ವಿಜಯಪುರ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕೆ. ಎಚ್. ಪಿ. ಟಿ ಸಹಯೋಗದಲ್ಲಿ ಗ್ರಾಮ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲೆಯ ನಾನಾ ನರೇಗಾ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ, ನಿಡಗುಂದಿ ತಾಲೂಕಿನ ಯಲಗೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಯಿತು.
ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಶಿಬಿರಕ್ಕೆ ದೇವರ ಹಿಪ್ಪರಗಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಸ್. ಎಂ. ನ್ಯಾಮಣ್ಣವರ ಚಾಲನೆ ನೀಡಿದರು. ನಿಡಗುಂದಿ ತಾಲೂಕಿನ ಯಲಗೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸನಕುಂಟೆ ಮತ್ತು ಯಲ್ಲಮನ ಬೂದಿಹಾಳ ಗ್ರಾಮದಲ್ಲಿ ನಡೆದ ಆರೋಗ್ಯ ಶಿಬಿರಕ್ಕೆ ಗ್ರಾ. ಪಂ. ಕಾರ್ಯದರ್ಶಿ ಅಜೀಜ್ ಬಾರೆ ಇಮಾಮ ಹಾಗೂ ನಾಗಠಾಣ ಗ್ರಾಮದ ಶಿಬಿರಕ್ಕೆ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಕಾಸಿಮಸಾಬ ಮಸಳಿ ಚಾಲನೆ ನೀಡಿದರು.
ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗ್ರಾಮ ಆರೋಗ್ಯ ಅಭಿಯಾನ ಆಯೋಜಿಸಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಗ್ರಾಮೀಣ ಮತ್ತು ನರೇಗಾ ಕೂಲಿಕಾರರ ಆರೋಗ್ಯ ಸುಧಾರಣೆಯಾದರೇ ಗ್ರಾಮದ ಆರೋಗ್ಯ ಸುಧಾರಣೆಯಾಗುತ್ತದೆ ಎಂಬ ಉದ್ಧೇಶದಿಂದ ಸರಕಾರ ಈ ಅಭಿಯಾನವನ್ನು ಆಯೋಜಿಸಿದೆ. ಮೇ 22 ರಿಂದ ಆರಂಭವಾದ ಈ ಅಭಿಯಾನವು ಜೂನ್ 22ರ ವರೆಗೆ ಒಂದು ತಿಂಗಳು ನಡೆಯಲಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಮುದಾಯ ಕಾಮಗಾರಿ ಸ್ಥಳದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಎಲ್ಲ ಕೂಲಿಕಾರರಿಗೆ ಆರೋಗ್ಯ ಭಾಗ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ಅಭಿಯಾನ ಆಯೋಜಿಸಲಾಗಿದ್ದು, ಎಲ್ಲರೂ ಈ ಅಭಿಯಾನದ ಲಾಭ ಪಡೆಯಬೇಕು. ಮತ್ತು ತಮ್ಮಲ್ಲಿ ಏನಾದರೂ ಆರೋಗ್ಯ ಸಂಬಂಧಿ ಸಂದೇಹಗಳಿದ್ದಲ್ಲಿ ಕೇಳಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಲಾಯಿತು.
ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಜಿ.ಸಿ.ಕನ್ನೊಳ್ಳಿ, ಕೆ.ಎಚ್.ಪಿ.ಟಿ ತಾಲೂಕು ಸಂಯೋಜಕರಾದ ಅಂಜನಾದೇವಿ ಹೂಗಾರ, ತಾಂಡಾ ರೋಜಗಾರ್ ಮಿತ್ರ ವಿನೋದ ಮುದಾಯ ಆರೋಗ್ಯ ಅಧಿಕಾರಿ ಡಾ.ರಮೇಶ ಚೌದರಿ ಅವರು ತಾಲ್ಲೂಕು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಸಂಯೋಜನಾಧಿಕಾರಿ ದಸ್ತಗೀರ್ ಗುಡಿಹಾಳ, ಬಿಲ್ ಕಲೆಕ್ಟರ್ ಗೋವಿಂದ ಹಿರೇಮನಿ, ಗ್ರಾಮ ಪಂಚಾಯತಿಯ ನಾಗರಾಜ್ ದೊಡಮನಿ, ಆರೋಗ್ಯ ಇಲಾಖೆಯ ಎಸ್.ಆರ್.ದೊಡ್ಡಮನೆ, ಕಲ್ಮೇಶ ಹೂಗಾರ ಹಾಗೂ ಕಾಯಕ ಬಂಧು ಶೃತಿ ಮಂಜುನಾಥ ಕನ್ನೂರ, ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿ ದತ್ತಾತ್ರೇಯ ಜೋಶಿ, ತಾಂತ್ರಿಕ ಸಂಯೋಜಕರಾದ ಪರಶುರಾಮ ಶಹಪೂರ, ತಾಲೂಕ ಪಂಚಾಯತಿಯ ಐಇಸಿ ಸಂಯೋಜಕರಾದ ರಾಘವೇಂದ್ರ ಭಜಂತ್ರಿ, ತಾಲೂಕು ಕೆ.ಎಚ್.ಪಿ.ಟಿ ಸಂಯೋಜಕರಾದ ಶಿವಾನಂದ ಧಶವಂತ ಹಾಗೂ ಆಶಾ ಕಾರ್ಯಕರ್ತರು ,ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.