ಚುನಾವಣೆಯಿಂದ ಬಿಡುವು ಪಡೆದು ಮತ್ತೆ ಕುಟುಂಬ ನಿರ್ವಹಣೆಯಲ್ಲಿ ತೊಡಗಿದ ಆಶಾ ಎಂ. ಪಾಟೀಲ
ವಿಜಯಪುರ: ಮತದಾನದ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಮತದಾನದ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತದಾನದ ಪ್ರಮಾಣ ಮತ್ತು ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಇತ್ತ ಅವರ ಪತ್ನಿ ಆಶಾ ಎಂ. ಪಾಟೀಲ ಅವರು, ಮತದಾನದ ಬಳಿಕ ಕುಟುಂಬ ಸದಸ್ಯರ ಕಾಳಜಿಯಲ್ಲಿ ತೊಡಗಿದ್ದಾರೆ. ಇಷ್ಟು ದಿನ ಪತಿಯ ಪರ ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ಕೈಗೊಂಡ ಅವರು ಈಗ ಮತದಾನದ ಲೆಕ್ಕಾಚಾರವನ್ನು ಪತಿಗೆ ಬಿಟ್ಟು ಅಡುಗೆ ಮನೆಯಲ್ಲಿ ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಮನೆಯಲ್ಲಿ […]
ಬಸವನಾಡಿಲ್ಲಿ ಒಟ್ಟು ಶೇ. 71.34 ಮತದಾನ- ಬಬಲೇಶ್ವರ ಅತೀ ಹೆಚ್ಚು ಶೇ. 81.79, ಬಿಜಾಪುರ ನಗರದಲ್ಲಿ ಅತೀ ಕಡಿಮೆ ಶೇ. 64.59 ಮತದಾನ
ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದ ಮತದಾನ ಒಂದೆರಡು ಅಹಿತಕರ ಘಟನೆಗಳನ್ನು ಹೊರತು ಪಡಿಸಿ ಸಂಪೂರ್ಣ ಶಾಂತಿಯುತವಾಗಿದ್ದು, ಬಬಲೇಶ್ವರ ಮತಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ ಶೇ. 81.79ರಷ್ಟು ಮತದಾನ ದಾಖಲಾಗಿದೆ. ಬಿಜಾಪುರ ನಗರದಲ್ಲಿ ಅತೀ ಕಡಿಮೆ ಶೇ. 64.59 ಮತದಾನ ದಾಖಲಾಗಿದೆ. ಈಗ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕೆ ನಡೆಯಲಿರುವ ವಿಜಯಪುರ ನಗರದ ಸೈನಿಕ ಶಾಲೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಅಲ್ಲದೇ, ಈ ಭದ್ರತಾ ಕೊಠಡಿಗಳ ಸುತ್ತಮುತ್ತ ಅರೆ ಸೇನಾಪಡೆ ಮತ್ತು ಪೊಲೀಸರ ಬಿಗೀ […]
ಈ ಬಾರಿ ಮೋದಿ ಮೋಡಿ ನಡೆಯುವುದಿಲ್ಲ- ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ- ಎಂ. ಬಿ.
ವಿಜಯಪುರ: ಚುನಾವಣೆ ಮತದಾನದ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಸ್ವಲ್ಪ ರಿಲ್ಯಾಕ್ಸಗ ಮೂಡ್ ನಲ್ಲಿದ್ದು, ಅವರ ಪತ್ನಿ ಆಶಾ ಎಂ. ಪಾಟೀಲ ಮನೆಯಲ್ಲಿ ಕುಟುಂಬ ಸದಸ್ಯರಿಗಾಗಿ ಅಡುಗೆ ತಯಾರಿಸಿದರು. ಬಿ.ಎಂ.ಪಾಟೀಲ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕಾರ್ಯಕರ್ತರಿಂದ ಮತದಾನದ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಗೆಲುವಿನ ಅಂತರದ ಲೆಕ್ಕಾಚಾರ ನಡೆಸಿದರು. ಆಗಮಿಸಿದ ಬಬಲೇಶ್ವರ ಮತಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಂದ ಮತದಾನ ಮತ್ತು ಕಾಂಗ್ರೆಸ್ ಪರವಾಗಿ ಮತದಾರರಿಂದ ವ್ಯಕ್ತವಾದ ಪ್ರತಿಕ್ರಿಯೆ ಕುರಿತು ಮಾಹಿತಿ […]