ವಿಜಯಪುರ: ನಗರದ ಶ್ರೀ ಮೌನೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ನೂತನ ಶಾಖೆಯನ್ನು ಶ್ರೀ ಸೋಪಾನಂದ ಮಹಾಸ್ವಾಮಿಗಳು ಗಂವಾರ ಹಾಗೂ ಸಹಕಾರ ಸಂಘಗಳ ಇಲಾಖೆ ಉಪನಿಬಂಧಕ ಸಿ. ಎಸ್. ನಿಂಬಾಳ, ಎಸ್. ಜಿ. ಕುಂಬಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ. ಎಸ್. ನಿಂಬಾಳ ಮೌನೇಶ್ವರ ಪತ್ತಿನ ಸಹಕಾರ ಸಂಘವು ಇಲ್ಲಿಯವರೆಗೆ ಉತ್ತಮ ಕೆಲಸ ಮಾಡುತ್ತಿದ್ದು ಗ್ರಾಹಕರಿಗೆ ಅನುಕೂಲವಾಗಲು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಕೋರಿದರು.
ಪ್ರಕಾಶ ಮಹಾರಾಜ ಕನ್ನೂರ ಮಾತನಾಡಿ, ನೂತನ ಶಾಖೆಯ ಆರಂಭದಿಂದಾಗಿ ಈ ಭಾಗದಲ್ಲಿ ಸಹಕಾರ ಸಂಘ ಕೊರತೆ ನೀಗಿದೆ. ವ್ಯವಸ್ಥಾಪಕರು ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ಜನಾನುರಾಗಿ ಆಗಲಿ ಎಂದು ಹೇಳಿದರು.
ಸಮುದಾಯ ಭವನದ ಲೋಕಾರ್ಪಣೆ ಮಾಡಿದ ಶ್ರೀ ಸೋಪಾನಂದ ಗಂವಾರ ಮಾತನಾಡಿ, ವಿಶ್ವಕರ್ಮ ಸಮಾಜ ಹಿಂದುಳಿದ ಸಮಾಜವಾದೆ. ಆದರೆ, ಸಮಾಜದ ಸಾಧನೆ ಮೆಚ್ಚುವಂಥದ್ದು. ಮೌನೇಶ್ವರ ಪತ್ತಿನ ಸಹಕಾರ ಸಂಘದ ಈ ಶಾಖೆ ಜನರ ಆಶೋತ್ತರಗಳನ್ನು ಈಡೇರಿಸಿ ಸತತ ಆರ್ಥಿಕ ಲಾಭ ಗಳಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಭಾಕರ ಪೂಜಾರಿ, ಡಿ. ಎಚ್. ಪಂಡಿತ, ಶ್ರೀಕಾಂತ ಕುಂದನಗಾರ, ಎಂ. ಎಸ್. ಪಾಟೀಲ, ಸುಭಾಸ ಸೋನಾರ ಮಾತನಾಡಿದರು.
ಮಹಾದಾನಿ ಪ್ರಕಾಶ ವಿ. ಸೋನಾರ, ವಿಲಾಸ ಉದಯ ಸೋನಾರ, ಪರಮಾನಂದ ಬಡಿಗೇರ, ಎ. ಜೆ. ಬಡಿಗೇರ, ದೇವೇಂದ್ರಪ್ಪ ಬಡಿಗೇರ ಯಾಳವಾರ, ಕುಶಾಲ ಕುಂದನಗಾರ, ಮೌನೇಶ ಆರ್. ಪತ್ತಾರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಭಾಗ್ಯಶ್ರೀ ಬಡಿಗೇರ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಎ. ಜೆ. ಬಡಿಗೇರ ಸ್ವಾಗತಿಸಿದರು. ಅಧ್ಯಕ್ಷ ಆರ್. ಕೆ. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಬಡಿಗೇರ ನಿರೂಪಿಸಿದರು. ಮೋಹನ ಸೋನಾರ ವಂದಿಸಿದರು.
ಮುಖಂಡರಾದ ವಿ. ವಿ. ಸೋನಾರ, ಯು. ಡಿ. ಪಂಚಾಳ, ಶಿವುಕುಮಾರ ಬಿರಾದಾರ, ವಿಜಯಕುಮಾರ ಪಾಠಕ, ನೀಲಕಂಠ ದುಬುಲಗುಂಡಿ, ನಾಗರಾಜ ಪತ್ತಾರ, ಕಟ್ಟೆಪ್ಪ ಬಡಿಗೇರ, ರಾಜು ಬಡಿಗೇರ, ಶೇಷÀಪ್ಪ ಬಡಿಗೇರ, ಶಿವುಕುಮಾರ ಆಚಾರ್ಯ, ಮಹೇಶ ಪತ್ತಾರ ಕನಮಡಿ, ಶ್ರೀಧರ ಬಡಿಗೇರ, ಮುರಳಿ ಪತ್ತಾರ ಉಪಸ್ಥಿತರಿದ್ದರು.