ಡಿಜಿಟಲ್ ಇಂಡಿಯಾ ವಿಶ್ವದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿರಲು ಕೊಡುಗೆ ನೀಡಿದೆ- ಡಾ. ಹರಿಕೃಷ್ಣ ಮಾರಮ

ವಿಜಯಪುರ: ಜಾಗತಿಕ ಮಟ್ಟದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿರುವುದಕ್ಕೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಕೊಡುಗೆ ಅಪಾರವಾಗಿದೆ ಎಂದು ಡಿಜಿಟಲ್ ಬ್ರ್ಯಾಂಡ ಅಂಬ್ಯಾಸಡರ್ ಹಾಗೂ ವಿಜನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ. ಹರಿಕೃಷ್ಟ ಮಾರಮ ಅಭಿಪ್ರಾಯಪಟ್ಟರು.

ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯವಹಾರ ಅಧ್ಯಯನ ವಿಭಾಗ ನವದೆಹಲಿಯ ಐ ಸಿ ಎಸ್‍ ಎಸ್‍ ಆರ್ ಸಹಯೋಗದೊಂದಿಗೆ ‘ಜಾಗತಿಕ ಯುಗದಲ್ಲಿ ಡಿಜಿಟಲ್ ಇಂಡಿಯಾ ಭವಿಷ್ಯದ ನಿರೀಕ್ಷೆಗಳು ವಿಷಯದ ಕುರಿತು ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದ ವಿಷಯದಲ್ಲಿ ಭಾರತವು ಜಗತ್ತನ್ನು ಹೇಗೆ ಮುನ್ನಡೆಸುತ್ತಿದೆ.  ಭಾರತವು ಹೊಂದಿರುವ ಜನಸಂಖ್ಯಾ ಲಾಭಾಂಶದ ಪ್ರಯೋಜನ ಮತ್ತು ಅದು ಜಾಗತಿಕ ಯುಗವನ್ನು ಹೇಗೆ ಮುನ್ನಡೆಸುತ್ತಿದೆ ಎಂಬುದನ್ನು ವಿವರಿಸಿದ ಅವರು ಭಾರತದ ಸಮಗ್ರ ಅಭಿವೃದ್ಧಿಗೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಮಹತ್ವವನ್ನು ಅವರು ವಿಶ್ಲೇಷಿಸಿದರು.

ವಿಜಯಪುರ ಮಹಿಳಾ ವಿವಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಹರಿಕೃಷ್ಟ ಮಾರಮ ಮಾತನಾಡಿದರು

ಭಾರತೀಯ ಆರ್ಥಿಕತೆಯ ಮೇಲೆ ಡಿಜಿಟಲ್ ಇಂಡಿಯಾ ಉಪಕ್ರಮಗಳ ಮಹತ್ವ ಮತ್ತು ಪ್ರಭಾವದ ಕುರಿತು ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ್ ವಿವರಿಸಿದರು.

ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ.ಎಸ್.ಬಿ.ಕಾಮಶೆಟ್ಟಿ ಮಾತನಾಡಿ, ಡಿಜಿಟಲೀಕರಣವು ಸಕಾರಾತ್ಮಕ ಫಲಿತಾಂಶವನ್ನು ತರಲು ಸರಿಯಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಎನ್. ಎಲ್. ಮಾತನಾಡಿ, ಡಿಜಿಟಲೀಕರಣವು ಭಾರತದ ಭವಿಷ್ಯವನ್ನು ನಿರ್ಮಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ. ಬಿ. ಎಸ್. ನಾವಿ ಮಾತನಾಡಿ, ಡಿಜಿಟಲ್ ಇಂಡಿಯಾ ವಿಷಯ ಇಂದಿನ ಅಗತ್ಯವಾಗಿದೆ.  ಡಿಜಿಟಲ್ ಯುಗದ ವಿಕಸನವು ಅನೇಕ ಬೆಳವಣಿಗೆಗಳಿಗೆ ಕಾರಣವಾಯಿತು ಮತ್ತು ಅವು ಫಲಪ್ರದ ಮೊಬೈಲ್ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ. ಕಾರ್ಯಕ್ರಮದ ಸಂಯೋಜಕ ಡಾ. ಚಂದ್ರಶೇಖರ, ಎಂ. ಮಠಪತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರೊ. ಅನಿತಾ ಆರ್. ನಾಟೇಕರ ವಂದಿಸಿದರು.  ಸಂಶೋಧನೆ ವಿದ್ಯಾರ್ಥಿನಿ ಪ್ರಿಯಾಂಕಾ ಬನ್ಸೊಡೆ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌