ಕ್ರೀಡೆಗಳು ಮಾನಸಿಕ ಒತ್ತಡದಿಂದ ಮುಕ್ತರಾಗಿ ಆತ್ಮಸ್ಥೈಯ೯ ಹೆಚ್ಚಿಸಲು ಸಹಕಾರಿಯಾಗಿವೆ- ಡಾ. ಮಹಾಂತೇಶ ಸಾಲಿಮಠ
ಬಾಗಲಕೋಟೆ: ಕ್ರೀಡೆಗಳು ಮಾನಸಿಕ ಒತ್ತಡದಿಂದ ಹೊರಬಂದು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಬಿ.ವಿ.ವಿಎಸ್. ಆಯುರ್ವೇದಿಕ್ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಹೇಳಿದರು. ಬಿ. ವಿ. ವಿ. ಎಸ್. ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಜಿಮಖಾನಾ ಕಮಿಟಿ ಉದ್ಘಾಟಿಸಿ ಅವರು ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋಮಿಯೋಪಥಿಕ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ ವಿ. ಹೂಲಿ, ಕ್ರೀಡೆಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಬೇಕು. ಇದಕ್ಕೆ […]
ಸಿದ್ದು ಸಂಪುಟ ಸೇರಿದ 24 ನೂತನ ಸಚಿವರು- ಆದರೆ, ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಕೆಪಿಸಿಸಿ ಸ್ಪಷ್ಟನೆ
ಬೆಂಗಳೂರು: ಕಳೆದ ಶನಿವಾರ ಎಂಟು ಜನ ಸಚಿವರ ಜೊತೆ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಸಂಪುಟಕ್ಕೆ ಈಗ ಹೊಸದಾಗಿ 24 ಜನ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನೂತನ ಸಚಿವರ ಪಟ್ಟಿ ಇಲ್ಲಿದೆ. ಎಚ್. ಕೆ. ಪಾಟೀಲ ಕೃಷ್ಣ ಭೈರೇಗೌಡ ಎನ್. ಚಲುವರಾಯಸ್ವಾಮಿ ಕೆ. ವೆಂಕಟೇಶ ಎಚ್. ಸಿ. ಮಹದೇವಪ್ಪ ಈಶ್ವರ […]
ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ- ಎಸ್ಪಿ ಡಾ. ಆನಂದಕುಮಾರ
ವಿಜಯಪುರ: ಪೋಲಿಸ್ ಇಲಾಖೆ ಜವಾಬ್ದಾರಿಯುತಗಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಸಾರ್ವಜನಿಕರೊಂದಿಗೆ ಸೌಜನ್ಯ ಮತ್ತು ಜನಸ್ನೇಹಿಯಾಗಿ ವರ್ತಿಸಬೇಕು ಎಸ್ಪಿ ಎಚ್. ಡಿ. ಆನಂದಕುಮಾರ ಸಿಬ್ಬಂದಿಗೆ ಕರೆ ನೀಡಿದ್ದಾರೆ. ನಗರದ ಪೊಲೀಸ್ ಪರೇಡ್ ಗ್ರೌಂಡ್‍ನಲ್ಲಿ ನಡೆದ ಪೊಲೀಸ್ ಪರೇಡ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮೇಲೆ ಪ್ರತಿಯೊಬ್ಬರೂ ಭರವಸೆ ಇಟ್ಟಿರುತ್ತಾರೆ. ಅವರ ಭರವಸೆ ಪೂರಕವಾಗಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಜನಸ್ನೇಹಿ ಪೋಲಿಸ್ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು. ಪೋಲಿಸರು ಕರ್ತವ್ಯದ ಒತ್ತಡ ನಡುವೆಯೂ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು […]
ಡಿಜಿಟಲ್ ಪರಿಸರದಲ್ಲಿ ಗ್ರಂಥಾಲಯ, ಗ್ರಂಥಪಾಲಕರ ಪಾತ್ರ ಬಹಳ ಮುಖ್ಯ- ಪ್ರೊ. ವೈ. ಎಂ. ಜಯರಾಜ
ವಿಜಯಪುರ: ಡಿಜಿಟಲ್ ಪರಿಸರದಲ್ಲಿ ಗ್ರಂಥಾಲಯ ಮತ್ತು ಗ್ರಂಥಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಪ್ರೊ. ವೈ. ಎಂ. ಜಯರಾಜ ಹೇಳಿದ್ದಾರೆ. ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎನ್ಇಪಿ- 2020 ಪರಿಣಾಮಕಾರಿ ಅನುಷ್ಠಾನದಲ್ಲಿ ಗ್ರಂಥಾಲಯ ವೃತ್ತಿಪರರಿಗೆ ಸಾಮರ್ಥ್ಯ ವರ್ಧನೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಪುಸ್ತಕಗಳು, ಓದುಗರು, ಸಿಬ್ಬಂದಿ […]