ದೇವು ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಅವಾರ್ಡ್

ವಿಜಯಪುರ: ಗೋವಾ ಇಂಟರನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂಟರ್‍ಟೇನಮೆಂಟ್ ಸೊಸೈಟಿ ಆಫ್ ಗೋವಾದಲ್ಲಿ ನಡೆದ ಫೆಸ್ಟಿವಲ್ ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬಸವ ನಾಡಿನ ಯುವಕ ದೇವು ಅಂಬಿಗ ಅವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡನ್ನು ಲಭಿಸಿದೆ. 

ಯೂನಿವರ್ಸಲ್ ಪಿಲ್ಮ್ ಮೇಕರ್ ಕೌನ್ಸಿಲ್ ಮತ್ತು ನವ ಕರ್ನಾಟಕ ಪಿಲ್ಮ್ ಅಕಾಡೆಮಿ ವತಿಯಿಂದ ಈ ಅವಾರ್ಡ್‍ನ್ನು ವಿತರಿಸಲಾಯಿತು.

ಜಿಲ್ಲೆಯ ಯುವ ಪ್ರತಿಭೆ ದೇವು ಕೆ ಅಂಬಿಗ ಈ ಹಿಂದೆ ಸತ್ಯಶೋಧಕ ಎಂಬ ಡಾಕ್ಯುಮೆಂಟರಿ ಮಾಡಿ ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಿ ಗಮನ ಸೆಳೆದಿದ್ದರು.  1827 ರಲ್ಲಿ ನಡೆದ ನೈಜ ಘಟನೆಯಾಧರಿತ ಮಹಾತ್ಮ ಜ್ಯೋತಿರಾವ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ ಚಿತ್ರ ಇದಾಗಿತ್ತು.  ಡಾ. ಜೆ. ಪಿ. ದೊಡಮನಿಯವರು ಬರೆದ ಮಹಾತ್ಮ ಜ್ಯೋತಿರಾವ ಫುಲೆ ಎಂಬ ನ್ಯಾಷನಲ್ ಅವಾರ್ಡ್ ಪಡೆದ ಗ್ರಂಥಾಧರಿತ ಚಿತ್ರವೇ ಈ ಸತ್ಯಶೋಧಕ ಚಿತ್ರವಾಗಿದೆ. ಈ ಚಿತ್ರಕ್ಕೆ ದೇವು ಕೆ ಅಂಬಿಗ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.  ಅಲ್ಲದೇ, ಈ ಡಾಕ್ಯೂಮೆಂಟರಿ ಮೇ 20 ಮತ್ತು 21 ರಂದು ಗೋವಾದಲ್ಲಿ ನಡೆದ ಇಂಟರನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ ನಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡನ್ನು ಪಡೆದಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಪ್ರಶಸ್ತಿ ಸ್ವೀಕರಿಸಿದ ದೇವು ಅಂಬಿಗ

ಈ ಸಂದರ್ಭದಲ್ಲಿ ಚಿತ್ರನಟಿ ಅನು ಪ್ರಭಾಕರ ಮುಖರ್ಜಿ ಮಾತನಾಡಿ, ಸಮಾಜದಲ್ಲಿ ಶೋಷಣೆಗೊಳಗಾದ ಜನರ ಬಾಳಿಗೆ ಬೇಳಕಾಗಿ, ನೋಂದವರ ಜೀವಕ್ಕೆ ಆಶಾಕಿರಣವಾದ ಕೀರ್ತಿ ಈ ಮಹಾತ್ಮ ಜ್ಯೋತಿರಾವ ಫುಲೆಯವರಿಗೆ ಸಲ್ಲುತದೆ.  ಹೆಣ್ಣು ಮನೆಯ ಹೊಸ್ತಿಲು ದಾಟಿ ಹೊರಗೆ ಹೊಗುವಂತಿರಲ್ಲಿ.  ಅಕ್ಷರ ಕಲಿತರೆ ಅವರಿಗೆ ಬಹಿಷ್ಕಾರದ ಗಂಟೆ ಮೊಳಗುತ್ತಿತ್ತು.  ಅಂದಿನ ಕಾಲದಲ್ಲಿ ಯಾರಿಗೂ ಹೆದರದೆ ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಸಿ ಹೆಣ್ಣು ಈ ಸಮಾಜದ ಕಣ್ಣು.  ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ವಾಕ್ಯದೊಂದಿಗೆ ಸಮಾದಲ್ಲಿ ಜಾಗೃತಿ ಮೂಡಿಸಿದ್ದು ಈಗ ಇತಿಹಾಸವಾಗಿದೆ.  ಈ ಹಿನ್ನೆಲೆಯನ್ನು ಚಿತ್ರದ ಮುಖಾಂತರ ಸಮಾಜಕ್ಕೆ ತೋರಿರುವುದು ನಿಜಕ್ಕೂ ಶ್ಲ್ಯಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಎಂ. ಎ. ಮುಮ್ಮಿಗಟ್ಟಿ, ಸಮಾಜ ಕಲ್ಯಾಣ ಮತ್ತು ಪುರಾತತ್ವ ನದಿ ಮತ್ತು ನ್ಯಾವಿಗೇಷನ್ ಸುಭಾಸಫಾಲ ದೇಸಾಯಿ, ಗೋವಾದ ಮಾಜಿ ಮೇಯರ್ ಉದಯ ಮಡಿಕರ್, ಗೋವಾ ಪಂಚಾಯಿತಿ ಮಹಿಳಾ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷೆ ಅನಿತಾ ಥೋರಟ್, ಸೇವನ್ ಕ್ಲಿಕ್ ಮಿಡಿಯಾ ಸಂಪಾದಕ ಗುರುದೀಪಸಿಂಗ್ ಜಿಲ್ಲಾ ಗೌವರ್ನರ್ ಲಯನ್ಸ್ ಇಂಟನ್ಯಾಷನಲ್ ಸುಗ್ಗಲ ಯಲ್ಮಿಲಿ, ಸಿಇಓ ಡ್ರೀಮ್ಸ್ ಈವೆಂಟ್ ನವದೆಹಲಿಯ ದೇಬಾಶಿಶ್ ಮೈತ್ರಾ, ಚಲನಚಿತ್ರ ವಿತರಕ, ನಿರ್ದೇಶಕ ರಾಜೇಶ ರಾಜ, ನಟ ನಿರ್ಮಾಪಕ, ಮುಂಬೈ ಸಿಇಓ ಜೈ ಎಂಟರಟೇನನ್‍ಮೆಂಟ್ ವಲ್ರ್ಡ್ ಜಯಪ್ರಭು ಲಿಂಗಾಯತ ಹಾಗೂ ವಿಜಯಪುರದ ಚಲನಚಿತ್ರ ನಟ ವಿನೋದ ಪಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌