ಗಾಳಿ ಸಹಿತ ಮಳೆಯಿಂದ ಬೆಳೆಹಾನಿ: ಜಂಬಗಿ(ಆ), ಹೊನ್ನಳ್ಳಿ ಗ್ರಾಮಗಳಿಗೆ ಡಿಸಿ ಡಾ. ದಾನಮ್ಮನವರ ಭೇಟಿ, ಪರಿಶೀಲನೆ

ವಿಜಯಪುರ: ವಿಜಯಪುರ ತಾಲೂಕಿನ ಜಂಬಗಿ(ಆ) ಮತ್ತು ಆಹೇರಿ ಹೊನ್ನಳ್ಳಿ ಗ್ರಾಮಗಳಲ್ಲಿ ಗಾಳಿ ಸಹಿತ ಮಳೆಯಿಂದಾಗಿ ಹಾನಿಗೀಡಾದ ಆಸ್ತಿಪಾಸ್ತಿಯನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನೆಗಳಿಗೆ ಹಾನಿಗೊಳಗಾಗಿರುವ ಕುರಿತು ಪ್ರಾಥಮಿಕ ವರದಿ ಬಂದ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಮೀಕ್ಷೆ ನಡೆಸಿ ವರದಿಯನ್ವಯ ನಿಯಮಾನುಸಾರ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ. ದಾನಮ್ಮನವರ ಗಾಳಿ ಮಳೆಯಿಂದಾಗಿ ಹಾನಿಗೀಡಾದ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

 

ತಾಲೂಕಿನ ಆಹೇರಿ, ಜಂಬಗಿ, ಹೊನ್ನಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರೈತರಾದ ಮಾದೇವ ಜೋತಪ್ಪ ಪೂಜಾರಿ ಸಿದ್ದಪ್ಪ ಯೋಗ ಪೂಜಾರಿಯವರ ಹಾನಿಗೊಳಗಾದ ಲಿಂಬೆ ಗಿಡ ಮತ್ತು ರಾಜು ಕೆರೂರ ಅವರ ದ್ರಾಕ್ಷಿ ಫಡಗಳು, ಮತ್ತು ಪೈಗಂಬರ್ ಜಾನ್‍ಸಾಬ್ ಮುಲ್ಲಾ ಅವರ ನಿಂಬೆಗಿಡಗಳ ಬೆಳೆಯನ್ನು ಪರಿಶೀಲನೆ ನಡೆಸಿದರು.  ಅಲ್ಲದೇ, ಪಿಡಿಓಗಳು, ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆದರು.  ಹಾನಿಗೊಳಗಾದ ಮನೆಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  ತೊಟಗಾರಿಕೆ ಬೆಳೆ ಹಾನಿ ಕುರಿತಂತೆ ತೋಟಗಾರಿಕೆ ಇಲಾಖೆಯಿಂದ, ಕೃಷಿ ಬೆಳೆ ಹಾನಿ ಕುರಿತು ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ವರದಿಯನ್ವಯ ನಿಯಮಾನುಸಾರ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮಾರ್ಗಸೂಚಿಯನ್ವಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಈ ಸಂದರ್ಭಧಲ್ಲಿ ವಿಜಯಪುರ ತಹಸೀಲ್ದಾರ ಸುರೇಶ ಮುಂಜೆ, ಕೃಷಿ ಇಲಾಖೆ ಉಪನಿರ್ದೇಶಕ ಪ್ರಕಾಶ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌