ಬೆಂಗಳೂರು: ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನಾಚರಣೆ ಅಂಗವಾಗಿ ಭಾರತದ ಅತ್ಯಂತ ದೊಡ್ಡ ಕ್ರೌಡ್ ಫಂಡಿಂಗ್ ಪ್ಲಾಟ್‍ಫಾರಂ ಮಿಲಾಪ್ ನಗರದ ಕ್ಯಾನ್ಸರ್ ಗೆದ್ದವರಿಗೆ ಬೆಂಬಲಿಸಲು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಮತ್ತು ಬೆಂಗಳೂರು ಹೇರ್ ಡೊನೇಷನ್ ಸಹಯೋಗದಲ್ಲಿ ಒಂದು ದಿನವಿಡೀ ಕಾರ್ಯಕ್ರಮ ನಡೆಯಿತು.
ನಗರದ ಸಲೂನ್‍ಗೆ ಕೂದಲು ದಾನ ನೀಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ಕ್ಯಾನ್ಸರ್ ಗೆದ್ದವರು, ಅವರ ಕುಟುಂಬಗಳ ಭೇಟಿ ಮತ್ತು ದಾನಿಗಳಿಗೆ ಈ ಸ್ಥಿತಿಯ ಕುರಿತು ಅರಿವನ್ನು ಮೂಡಿಸುವುದು ಮತ್ತು ರೋಗದ ವಿರುದ್ಧ ಹೋರಾಡುವಲ್ಲಿ ಅವರ ಧೈರ್ಯ ನೀಡಲಾಯಿತು.
ನಗರದ ಎಚ್ ಎಸ್ ಸಲೂನ್‍ನಲ್ಲಿ 15ಕ್ಕೂ ಹೆಚ್ಚು ಜನರು ಕೂದಲು ದಾನ ನೀಡಿದರು. ಮಹಿಳೆಯಷ್ಟೇ ್ಲ್ಲ, ಪುರುಷರು ಹಾಗೂ ಯುವತಿಯರೂ ಈ ಸದುದ್ದೇಶದ ಕಾರ್ಯಕ್ರಮಮಕ್ಕೆ ತಮ್ಮ ಬೆಂಬಲ ನೀಡಿದರು. 10 ವರ್ಷದ ಪುಟ್ಟ ಹುಡುಗಿ ಲಿಪಿ ಸಿಂಡೆರೆಲ್ಲಾ ತಲೆಕೂದಲು ತೆಗೆಸಿಕೊಂಡರೂ ಆಕೆಯ ಕೂದಲು ದಾನ ನೀಡುವುದರಲ್ಲಿ ಆಕೆ ಮಾಡುತ್ತಿರುವ ಪರಿಣಾಮದ ಕುರಿತು ಅರ್ಥ ಮಾಡಿಕೊಂಡು ರೋಮಾಂಚನಗೊಂಡಳು.
ಒಂದು ಅಂದಾಜಿನಂತೆ ಭಾರತದಲ್ಲಿ ಕಳೆದ ವರ್ಷ 1461427 ಕ್ಯಾನ್ಸರ್ ಪ್ರಕರಣಗಳನ್ನು ಗುರುತಿಸಲಾಗಿತ್ತು. ದತ್ತಾಂಶದ ಪ್ರಕಾರ ಭಾರತದಲ್ಲಿ ಒಂಬತ್ತರಲ್ಲಿ ಒಬ್ಬರು ತಮ್ಮ ಜೀವಿತಕಾಲದಲ್ಲಿ ಕ್ಯಾನ್ಸರ್ ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‍ಗಳಿಂದ ಬಾಧಿತರಾಗುವ ಸಂಭವನೀಯತೆ ಹೆಚ್ಚು. ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್‍ಗಳು ಹೆಚ್ಚು, ಮಕ್ಕಳಲ್ಲಿ ಲಿಂಫಾಯ್ಡ್ ಲ್ಯೂಕೇಮಿಯಾ ಹೆಚ್ಚಿರುತ್ತದೆ. 2020ಕ್ಕೆ ಹೋಲಿಸಿದರೆ 2025ಕ್ಕೆ ಕ್ಯಾನ್ಸರ್ ಪ್ರಕರಣಗಳು ಶೇ.12.8ರಷ್ಟು ಹೆಚ್ಚಾಗುವ ಅಂದಾಜಿದೆ.
ಕ್ಯಾನ್ಸರ್ ಇತಿಹಾಸವನ್ನು ಹೊಂದಿದ ಜನರನ್ನು ಗುರುತಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಕ್ಯಾನ್ಸರ್ ಗೆದ್ದವರು ಮತ್ತು ಅವರ ಕುಟುಂಬಗಳು ಎದುರಿಸುವ ಸವಾಲುಗಳು ಮತ್ತು ಅವರಿಗೆ ಈ ಸವಾಲುಗಳನ್ನು ಎದುರಿಸಿ ಜೀವಿಸುವ ಸಾಮಥ್ರ್ಯಗಳ ಕುರಿತು ಅರಿವನ್ನು ಹೆಚ್ಚಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ರೋಗ ಪರೀಕ್ಷೆಯ ವೈಯಕ್ತಿಕ ಕಥೆಗಳು, ರೋಗದ ದೀರ್ಘ ಪರಿಣಾಮಗಳು, ಭಾವನಾತ್ಮಕ ಸಂಕಷ್ಟಗಳ ಕುರಿತು ಅನುಭವ ಹಂಚಿಕೊಂಡರು. ಅಷ್ಟೇ ಅಲ್ಲ, ಈ ರೋಗದಿಂದ ಮುಕ್ತರಾಗುವ ಪ್ರಯಾಣದಲ್ಲಿ ಹೇಗೆ ಸಮುದಾಯವು ಒಟ್ಟಿಗೆ ಬಂದಿತು ಎಂಬುದರ ಕುರಿತು ಮಾಹಿತಿ ನೀಡಿದರು.
ನಂತರ ಎಲ್ಲರೂ ಲಾಫ್ಟರ್ ಯೋಗದಲ್ಲಿ ಭಾಗವಹಿಸಿದರು. ಈ ಯೋಜನೆಯಡಿ ಜನರಿಗೆ ಕ್ಯಾನ್ಸರ್‍ನಂಥ ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರುವಾಗ ನಗುವಿನ ಮೂಲಕ ಹೇಗೆ ಗುಣಪಡಿಸಿಕೊಳ್ಳಬಹುದು ಎನ್ನುವ ಪರಿಕಲ್ಪನೆ ಹೊಂದಿದೆ.
ಮಿಲಾಪ್‍ನ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಅನೊಜ್ ವಿಸ್ವನಾಥನ್ ಮಾತನಾಡಿ, ಮಿಲಾಪ್ ನಲ್ಲಿ ದೇಶಾದ್ಯಂತ ಕ್ಯಾನ್ಸರ್ ಗೆದ್ದವರಿಗೆ ಅವರ ರೋಗ ಪರೀಕ್ಷೆಯಿಂದ ಚಿಕಿತ್ಸೆಯವರೆಗೆ ಮತ್ತು ನಂತರದ ದೀರ್ಘಾವಧಿ ಆರೈಕೆಗೆ ನೆರವಾಗುವ ವಿಶ್ವಾಸ ಹೊಂದಿರುವುದಕ್ಕೆ ಬಹಳ ವಿನೀತ ಮತ್ತು ಗೌರವ ಹೊಂದಿದ್ದೇವೆ. ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನದ ಈ ವರ್ಷದ ವಿಷಯ ಆರೈಕೆಯ ಅಂತರ ಭರ್ತಿ ಮಾಡಿ ಎನ್ನುವುದಾಗಿದೆ. ನಾವು ಕ್ಯಾನ್ಸರ್ ವಿರುದ್ಧ ಹೋರಾಡುವವರು ಮತ್ತು ಅವರ ಕುಟುಂಬಗಳನ್ನು ಯಾವುದೇ ರೀತಿಯಲ್ಲಾದರೂ ಬೆಂಬಲಿಸಲು ಪ್ರತಿಯೊಬ್ಬರನ್ನೂ ಉತ್ತೇಜಿಸುತ್ತೇವೆ ಎಂದು ಹೇಳಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಜವೇರಾ ಫಾತಿಮಾ, ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನವು ನಮ್ಮ ಮಿತಿ ನಿರ್ಧರಿಸುವುದಿಲ್ಲ. ನಮ್ಮ ಪರಿಶ್ರಮದಿಂದ ನಾವು ಗೆಲ್ಲುತ್ತೇವೆ. ಇದು ಸಾಧಿಸಿದ ಮೈಲಿಗಲ್ಲುಗಳ, ನಡೆಸಿದ ಯುದ್ಧಗಳು ಮತ್ತು ಗೆದ್ದ ವಿಜಯಗಳ ಮೈಲಿಗಲ್ಲುಗಳ ಸಂಭ್ರಮಾಚರಣೆಯಾಗಿದೆ ಎಂದು ಹೇಳಿದರು.
ಮಿಲಾಪ್ ಭಾರತದಲ್ಲಿ ಕ್ಯಾನ್ಸರ್ ಆರೈಕೆಗೆ ಹಣಕಾಸು ಪೂರೈಸುವಲ್ಲಿ ವಿಶ್ವಾಸಾರ್ಹ ಹೆಸರಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಫ್ಲ್ಯಾಟಫಾರ್ಮ್ ವೈದ್ಯಕೀಯ ತುರ್ತುಗಳಲ್ಲಿ ಹಲವಾರು ಜೀವಗಳಿಗೆ ಪರಿಣಾಮ ಬೀರಿದೆ. ಕ್ಯಾನ್ಸರ್ ಚಿಕಿತ್ಸೆಗೆ ಹಣ ಸಂಗ್ರಹಿಸಲು ಮತ್ತು ಎಲ್ಲ ವಯೋಮಾನದ ಗುಂಪುಗಳಿಗೆ ದೀರ್ಘಾವಧಿ ಆರೈಕೆಗೆ ಯಶಸ್ವಿಯಾಗಿ ನೆರವಾಗಿದೆ. ಮಿಲಾಪ್ ಬಳಕೆದಾರರಿಗೆ ಕ್ರೌಡ್ ಫಂಡಿಂಗ್‍ಗೆ ತಡೆರಹಿತ ಮತ್ತು ಸುರಕ್ಷಿತ ಮಾರ್ಗದಲ್ಲಿ ಆದ್ಯತೆಯಾಗಿದೆ ಮತ್ತು ಅಗತ್ಯವಿದ್ದವರಿಗೆ ನೆರವಾಗುತ್ತದೆ ಎಂದು ಅವರು ಹೇಳಿದರು.