ಮತದಾರರ ಆಶೀರ್ವಾದದಿಂದ ಬಬಲೇಶ್ವರ ಮತಕ್ಷೇತ್ರದಲ್ಲಿ ಹುಲ್ಲು ಬೆಳೆಯದ ಜಾಗದಲ್ಲಿ ಕಬ್ಬು ಬೆಳೆಯಲಾಗುತ್ತಿದೆ- ಆಶಾ ಎಂ. ಪಾಟೀಲ

ವಿಜಯಪುರ: ಜನರ  ಆಶೀರ್ವಾದದಿಂದ ಬಬಲೇಶ್ವರ ಮತಕ್ಷೇತ್ರದ ಹುಲ್ಲು ಬೆಳೆಯದ ಜಾಗದಲ್ಲಿಯೂ ಈಗ ಕಬ್ಬು ಕಾಣಿಸುತ್ತಿದೆ ಎಂದು ಆಶಾ ಎಂ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಅವರು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಮಾತನಾಡಿದರು.

ಕ್ಷೇತ್ರದ ಮತದಾರರು ಎಂ. ಬಿ. ಪಾಟೀಲರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಅವರು ಶಾಸಕರಷ್ಟೇ ಅಲ್ಲ, ನೀರಾವರಿ ಮಂತ್ರಿಯೂ ಆಗಿದ್ದಾರೆ. ಅವರು ಕೈಗೊಂಡ ಯೋಜನೆಗಳಿಂದ ನಿಮ್ಮ ಭಾಗದಲ್ಲಿ ಬೇಸಿಗೆಯಲ್ಲಿಯೂ ಕೆರೆಗಳಲ್ಲಿ ನೀರು ಇದೆ. ಕುಡಿಯುವ ನೀರಿಗಾಗಿ ಮಹಿಳೆಯರು ಅಲೆದಾಡುವುದು ತಪ್ಪಿದೆ, ಟ್ಯಾಂಕರ್ ಮೂಲಕ ನೀರು ಪಡೆಯುವ ಕಷ್ಟ ಪರಿಸ್ಥಿತಿ ಈಗ ಇಲ್ಲ. ಎಲ್ಲ ಕಡೆ ಹಸಿರುಮಯವಾಗಿದೆ ಎಂದು ಅವರು ಹೇಳಿದರು.

ಬಬಲೇಶ್ವರ ಮತಕ್ಷೇತ್ರದ ನಾಗರಾಳ ಗ್ರಾಮದಲ್ಲಿ ಆಶಾ ಎಂ. ಪಾಟೀಲ, ರೇಣುಕಾ ಸುನೀಲಗೌಡ ಪಾಟೀಲ ಮುಂತಾದವರು ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡರು

ಪ್ರತಿಯೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಮಹಿಳೆಯರು, ರೈತರು, ಯುವಕರು ಸೇರಿದಂತೆ ಗ್ಯಾರಂಟಿ ಸ್ಕೀಂ ಗಳನ್ನು ಘೋಷಣೆ ಮಾಡಿದೆ. ಇಲ್ಲಿ ಎಂ. ಬಿ. ಪಾಟೀಲರು ಶಾಸಕರಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ತಾವೆಲ್ಲರೂ ತಪ್ಪದೇ ಮತದಾನ ಮಾಡಿ ಎಂ. ಬಿ. ಪಾಟೀಲರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ದಾನಮ್ಮ ಜಿರಲಿ, ಶಿವಮೂರ್ತಿಗೌಡ ಪಾಟೀಲ, ವಿ.ಎನ್.ಪಾಟೀಲ, ವಿದ್ಯಾಧರ ಪಾಟೀಲ, ಸದಾಶಿವ ತೊದಲಬಾಗಿ, ದುಂಡನಗೌಡ ಪಾಟೀಲ, ಮುಕ್ತಂಕಾರ ಬೆನಕಟ್ಟಿ, ರಾಜಭಕ್ಷ ಬಸರಗಿ, ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌