ರೂ. 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ ಆರ್ ಬಿ ಐ- 30 ಸೆಪ್ಟೆಂಬರ್ 2023ರ ವರೆಗೆ ನೋಟುಗಳ ಬದಲಾವಣೆಗೆ ಅವಕಾಶ

ನವದೆಹಲಿ: ರೂ. 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ನಿರ್ಧರಿಸಿದೆ. 

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಆರ್ ಬಿ ಐ ಚೀಫ್ ಜನರಲ್ ಮ್ಯಾನೇಜರ್ ಯೋಗೇಶ ದಯಾಳ, ನವೆಂಬರ್ 2016ರಲ್ಲಿ ರೂ. 500 ಮತ್ತು ರೂ. 1000 ನೋಟುಗಳನ್ನು ಬ್ಯಾನ್ ಮಾಡಿದ ನಂತರ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗಲು ರೂ. 2000 ನೋಟುಗಳನ್ನು ಪರಿಚಯಿಸಲಾಗಿತ್ತು.  ಇತರ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ರೂ. 2000 ನೋಟನ್ನು ಬಿಡುಗಡೆ ಮಾಡಲಾಗಿತ್ತು.  ಆದ್ದರಿಂದ 2018-2019 ಆರ್ಥಿಕ ವರ್ಷದಲ್ಲಿ ರೂ. 2000 ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ರೂ. 2000 ಮುಖಬೆಲೆಯ ನೋಡು

ಮಾರ್ಚ್ 2017ರ ವರೆಗೆ ಶೇ. 89 ರಷ್ಟು ರೂ. 2000 ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು.  ಇವುಗಳನ್ನು ನಾಲ್ಕೈದು ವರ್ಷ ಮಾತ್ರ ಉಪಯೋಗಿಸಬಹುದಾಗಿದೆ.  ಈ ಅವಧಿ ಈಗ ಮುಗಿದೆ.  ಅಲ್ಲದೇ, 31 ಮಾರ್ಚ್ 2018ರ ವರೆಗೆ ರೂ. 2000 ನೋಟುಗಳ ಬಳಕೆ ಪ್ರಮಾಣ ರೂ. 6.73 ಲಕ್ಷ ಕೋಟಿಗೆ ಇಳಿಕೆಯಾಗಿದೆ(ಶೇ. 37.3 ಮಾತ್ರ ಬಳಕೆಯಲ್ಲಿತ್ತು).  ಈಗ 31 ಮಾರ್ಚ್ 2023ಕ್ಕೆ ಈ ನೋಟಗಳ ಬಳಕೆ ಪ್ರಮಾಣ ರೂ. 3.62 ಲಕ್ಷ ಕೋಟಿಗೆ ಇಳಿಕೆಯಾಗಿದೆ(ಶೇ. 10.8).  ಅಲ್ಲದೇ, ಸಾಮಾನ್ಯವಾಗಿಳ ಜನರು ಈಗ ರೂ. 2000 ನೋಟುಗಳನ್ನು ಬಳಸುವುದು ಕಡಿಮೆಯಾಗಿದೆ.  ಅಲ್ಲದೇ, ಉಳಿದ ರೂ. 500, ರೂ. 200, ರೂ. 100, ರೂ. 50, ರೂ. 20, ರೂ. 10 ಮತ್ತು ನಾಣ್ಯಗಳು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ಬಳಸಲು ಲಭ್ಯವಿವೆ.

ಈ ಹಿನ್ನೆಲೆಯಲ್ಲಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಕ್ಲೀನ್ ನೋಟ್ ಪಾಲಿಸಿಯಡಿ ಈಗ ರೂ. 2000 ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.  ಸಾರ್ವಜನಿಕರು ರೂ. 2000 ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದಾಗಿದೆ.  ಅಲ್ಲದೇ, ರೂ. 2000 ನೋಟುಗಳನ್ನು ಬ್ಯಾಂಕುಗಳಿಗೆ ನೀಡಿ ಬೇರೆ ನೋಟುಗಳನ್ನು ಪಡೆಯಬಹುದಾಗಿದೆ.  23 ಮಾರ್ಚ್ 2023 ರಿಂದ ಗರಿಷ್ಠ ರೂ. 20 ಸಾವಿರದ ವರೆಗೆ ಯಾವುದೇ ಬ್ಯಾಂಕಿನಲ್ಲಿ ಎಕ್ಸಚೇಂಜ್ ಮಾಡಬಹುದಾಗಿದೆ.

30 ಸೆಪ್ಟೆಂಬರ್ 2023ರ ವರೆಗೆ ಸಾರ್ವಜನಿಕರು ಈ ಹಣವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.  ಅಲ್ಲದೇ, ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಯಾಂಕುಗಳು ರೂ. 2000 ನೋಟುಗಳನ್ನು ಯಾರಿಗೂ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಯೋಗೇಶ ದಯಾಳ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌