ಕನ್ನಡ ಮಾಧ್ಯಮದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ ಬಸವನಾಡಿನ ಯುವಕ ಯಲಗೂರೇಶ ನಾಯಕ
ವಿಜಯಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಕಠಿಣ ಪ್ರರಿಶ್ರಮ ಮತ್ತು ಶ್ರದ್ಧೆ ಇದ್ದರೆ ಸಾಕು ಯಾವ ಮಾಧ್ಯಮವಾದರೇನು ಕನಸನ್ನು ನನಸು ಮಾಡಬಹುದು ಎಂಬುದಕ್ಕೆ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದ ಯುವಕ ಯಲಗೂರೇಶ ಅರ್ಜುನ ನಾಯಕ ಸಾಕ್ಷಿಯಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಯು ಪಿ ಎಸ್ ಸಿ ಪರೀಕ್ಷೆ ಪಡೆದು ರಾಷ್ಟ್ರ ಮಟ್ಟದಲ್ಲಿ 890ನೇ ಸ್ಥಾನ ಪಡೆದಿರುವ ಯುವಕ ಈಗ ವಿಜಯ.ಪುರ ಜೆಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದ್ದಾರೆ. ಈ ಸುದ್ದಿ ತಿಳಿದಿದ್ದೇ ತಡ ಯಲಗೂರೇಶ ನಾಯಕ […]
ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗೋತ್ಸವ ಕಾರ್ಯಕ್ರಮ
ವಿಜಯಪುರ: ಯೋಗೋತ್ಸವದ ಅಂಗವಾಗಿ ಮಾನವೀಯತೆಗಾಗಿ ಯೋಗ ಕಾರ್ಯಕ್ರಮ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನಡೆಯಿತು. ಕಾತ್ರಾಳ ಗುರುದೇವ ಆಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರ, ಶರೀರಶಾಸ್ತ್ರ ವಿಭಾಗ ಮತ್ತು ನವದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ […]
ಜೂ. 6ರಂದು ಜಿಲ್ಲಾದ್ಯಂತ 14 ಸ್ಥಳಗಳಲ್ಲಿ ಪಿಂಚಣಿ ಅದಾಲತ್- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ
ವಿಜಯಪುರ: ಸಾಮಾಜಿಕ ಭದ್ರತಾ ಯೋಜನಯೆಡಿ ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಜೂ. 6ರಂದು ಜಿಲ್ಲೆಯ 14 ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದ್ದಾರೆ. ಜೂ. 6 ರಂದು ಬೆ. 11 ಗಂಟೆಗೆ ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಅವರು ವಿಜಯಪುರ ನಗರದ ವಾರ್ಡ ನಂ.14ರ ಮಾಂಗಗಾರುಡಿ ತರುಣ ಸಂಘ ಸಮುದಾಯ ಭವನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಅಂಬಳನೂರ ಗ್ರಾಮದ ಶ್ರೀ […]