ತೊಂದರೆಯಲ್ಲಿ ಇರುವವರಿಗೆ ಫಲಾಪೇಕ್ಷೆಯಿಲ್ಲದ ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು- ಜಾವೀದ ಜಮಾದಾರ

ವಿಜಯಪುರ: ತೊಂದರೆಯಲ್ಲಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಶ್ವಾರ್ಥ ಸೇವೆಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕ್ರತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವಿದ ಜಮಾದಾರ ನುಡಿದರು.

ತೊರವಿ ಬಳಿ ಇರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಭವನದಲ್ಲಿ ಆರ್ಟ್ ಆಫ್ ಗಿವ್ಹಿಂಗ್ ಫೌಂಡೇಶನ್ ನವದೆಹಲಿ ಇವರ ಸಹಯೋಗದಲ್ಲಿ ನಡೆದ ವಿಶ್ವ ಸೇವಾ ಮನೋಭಾವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸುಂದರ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸೇವಾ ಮನೋಭಾವ,  ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು.  ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು. ಜೀವನದಲ್ಲಿ ಆನಂದದ ಕ್ಷಣಗಳು ಹೇಳಿ ಬರುವುದಿಲ್ಲ, ಬಂದಾಗ ಚಿಕ್ಕ ಚಿಕ್ಕ ಆನಂದವನ್ನು ಸವಿಯುವ ಕಲೆ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಡಾ. ಎಂ. ಪಿ. ಬಳಿಗಾರ ಮಾತನಾಡಿ, ಒಬ್ಬರಿಗೊಬ್ಬರು ಸಹಾಯ ಮಾಡುವುದು ಅತ್ಯಾವಶ್ಯಕ. ಸಮಾಜದಲ್ಲಿ ಬದುಕಲು ಪರಸ್ಪರ ಸಹಾಯ ಸಹಕಾರ ಅನಿವಾರ್ಯವಾಗಿದೆ. ನಾವು ಮಾಡುವ ಚಿಕ್ಕ ಚಿಕ್ಕ ಸಹಾಯಗಳು ಕೂಡಾ ಬೇರೆಯವರ ಜೀವನವನ್ನು ಉತ್ತಮ ಪಡಿಸುತ್ತವೆ ಎಂದು ಹೇಳಿದರು.

ಪ್ರಾಧ್ಯಾಪಕ ಡಾ. ವಿಷ್ಣು ಶಿಂದೆ ಮಾತನಾಡಿ ಯುವ ಶಕ್ತಿ ಸರಿಯಾದ ರೀತಿಯಲ್ಲಿ ಬೆಳೆÉಯಬೇಕು. ವಿದ್ಯಾರ್ಥಿಗಳು ಸ್ವಾವಲಂಬಿಯಾಗಿರುವುದರ ಜೊತೆಗೆ ಬೇರೆಯವರಿಗೆ ಸಹಾಯ ಮಾಡುವ ಸಂಸ್ಕøತಿ ಮತ್ತು ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವೌಲ್ಯಮಾಪನ ಕುಲಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ ಮಾತನಾಡಿ, ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು.  ಇರುವ ಅವಕಾಶಗಳನ್ನು ಬಳಸಿಕೊಂಡು ಇತರರಿಗೆ ಸೇವೆ ಮಾಡುವುದು ಮಾನವ ಧರ್ಮ ಎಂದು ಹೇಳಿದರು.

ವಿಶ್ವವಿದ್ಯಾಲಯದ ಎನ್. ಎಸ್. ಎಸ್ ಕಾರ್ಯಕ್ರಮ ಸಂಯೋಜಕಿ ಪ್ರೊ. ಶಾಂತಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಅಂಕಿತಾ ವಂದಿಸಿದರು.  ಹೂವಕ್ತಾ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌