ಬಾಗಲಕೋಟೆ: ನಗರದ ಬವಿವಿ ಸಂಘದ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರು ದಿನಗಳ ಕಾಲ ಆಯೋಜಿಸಲಾದ ಖೇಲ್ ಔರ ಕಲಾ ವಾಷಿ೯ಕ ಕ್ರೀಡಾಕೂಟಕ್ಕೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸಿ. ಡೂಗನವರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿದ್ಯಾಥಿ೯ಗಳಿಗೆ ಶೈಕ್ಷಣಿಕ ಪಠ್ಯಗಳಲ್ಲಿ ಯಶಸ್ವಿಯಾಗಲು ಕ್ರೀಡೆಗಳು ಅವಶ್ಯ. ಸದೃಢವಾದ ಶರೀರದಲ್ಲಿ ಮಾತ್ರ ಸದೃಡ ಮನಸ್ಸು ಇರಲು ಸಾಧ್ಯ ಎಂದು ಹೇಳಿದರು.
ಕಾಲೇಜನ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾಜು೯ನ ಸಾಸನೂರ ಮಾತನಾಡಿ, ಕ್ರೀಡೆಗಳು ಶಿಸ್ತು, ಸಮಯಪ್ರಜ್ಞೆ ಮತ್ತು ಮಾನಸಿಕ ಸ್ಥೈಯ೯ ವೃದ್ಧಿಸಲು ಸಹಕಾರಿಯಾಗಿವೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಅರುಣ.ವಿ. ಹೂಲಿ. ಕ್ರೀಡಾ ಸಂಯೋಜಕ ಡಾ. ಮಂಜುನಾಥ ಪಾಟೀಲ, ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ. ಡಾ. ರುದ್ರೇಶ ಕೊಪ್ಪಳ, ಡಾ. ಅಮರೇಶ ಬಳಗಾನೂರ. ಡಾ. ವಿಜಯಲಕ್ಷ್ಮಿ ಪಾಟೀಲ. ಡಾ. ಸುಧೀರ ಬೆಟಗೇರಿ, ಸಾಂಸ್ಕೃತಿಕ ಸಂಯೋಜಕ ಡಾ. ಪ್ರದೀಪ ರೆಡ್ಡಿ ಉಪಸ್ಥಿತರಿದ್ದರು.
ಈ ಸಂದಭ೯ದಲ್ಲಿ ವಿದ್ಯಾಥಿ೯ ಪ್ರತಿನಿಧಿಗಳಾದ ಶಂಕರ ಅಮರಣ್ಣವರ ಮತ್ತು ಧನುಶ ಕ್ರೀಡಾ ಜ್ಯೋತಿಯನ್ನು ತಂದರು. ಪ್ರಜ್ಞಾ ನಾಯಕ ಸ್ವಾಗತಿಸಿದರು. ಅನುಶ್ರೀ ಶೆಟ್ಟರ ಪರಿಚಯಿಸಿದರು. ತನ್ವಿ ನುಗ್ಗಾನಟ್ಟಿ ನಿರೂಪಿಸಿದರು.