ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದ ಮತದಾನ ಒಂದೆರಡು ಅಹಿತಕರ ಘಟನೆಗಳನ್ನು ಹೊರತು ಪಡಿಸಿ ಸಂಪೂರ್ಣ ಶಾಂತಿಯುತವಾಗಿದ್ದು, ಬಬಲೇಶ್ವರ ಮತಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ ಶೇ. 81.79ರಷ್ಟು ಮತದಾನ ದಾಖಲಾಗಿದೆ. ಬಿಜಾಪುರ ನಗರದಲ್ಲಿ ಅತೀ ಕಡಿಮೆ ಶೇ. 64.59 ಮತದಾನ ದಾಖಲಾಗಿದೆ.
ಈಗ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕೆ ನಡೆಯಲಿರುವ ವಿಜಯಪುರ ನಗರದ ಸೈನಿಕ ಶಾಲೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಅಲ್ಲದೇ, ಈ ಭದ್ರತಾ ಕೊಠಡಿಗಳ ಸುತ್ತಮುತ್ತ ಅರೆ ಸೇನಾಪಡೆ ಮತ್ತು ಪೊಲೀಸರ ಬಿಗೀ ಭದ್ರತೆ ಒದಗಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮತಕ್ಷೇತ್ರವಾರು ದಾಖಲಾದ ಮತದಾನದ ವಿವರ
ಮುದ್ದೇಬಿಹಾಳ– ಶೇ. 70.91
ದೇವರ ಹಿಪ್ಪರಗಿ– ಶೇ. 65.81
ಬಸವನ ಬಾಗೇವಾಡಿ– ಶೇ. 75.18
ಬಬಲೇಶ್ವರ– ಶೇ. 81.79
ವಿಜಯಪುರ ನಗರ– ಶೇ. 64.59
ನಾಗಠಾಣ(ಮೀ)- ಶೇ. 66.48
ಇಂಡಿ– ಶೇ. 73.62
ಸಿಂದಗಿ– ಶೇ. 72.46
ಮತದಾನ ಆರಂಭವಾದ ಮೊದಲ ಎರಡು ಗಂಟೆಗಳಲ್ಲಿ ಬಬಲೇಶ್ವರ ಮತ್ತು ವಿಜಯಪುರ ನಗರ ಮತಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೋಂಡು ತಮ್ಮ ಹಕ್ಕು ಚಲಾಯಿಸಿದರು.