟ್ಟೆ ಸೇರಿದಂತೆ ಒಟ್ಟು 64 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

9884 ಮತಗಟ್ಟೆ ಸಿಬ್ಬಂದಿ ನಿಯೋಜನೆ : ಜಿಲ್ಲೆಯಾದ್ಯಂತ ಸ್ಥಾಪಿಸಲಾದ 2078 ಮತಗಟ್ಟೆಗಳಿಗೆ ಮತಗಟ್ಟೆಗೊಬ್ಬರಂತೆ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ 1164, ದೇವರಹಿಪ್ಪರಗಿ ಕ್ಷೇತ್ರಕ್ಕೆ 1192, ಬಸವನಬಾಗೇವಾಡಿ ಮತಕ್ಷೇತ್ರಕ್ಕೆ 1114, ಬಬಲೇಶ್ವರ ಮತಕ್ಷೇತ್ರಕ್ಕೆ 1158, ಬಿಜಾಪುರ ನಗರ ಮತಕ್ಷೇತ್ರಕ್ಕೆ 1304, ನಾಗಠಾಣ ಮತಕ್ಷೇತ್ರಕ್ಕೆ 1399, ಇಂಡಿ ಮತಕ್ಷೇತ್ರಕ್ಕೆ 1270 ಹಾಗೂ ಸಿಂದಗಿ ಮತಕ್ಷೇತ್ರಕ್ಕೆ 1283 ಸೇರಿದಂತೆ ಒಟ್ಟು 9884 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 20% ಪ್ರತಿಶತ ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

7744 ವಿದ್ಯುನ್ಮಾನ ಯಂತ್ರಗಳ ಬಳಕೆ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ  ಬಿಯು, ಸಿ.ಯು., ಹಾಗೂ ವ್ಹಿವ್ಹಿಪ್ಯಾಟ್ ಸೇರಿದಂತೆ ಒಟ್ಟು  7744 ವಿದ್ಯುನ್ಮಾನ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ವಿಧಾನಸಭಾವಾರು ವಿವರದಂತೆ ಮುದ್ದೇಬಿಹಾಳ-903, ದೇವರಹಿಪ್ಪರಗಿ-934, ಬಸವನಬಾಗೇವಾಡಿ-860, ಬಬಲೇಶ್ವರ-908, ಬಿಜಾಪುರ ನಗರ-1026, ನಾಗಠಾಣ-1109, ಇಂಡಿ-993 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 1011 ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಸ್ಟರಿಂಗ್ ಡಿ-ಮಸ್ಟರಿಂಗ್ : ಆಯಾ ಮತಕ್ಷೇತ್ರದ ಮಸ್ಟರಿಂಗ್-ಡಿ ಮಸ್ಟರಿಂಗ್ ಕೇಂದ್ರಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎಂಜಿವಿಸಿ ಕಾಲೇಜ್‍ನಲ್ಲಿ, ದೇವರಹಿಪ್ಪರಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎ.ಬಿ.ಸಾಲಕ್ಕಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ, ಬಸವನಬಾಗೇವಾಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‍ನಲ್ಲಿ, ಬಬಲೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಸರ್ಕಾರಿ ಐಟಿಐ ಕಾಲೇಜ್‍ನಲ್ಲಿ, ಬಿಜಾಪುರ ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೈನಿಕ್ ಶಾಲೆಯಲ್ಲಿ,  ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಜಯಪುರ ಸೈನಿಕ್ ಶಾಲೆಯಲ್ಲಿ, ಇಂಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿ ಆದರ್ಶ ವಿದ್ಯಾಲಯದಲ್ಲಿ ಹಾಗೂ ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ ಹಾಗೂ ಜಿ.ಪಿ.ಪೋರವಾಲ ಕಾಲೇಜ್‍ನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲಾ ಹಂತದಲ್ಲಿ ಭದ್ರತಾ ಕೊಠಡಿ ಹಾಗೂ  ಈ ಎಲ್ಲ ಕ್ಷೇತ್ರಗಳ ಮತ ಏಣಿಕೆಯು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದೆ ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ : ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತಿ ಉಲ್ಲಂಘನೆಗೆ ಸಂಬಂಧಪಟ್ಟಂತೆ  ಸಿವ್ಹಿಜಿಲ್ ಮೂಲಕ 1356 ದೂರುಗಳನ್ನು ಸ್ವೀಕರಿಸಲಾಗಿದ್ದು, 29 ಪ್ರಕರಣಗಳನ್ನು ದಾಖಲಿಸಲಾಗಿದೆ. 2,49,06,774.92 ರೂ. ಮೊತ್ತದ ವಸ್ತು-ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೇ.08ರ ಸಂಜೆ 5 ಗಂಟೆಯಿಂದ ಮೇ.11ರಂದು ಮತದಾನ ಮುಕ್ತಾಯವಾಗುವರೆಗೂ ಕಲಂ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ  ಮೇ.8ರ ಸಂಜೆ 6 ಗಂಟೆಯಿಂದ ಮೇ.10ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ತಹರದ ಮದ್ಯ ಮಾರಾಟ, ಸಂಗ್ರಹಣೆ, ಶೇಖರಣೆ ಮಾಡುವುದು ನಿಷೇಧಿಸಲಾಗಿದೆ. ಮೇ.9 ಹಾಗೂ 10ರಂದು ನಡೆಯುವ ಸಂತೆ ಹಾಗೂ ಜಾತ್ರೆ- ಮಹೋತ್ಸವಗಳನ್ನು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 33 ವಲ್ನರೇಬಲ್  ಮತಗಟ್ಟೆಗಳು ಸೇರಿದಂತೆ 334 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆಗಳ ಪೈಕಿ 274 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್‍ವರ್, 60 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫಿ ವ್ಯವಸ್ಥೆ ಹಾಗೂ ಎಲ್ಲ 334 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮುದ್ದೇಬಿಹಾಳ ಮತಕ್ಷೇತ್ರದ 102 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 14 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 7 ವಿಡಿಯೋ ಗ್ರಾಫರ್,           ದೇವರಹಿಪ್ಪರಗಿ ಮತಕ್ಷೇತ್ರದ 109 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 21 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 7 ವಿಡಿಯೋ ಗ್ರಾಫರ್‍ಗಳನ್ನು ನೇಮಿಸಲಾಗಿದೆ.

ಬಸವನಬಾಗೇವಾಡಿ ಮತಕ್ಷೇತ್ರದ 101 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 24 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 7 ವಿಡಿಯೋ ಗ್ರಾಫರ್, ಬಬಲೇಶ್ವರ ಮತಕ್ಷೇತ್ರದ 149 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 23 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 8 ವಿಡಿಯೋ ಗ್ರಾಫರ್‍ಗಳನ್ನು ನೇಮಿಸಲಾಗಿದೆ.

ಬಿಜಾಪುರ ನಗರ ಮತಕ್ಷೇತ್ರದ 178 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 61 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 8 ವಿಡಿಯೋ ಗ್ರಾಫರ್ ಹಾಗೂ ನಾಗಠಾಣ ಮತಕ್ಷೇತ್ರದ 150 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 21 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 8 ವಿಡಿಯೋ ಗ್ರಾಫರ್‍ಗಳನ್ನು ನೇಮಿಸಲಾಗಿದೆ.

ಇಂಡಿ ಮತಕ್ಷೇತ್ರದ 123 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 24 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 7 ವಿಡಿಯೋ ಗ್ರಾಫರ್ ಹಾಗೂ ಸಿಂದಗಿ ಮತಕ್ಷೇತ್ರದ 137 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 16 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್ ಹಾಗೂ 8 ವಿಡಿಯೋ ಗ್ರಾಫರ್‍ಗಳನ್ನು ನೇಮಿಸಲಾಗಿದ್ದು, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 2078 ಮತಗಟ್ಟೆಗಳ ಪೈಕಿ 1049 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ, 204 ಮೈಕ್ರೋ ಆಬ್ಜರ್ವರ್ ಹಾಗೂ 60 ವಿಡಿಯೋಗ್ರಾಫರ್‍ಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಮತಗಟ್ಟೆಗಳ ಸುರಕ್ಷತೆ ಹಾಗೂ ಭದ್ರತೆ : ಜಿಲ್ಲೆಯ ಮತಗಟ್ಟೆಗಳ ಸುರಕ್ಷತೆ ಹಾಗೂ ಭದ್ರತೆ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಸಾಮಾನ್ಯ, ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಕ್ಲಸ್ಟರ್ ಮತಗಟ್ಟೆಗಳೆಂದು ವಿಭಜಿಸಲಾಗಿದ್ದು, ಚುನಾವಣಾ ಕರ್ತವ್ಯಕ್ಕಾಗಿ 6 ಡಿಎಸ್‍ಪಿ, 17 ಸಿಪಿಐ, 54 ಪಿಎಸ್‍ಐ, 357 ಎಎಸ್‍ಐ, 1127 ಹೆಡ್ ಕಾನ್ಸಟೇಬಲ್, 750 ಹೋಂಗಾರ್ಡ್ ಸೇರಿದಂತೆ 2113 ಜನರನ್ನು ನೇಮಿಸಿದ್ದು, ಹೊರ ಜಿಲ್ಲೆಯಿಂದ 3 ಡಿಎಸ್‍ಪಿ, 16 ಸಿಪಿಐ, 7 ಪಿಎಸ್‍ಐ ಹಾಗೂ 1 ಎಎಸ್‍ಐ ಮತ್ತು 351 ಕಾನ್ಸಟೇಬಲ್ ಸೇರಿದಂತೆ 678 ಪೋಲಿಸ್‍ರನ್ನು ನಿಯೋಜಿಸಲಾಗಿದೆ.

ಕೇಂದ್ರ ಮೀಸಲು ಪಡೆಯ 24 ಪಡೆಗಳು, ಐಆರ್‍ಬಿ-ಕೆಎಸ್‍ಆರ್‍ಪಿ 8, ಡಿಎಆರ್-3 ತುಕಡಿಗಳು ಸೇರಿದಂತೆ ಒಟ್ಟು 5256 ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಜಿಲ್ಲೆಯ 8 ಮತಕ್ಷೇತ್ರಗಳ ಪೈಕಿ ಹಿಂದಿನ ಚುನಾವಣೆಗಳಲ್ಲಿ  ಕಡಿಮೆ ಮತದಾನವಾದ 5 ಮತಕ್ಷೇತ್ರಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ವಿಭಿನ್ನ ಹಾಗೂ ವಿಶಿಷ್ಟ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ. ವಿಶೇಷವಾಗಿ ಟಾಂಗಾ ಜಾಥಾ, ನಮ್ಮ ನಡೆ ಮತಗಟೆ ಕಡೆ, 120 ಮೀ. ಧ್ವಜ ಪ್ರದರ್ಶನ, ಮಾನವ ಸರಪಳಿ, ವಿಕಲಚೇತನರ ಬೈಕ್ ರ್ಯಾಲಿ, ಕ್ಯಾಂಡಲ್ ಮಾರ್ಚ್, ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಮತದಾನ ಪ್ರಮಾಣ ಹೆಚ್ಚಿನಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಉಪ ಆಯುಕ್ತ  ಶಿವಲಿಂಗಪ್ಪ ಬನಹಟ್ಟಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌