ಬಾಗಲಕೋಟೆ: ಕ್ರೀಡೆಗಳು ಮಾನಸಿಕ ಒತ್ತಡದಿಂದ ಹೊರಬಂದು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಬಿ.ವಿ.ವಿಎಸ್. ಆಯುರ್ವೇದಿಕ್ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಹೇಳಿದರು.
ಬಿ. ವಿ. ವಿ. ಎಸ್. ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಜಿಮಖಾನಾ ಕಮಿಟಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋಮಿಯೋಪಥಿಕ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ ವಿ. ಹೂಲಿ, ಕ್ರೀಡೆಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಬೇಕು. ಇದಕ್ಕೆ ಕ್ರೀಡೆಗಳು ಒಳ್ಳೆಯ ವೇದಿಕೆಯಾಗಿವೆ ಎಂದು ಹೇಳಿದರು.
ಈ ಸಂಧಭ೯ದಲ್ಲಿ ಕಾಲೇಜಿನ ನೂತನ ಸಂಸತ್ತಿನ ಪಧಾಧಿಕಾರಿಗಳಿಗೆ ಪುಷ್ಟ ಗುಚ್ಚ ನೀಡಿ ಗೌರವಿಸಲಾಯಿತು. ಅಲ್ಲದೇ, ಜಿಮಖಾನಾ ಕಮೀಟಿಯ ಎಲ್ಲ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಯೋಜಕ ಡಾ. ಮಂಜುನಾಥ ಪಾಟೀಲ, ಡಾ. ಪ್ರದೀಪ ರೆಡ್ಡಿ. ಪ್ರಾಧ್ಯಾಪಕರಾದ ಡಾ. ರವಿ ಕೋಟೆಣ್ಣವರ, ಡಾ. ಮಿಲಿಂದ ಬೆಳಗಾಂವಕರ, ಡಾ. ರುದ್ರೇಶ ಕೊಪ್ಪಳ. ಡಾ. ಅಮರೇಶ ಬಳಗಾನೂರ, ಡಾ. ಸುಧೀರ ಬೆಟಗೇರಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವಿದ್ಯಾ ಅಪೂವಾ೯ ಮತ್ತು ದೀಪಾ ಪ್ರಾಥಿ೯ಸಿದರು. ವಿದ್ಯಾರ್ಥಿನಿ ಶ್ರೇಯಾ ಮಾಳಕರ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾಥಿ೯ನಿ ಸಹನಾ ಹಿರೇಮಠ ನಿರೂಪಿಸಿದರು. ಪ್ರೀತಿ ಡಾಲಾಯ್ತರ ವಂದಿಸಿದರು.