ವಿಜಯಪುರ: ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಪಾವನಿ ಕುಲಕರ್ಣಿ ಈ ಬಾರಿ ಸಿ ಬಿ ಎಸ್ ಇ ಪರೀಕ್ಷೆಯಲ್ಲಿ ವಿಜಯಪುರ ನಗರಕ್ಕೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ನಡೆದ ಸಿ ಬಿ ಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶಾಲೆ ಶೇ. 100 ರಷ್ಟು ಫಲಿತಾಂಶ ದಾಖಲಿಸಿದೆ. ಶಾಲೆಯಿಂದ ಪರೀಕ್ಷೆಯಿಂದ ಹಾಜರಾದ ಎಲ್ಲ 91 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಪಾವನಿ ಕುಲಕರ್ಣಿ 500ಕ್ಕೆ 486 ಅಂಕ(ಶೇ. 97.20) ಅಂಕ ಗಳಿಸಿ ವಿಜಯಪುರ ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇದೇ ರೀತಿ ಅಖಿಲೇಶ ಹಡಲಸಂಗ 478(ಶೇ. 95.60) ಮತ್ತು ಜಾಹ್ನವಿ ತೊಶ್ನಿವಾಲ ಹಾಗೂ ಶ್ರೇಯಸ ಕಲ್ಯಾಣಶೆಟ್ಟರ 471(ಶೇ. 94.20) ಅಂಕ ಗಳಿಸಿ ಶಾಲೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ 51 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ವಿಥ್ ಡಿಸ್ಟಿಂಕ್ಷನ್, 32 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಮತ್ತು ಎಂಟು ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ ಎಂದು ಶಾಲೆಯ ಪ್ರಿನ್ಸಿಪಾಲ್ ಬಂಧನಾ ಬ್ಯಾನರ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ, ಸಾಧನೆ ಮಾಡಿರುವ ವಿದ್ಯಾರ್ಥಿಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.