ಸಿದ್ದು ಸಂಪುಟ ಸೇರಿದ 24 ನೂತನ ಸಚಿವರು- ಆದರೆ, ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಕೆಪಿಸಿಸಿ ಸ್ಪಷ್ಟನೆ

ಬೆಂಗಳೂರು: ಕಳೆದ ಶನಿವಾರ ಎಂಟು ಜನ ಸಚಿವರ ಜೊತೆ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಸಂಪುಟಕ್ಕೆ ಈಗ ಹೊಸದಾಗಿ 24 ಜನ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 34 ಜನ ಮಂತ್ರಿಗಳು ರಾಜ್ಯಪಾಲ, ಸಿಎಂ, ಡಿಸಿಎಂ, ಸ್ಪೀಕರ್ ಜೊತೆ ಗ್ರುಪ್ ಫೋಟೋ ತೆಗೆಸಿಕೊಂಡರು

ಅಧಿಕಾರ ಸ್ವೀಕರಿಸಿದ ನೂತನ ಸಚಿವರ ಪಟ್ಟಿ ಇಲ್ಲಿದೆ.

  1. ಎಚ್. ಕೆ. ಪಾಟೀಲ
  2. ಕೃಷ್ಣ ಭೈರೇಗೌಡ
  3. ಎನ್. ಚಲುವರಾಯಸ್ವಾಮಿ
  4. ಕೆ. ವೆಂಕಟೇಶ
  5. ಎಚ್. ಸಿ. ಮಹದೇವಪ್ಪ
  6. ಈಶ್ವರ ಖಂಡ್ರೆ
  7. ಕೆ. ಎನ್. ರಾಜಣ್ಣ
  8. ದಿನೇಶ ಗುಂಡೂರಾವ
  9. ಶರಣಬಸಪ್ಪ ದರ್ಶನಾಪುರ
  10. ಶಿವಾನಂದ ಪಾಟೀಲ
  11. ಆರ್. ಬಿ. ತಿಮ್ಮಾಪುರ
  12. ಎಸ್. ಎಸ್. ಮಲ್ಲಿಕಾರ್ಜುನ
  13. ಶಿವರಾಜ ತಂಗಡಗಿ
  14. ಶರಣ ಪ್ರಕಾಶ ಪಾಟೀಲ
  15. ಮಂಕಾಳ ವೈದ್ಯ
  16. ಲಕ್ಷ್ಮಿ ಹೆಬ್ಬಾಳಕರ
  17. ರಹೀಂ ಖಾನ
  18. ಡಿ. ಸುಧಾಕರ
  19. ಸಂತೋಷ ಲಾಡ
  20. ಎನ್. ಎಸ್. ಬೋಸರಾಜು
  21. ಭೈರತಿ ಸುರೇಶ
  22. ಮಧು ಬಂಗಾರಪ್ಪ
  23. ಎಂ. ಸಿ. ಸುಧಾಕರ
  24. ಬಿ. ನಾಗೇಂದ್ರ

ಖಾತೆ ಹಂಚಿಕೆ ನಕಲಿ ಪಟ್ಟಿ ವೈರಲ್ 

ಈ  ಮಧ್ಯೆ ನೂತನ ಸಚಿವರು ಅಧಿಕಾರ ಸ್ವೀಕರಿಸಿದ ನಂತರ ಖಾತೆ ಹಂಚಿಕೆಗಳ ಬಗ್ಗೆ ಪಟ್ಟಿಯೊಂದು ವೈರಲ್ ಆಗಿತ್ತು.  ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ನಕಲಿ ಪಟ್ಟಿ

ಇನ್ನೂ ಖಾತೆ ಹಂಚಿಕೆಯಾಗಿಲ್ಲ.  ಶೀಘ್ರದಲ್ಲಿ ಈ ಕುರಿತು ಶೀಘ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್: https://twitter.com/INCKarnataka/status/1662456878553788416?s=08

 

ಎಲ್ಲವೂ ನಿರೀಕ್ಷೆಯಂತೆ ನಡೆದರೆ ರವಿವಾರ ಎಲ್ಲ ಸಚಿವರ ಖಾತೆಗಳು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

Leave a Reply

ಹೊಸ ಪೋಸ್ಟ್‌