ಅಭಿವೃದ್ಧಿ ಸುರಕ್ಷತೆ ಹಿಂದುತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಜನ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದ್ದಾರೆ- ಯತ್ನಾಳ

ವಿಜಯಪುರ: ಬಹಳ ಪೈಪೋಟಿಯಿಂದ ಕೂಡಿದೆ ಎಂದೇ ನಿರೀಕ್ಷಿಸಲಾಗಿದ್ದ ಬಿಜಾಪುರ ನಗರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳೆದ ಸಲಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿಯಲ್ಲಿರುವ ತಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. 

ಬಿ ಎಸ್. ಯಡಿಯೂರಪ್ಪ, ವಿಜಯೇಂದ್ರ, ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ತಮ್ಮ ನೇರ ಮಾತುಗಳಿಂದಲೇ ತರಾಟೆಗೆ ತೆಗೆದುಕೊಂಡು ಮತ್ತು ತಮಗನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಯತ್ನಾಳ ಅವರು, ಮತ್ತೋಮ್ಮೆ ಬಿಜೆಪಿ ಟೆಕೆಟ್ ಪಡೆದಿದ್ದಷ್ಟೇ ಅಲ್ಲ, ಮರು ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್ ಅವರನ್ನು ಯತ್ನಾಳ 8223 ಮತಗಳ ಅಂತರದಿಂದ ಸೋಲಿಸಿದ್ದಾರೆ.  ಯತ್ನಾಳ ಅವರಿಗೆ 94201 ಮತಗಳು ಬಂದರೆ, ಹಮೀದ್ ಮುಶ್ರಿಫ್ ಅವರು 85978 ಮತಗಳನ್ನು ಪಡೆದಿದ್ದಾರೆ.  ಈ ಮೂಲಕ ಯತ್ನಾಳ ಸತತ ಎರಡನೇ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಮ್ಮ ಗೆಲವಿನ ಬಳಿಕ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ, ಸುರಕ್ಷತೆ, ಹಿಂದುತ್ವನವ್ನು ಮನಸ್ಸಿನಲ್ಲಿಟ್ಟುಕೊಂಡು ವಿಜಯಪುರ ನಗರದ ಮತದಾರರು ಮತ್ತೋಮ್ಮೆ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

ವಿಜಯಪುರ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಹಿಂದುತ್ವದ ಆಧಾರದ ಮತ್ತು ಸುರಕ್ಷತೆಯ ದೃಷ್ಠಿಯಿಂದ ವಿಜಯಪುರ ನಗರದ ಮತದಾರರು ನನ್ನನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಿದ್ದಾರೆ.  ಮುಂದಿನ ಐದು ವರ್ಷ ವಿಜಯಪುರ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಆಶೀರ್ವಾದ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಮಸ್ತ ಹಿಂದೂ ಬಾಂಧವರಿಗೆ ಹಿಂದೂ ಬಾಂಧವರಿಗೆ ನನ್ನ ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ಅಭ್ಯರ್ಥಿಗಳ ಬಗ್ಗೆ ನಾನು ಹೇಳಿದರೂ ಹೈಕಮಾಂಡ ಸರಿಯಾಗಿ ಟಿಕೆಂಟ್ ಹಂಚಿಕೆ ಮಾಡಿದ್ದರೆ ನಿಶ್ಚಿತವಾಗಿ ಒಳ್ಳೆಯದಾಗುತ್ತಿತ್ತು ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಜನರಲ್ಲಿ ಬಿಜೆಪಿ ಸರಕಾರದ ಬಗ್ಗೆ ಅಪಪ್ರಚಾರ ನಡೆದ ಕಾರಣ ಈ ರೀತಿಯಾಗಿದೆ.  ರಾಜ್ಯದ ಜನರ ತೀರ್ಪಿಗೆ ತಲೆಬಾಗುತ್ತೇವೆ.  ಈಗ ಆಗಿರುವ ತಪ್ಪನ್ನು ಲೋಕಸಭೆ ಚುನಾವಣೆಯಲ್ಲಿ ತಿದ್ದಿಕೊಂಡು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಲು ಮುಂದಿನ ಹೋರಾಟ ಮಾಡುತ್ತೇವೆ.  ಈಗ ರಾಜ್ಯದಲ್ಲಿ ಆಗಿರುವ ಹಿನ್ನೆಡೆಯಿಂದ ಪಾಠ ಕಲಿತಿದ್ದೇವೆ.  ಯಾವ ಕಾರಣದಿಂದ ಸೋತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತೇವೆ ಎಂದು ಶಾಸಕರು ಹೇಳಿದರು.

ಎರಡು ದಿವಸ ಯತ್ನಾಳ ಬೀಳುತ್ತಾನೆ ಎಂದು ಹೇಳುಕೊಂಡು ತಿರುಗಾಡುತ್ತಿದ್ದರು.  ಆದರೆ, ನನಗೆ ವಿಶ್ವಾಸವಿತ್ತು.  15 ದಿನ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ.  ನನ್ನ ಕ್ಷೇತ್ರದಲ್ಲಿ ಎರಡ್ಮೂರು ದಿವಸ ಮಾತ್ರ ಪ್ರಚಾರ ಮಾಡಿದ್ದೇನೆ.  ಆದಾಗ್ಯೂ ಜನ, ನಮ್ಮ ಕಾರ್ಯಕರ್ತರು, ನಮ್ಮ ಮಹಾನಗರ ಪಾಲಿಕೆ ಸದಸ್ಯರು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತವರು ನಾವೇ ಬಸನಗೌಡ ಎಂದು ಹೇಳಿಕೊಂಡು ಚುನಾವಣೆ ಮಾಡಿದರು.  ನಾನು ರಾಜ್ಯದ ಜವಾಬ್ದಾರಿ ಹೊತ್ತಿದ್ದೆ.  ಆದರೂ, ಜನ ನಮ್ಮ ಅಭಿವೃದ್ಧಿ, ಸುರಕ್ಷತೆ, ಹಿಂದುತ್ವನವ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತೋಮ್ಮೆ ನನಗೆ ಆಶೀರ್ವಾದ ಮಾಡಿದ್ದಾರೆ.  ಹೀಗಾಗಿ ಒಂಬತ್ತು ಚುನಾವಣೆಯಲ್ಲಿ ಆರು ಚುನಾವಣೆ ಗೆದ್ದಿದ್ದೇನೆ.  ಸಂಸದನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಹಾಗೂ ಶಾಸಕನಾಗಿ ಆಯ್ಕೆಯಾಗಿದ್ದೇನೆ.  ನಮ್ಮ ಕಾರ್ಯಕರ್ತರು ಹೆಚ್ಚಾಗಿ ಕೆಲಸ ಮಾಡಿದ್ದಾರೆ.  ನಮ್ಮ ಕಾರ್ಪೋರೇಟರ್ ಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರ ಜೊತೆ ನನ್ನ ಮಗ ಕೂಡ ಕಾರ್ಯಕರ್ತನಾಗಿ ಓಡಾಡಿದ್ದಾನೆ ಹೊರತು, ಇದನ್ನೆಲ್ಲ ನನ್ನ ಮಗ ಮಾಡಿದ್ದಾನೆ ಎಂದು ಹೇಳುವಷ್ಟು ಹುಚ್ಚು ರಾಜಕಾರಣಿ ನಾನಲ್ಲ.  ಎಲ್ಲ ನನ್ನ ಗೆಲುವು ನನ್ನ ಕಾರ್ಯಕರ್ತರಿಗೆ, ನನ್ನ ಕಾರ್ಪೋರೇಟರ್ ಗಳಿಗೆ ಹಾಗೂ ನನ್ನ ವಿಜಯಪುರದ ಮತದಾರರಿಗೆ ಸಲ್ಲುತ್ತದೆ ಎಂದು ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌