ಡಿಜಿಟಲ್ ಪರಿಸರದಲ್ಲಿ ಗ್ರಂಥಾಲಯ, ಗ್ರಂಥಪಾಲಕರ ಪಾತ್ರ ಬಹಳ ಮುಖ್ಯ- ಪ್ರೊ. ವೈ. ಎಂ. ಜಯರಾಜ

ವಿಜಯಪುರ: ಡಿಜಿಟಲ್ ಪರಿಸರದಲ್ಲಿ ಗ್ರಂಥಾಲಯ ಮತ್ತು ಗ್ರಂಥಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಪ್ರೊ. ವೈ. ಎಂ. ಜಯರಾಜ ಹೇಳಿದ್ದಾರೆ.

ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎನ್ಇಪಿ- 2020 ಪರಿಣಾಮಕಾರಿ ಅನುಷ್ಠಾನದಲ್ಲಿ ಗ್ರಂಥಾಲಯ ವೃತ್ತಿಪರರಿಗೆ ಸಾಮರ್ಥ್ಯ ವರ್ಧನೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಪುಸ್ತಕಗಳು, ಓದುಗರು, ಸಿಬ್ಬಂದಿ ಮತ್ತು ಸೌಲಭ್ಯಗಳು ಮುಖ್ಯವಾಗಿವೆ.  ಆದರೆ, ಡಿಜಿಟಲ್ ಪರಿಸರದಲ್ಲಿ ಗ್ರಂಥಾಲಯಗಳಲ್ಲಿ ಇ-ರಿಸೊರ್ಸ್, ಇ-ಜರ್ನಲ್ಸ್, ಇ-ಬುಕ್ಸ್‍ ಗಳನ್ನು ಸಂಗ್ರಹಿಸಿ ಓದುಗರಿಗೆ ಇಷ್ಟವಾದ ಮತ್ತು ಉಪಯುಕ್ತವಾದ ಮಾಹಿತಿಯನ್ನು ಕೊಡುವುದು ಗ್ರಂಥಪಾಲಕರ ಕರ್ತವ್ಯವಾಗಿದೆ.  ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ನಿರ್ವಹಿಸಲಿವೆ.  ಗ್ರಂಥಪಾಲಕರು ಬುಕ್ಸ್ ಕೊಡುವುದು ತೆಗೆದುಕೊಳ್ಳುವುದರ ಜೊತೆಗೆ ಓದುಗರಿಗೆ ಮಾಹಿತಿ ತಂತ್ರಜ್ಷಾನದ ಸದ್ಬಳಿಕೆ, ತರಭೇತಿ ನೀಡಬೇಕು.  ಗ್ರಂಥಾಲಯದ ಕಡೆ ಓದುಗರನ್ನು ಆಕರ್ಷಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾತನಾಡಿ ಎಐಸಿಟಿಇ ಮತ್ತು ವಿಶ್ವವಿದ್ಯಾಲಯಗಳು ಪ್ರತಿವರ್ಷ ಇಂತಿಷ್ಟು ಪುಸ್ತಕಗಳನ್ನು ಖರಿದಿಸಲೆಬೇಕು ಎಂದು ಮಾನದಂಡ ವಿಧಿಸಿವೆ.  ಅವುಗಳ ಸದ್ಬಳಿಕೆ ಓದುಗರ ಕೈಯಲ್ಲಿದೆ ಎಂದು ಹೇಳಿದರು.

ವಿಚಾರ ಸಂಕಿರಣ ಸಂಯೋಜಕ ಡಾ. ಎಂ. ಎಂ. ಬಾಚಲಾಪುರ ಕಾರ್ಯಕ್ರಮದ ಉದ್ದೇಶ ಮತ್ತು ವಿಚಾರ ಗೋಷ್ಠಿಗಳ ಬಗ್ಗೆ ಮಾಹಿತಿ ನೀಡಿದರು.  ಡಾ. ಪ್ರದೀಪ ಮಾಳಜಿ ಸ್ವಾಗತಿಸಿದರು.  ಉಪಪ್ರಾಚಾರ್ಯೆ ಡಾ. ಗೀತಾಂಜಲಿ ಪಾಟೀಲ ವಂದಿಸಿದರು.

Leave a Reply

ಹೊಸ ಪೋಸ್ಟ್‌