ಸಿಎಂ, ಡಿಸಿಎಂ ಜೊತೆ ಎಂ. ಬಿ. ಪಾಟೀಲ ಸೇರಿ ಎಂಟು ಜನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕಾಂಗ್ರೆಸ್ ನೂತನ ಸರಕಾರ ಇಂದು ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿಯಾಗಿ ಎಸ್. ಸಿದ್ಧಾರಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಸಿಎಂ, ಡಿಸಿಎಂ ಜೊತೆ ಸಧ್ಯಕ್ಕೆ ಎಂಟು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ.  ಈ ಪಟ್ಟಿ ಬಸವನಾಡು ವೆಬ್ ಗೆ ಲಭ್ಚವಾಗಿದೆ.  ಜಾತಿ ಮತ್ತು ಪ್ರದೇಶವಾರು ಲೆಕ್ಕಾಚಾರ ಹಾಕಿ ಮೊದಲ ಹಂತದಲ್ಲಿ ಎಂಟು ಜನ ಶಾಸಕರು ಸಚಿವರಾಗಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿದೆ.  ಈ ಎಂಟು ಜನರಲ್ಲಿ ಮೂರು ಮೂರು ಜನ ದಲಿತ ಸಮುದಾಯ ಶಾಸಕರಾಗಿದ್ದರೆ, ತಲಾ ಓರ್ವ ಕ್ರಿಶ್ಚಿಯನ್, ಲಿಂಗಾಯತ, ಎಸ್ಟಿ, ರೆಡ್ಡಿ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ.

ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿರುವ ಶಾಸಕರ ಪಟ್ಟಿ ಇಲ್ಲಿದೆ.

1. ಡಾ. ಜಿ. ಪರಮೇಶ್ವರ

2. ಕೆ. ಎಚ್. ಮುನಿಯಪ್ಪ

3. ಕೆ. ಜಾರ್ಜ್

4. ಎಂ. ಬಿ. ಪಾಟೀಲ

5. ಸತೀಶ ಜಾರಕಿಹೊಳಿ

6. ಪ್ರಿಯಾಂಕಾ ಖರ್ಗೆ

7. ರಾಮಲಿಂಗಾರೆಡ್ಡಿ

8. ಬಿ. ಝಡ್. ಜಮೀರ ಅಹ್ಮದ ಖಾನ್

ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿರುವ ಶಾಸಕರ ಪಟ್ಟಿ

ಈ ಕುರಿತು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ ಪ್ರಕಟಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌