ವಿಜಯಪುರ: ನಾಗಠಾಣ(ಮೀ) ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ ಚವ್ಹಾಣ ಮತ್ತು ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಪುತ್ರ ವಿರಾಜ ರವಿಕಾಂತ ಪಾಟೀಲ ಮತಕ್ಷೇತ್ರದ ನಾನಾ ಕಡೆಗಳಲ್ಲಿ ಪ್ರಚಾರ ಕೈಗೊಂಡರು.
ಇಂಚಗೇರಿ, ಇಂಚಗೇರಿ ಮಹಾವೀರ ನಗರ, ಕನ್ನೂರ, ಶಿಕಾರಖಾನೆ, ಹಲಸಂಗಿ ಗ್ರಾಮಗಳಲ್ಲಿ ಬೈಕ್ ನಲ್ಲಿ ಸಂಚರಿಸುತ್ತ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಅವರ ಉನ್ನತ ಶಿಕ್ಷಣಕ್ಕಾಗಿ ಮರಗೂರ, ನಾಗಠಾಣ ಗ್ರಾಮಗಳಲ್ಲಿ ಮುರಾರ್ಜಿ ದೇಸಾಯಿ ಶಾಲೆ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಜನಸಾಮಾನ್ಯರು, ರೈತರು, ಕಡುಬಡವರ ಹಿತವನ್ನು ದೃಷ್ಟಿಕೋನವಿಟ್ಟು ಕೆಲಸ ಮಾಡಿದ್ದೇನೆ. ಲೋಣಿಯಲ್ಲಿ ಆಸ್ಪತ್ರೆ, ಕೆರೂರ ಟಾಕಳಿ ಬಳಿ 110 ಕೆವಿ ವಿದ್ಯುತ್ ಕೇಂದ್ರ, ಚಡಚಣದಲ್ಲಿ ಮುಖ್ಯ ರಸ್ತೆ, ಹತ್ತಳ್ಳಿ, ಬೋರಿ ಹಳ್ಳಕ್ಕೆ ಬೃಹತ್ ಸೇತುವೆ, ಜೀರಂಕಲಗಿ, ಹಳಕ್ಕೆ ಬೃಹತ್ ಸೇತುವೆ, ಇಂಚಗೇರಿ ಬಳಿ 110 ಕೆವಿ ವಿದ್ಯುತ್ ಉಪಕೇಂದ್ರ, ವಿಜಯಪುರ ನಗರದ ಹೊರವಲಯದ ಯೋಗಾಪೂರ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯ, ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ಮತ್ತು ಆಸ್ಪತ್ರೆ ವಿಜಯಪುರ ನಗರದ ಕಾಳಿಕಾನಗರದಲ್ಲಿ ರಸ್ತೆಗಳು, ಕಾರ್ಗಿಲ ನಗರದಲ್ಲಿ ಒಳಚರಂಡಿ ಸೇರಿದಂತೆ ಹೀಗೆ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಾಗಿ ತಿಳಿಸಿದರು.
ಈ ಬಾರಿ ಕೂಡಾ ನಾಗಠಾಣ ಮತಕ್ಷೇತ್ರದಿಂದ ತಾವು ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಇದೇ ರೀತಿ ಇರಲಿ. ನಿಮ್ಮ ಸೇವೆಯಲ್ಲಿ ಸದಾ ಕಾಲ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರಿಬಸಪ್ಪ ಬೂದಿಹಾಳ, ಚಿದಾನಂದ ಗಡ್ಡದ, ಜಾಗೀರ ಬಾಬಾನಗರ, ಬಾಬು ಚವ್ಹಾಣ, ಅಪ್ಪಾಸಾಹೇಬ ಚವ್ಹಾಣ, ಸುನೀಲ ಚವ್ಹಾಣ, ರಮೇಶ ಮುಂತಾದವರು ಉಪಸ್ಥಿತರಿದ್ದರು.