ದೀಪಕ ಶಿಂತ್ರೆ ಅವರಿಗೆ ಪತ್ರಕರ್ತ ರತ್ನ ಪ್ರಶಸ್ತಿ

ವಿಜಯಪುರ: ನಗರದ ಹಿರಿಯ ಪತ್ರಕರ್ತ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಖಜಾಂಚಿ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ಪತ್ರಕರ್ತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ1998ರಿಂದ ಸಕ್ರೀಯರಾಗಿರುವ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರದ ಮರಾಠಿ ದಿನಪತ್ರಿಕೆಗಳಾದ ಸಂಚಾರ, ತರುಣ ಭಾರತ, ಸ್ವರಾಜ್ಯ (ಸೊಲಾಪೂರ), ಲಲಕಾರ, ಮಹಾ ಸತ್ತಾ (ಸಾಂಗಲಿ) ಅಲ್ಲದೇ ಬೆಳಗಾವಿಯಿಂದ ಪ್ರಕಟವಾಗುವ ಪುಡಾರಿ ಹಾಗೂ ಸ್ವತಂತ್ರ ಪ್ರಗತಿ ಮರಾಠಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.  ಅಲ್ಲದೇ, ಕೈಫಿಯತ್ […]

ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯ ಈಡೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ

ವಿಜಯಪುರ: ನಗರದಲ್ಲಿ ಮೇ 27 ಮತ್ತು 28 ರಂದು ನಡೆದ 9ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾ ಬಳಗ ಮ್ತತು ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಮೇ 27 ಮತ್ತು 28 ರಂದು ವಿಜಯಪುರದಲ್ಲಿ […]

ಬುಧವಾರ ಶಾಲೆಗಳು ಪುನಾರಂಭ: ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ಅಗತ್ಯ ಸಿದ್ಧತೆ- ಜಿ. ಪಂ. ಸಿಇಒ ರಾಹುಲ ಶಿಂಧೆ ಮನವಿ

ವಿಜಯಪುರ: 2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31 ಬುಧವಾರದಿಂದ ಪ್ರಾರಂಭವಾಗುತ್ತಿದ್ದು,ಶಾಲಾ ಕೊಠಡಿ ಹಾಗೂ ಶಾಲಾ  ಆವರಣವನ್ನು ಸ್ವಚ್ಛಗೊಳಿಸಿ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಸಿಇಓ ರಾಹುಲ್ ಶಿಂಧೆ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ 3345 ಶಾಲೆಗಳಲ್ಲಿ 5.28 ಲಕ್ಷ ಮಕ್ಕಳಿದ್ದು, ಶಾಲೆಗಳನ್ನು ಅಲಂಕರಿಸಿ ಮಕ್ಕಳನ್ನು ಸ್ವಾಗತಿಸಲು ಕ್ರಮ ಕೈಗೊಳ್ಳಲಾಗಿದೆ.  ಎಲ್ಲ ಮಕ್ಕಳಿಗೂ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಲು ಸಹ ಸಿದ್ಧತೆ […]

ವಿಜಯಪುರ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾನಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲನೆ ನಡೆಸಿದರು. ಹಡಗಲಿ ಎಲ್ ಟಿ  ಗ್ರಾಮದ  ಅಂಗನವಾಡಿ ಕಟ್ಟಡ ನಿರ್ಮಾಣದ ಕಾರ್ಯ ಪರಿಶೀಲಿಸಿದರು. ಹಡಗಲಿ   ಎಲ್ ಟಿ-2 ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಅಂಗನವಾಡಿ ಮಕ್ಕಳಿಗೆ ಒದಗಿಸುವ ಪೌಷ್ಠಿಕ ಆಹಾರದ ವಿವರ ಪಡೆದುಕೊಂಡರು.  ಹಡಗಲಿ ಗ್ರಾಮದ ಸರಕಾರಿ ಹಿರಿಯ […]

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿ- ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಮಳೆಗಾಲ ಆರಂಭವಾಗಿರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮತ್ತು ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂಮತ್ತು ಮಲೇರಿಯಾ ರೋಗಗಳ ಸ್ಥಿತಿಗತಿ, ನಿವಾರಣೆ ಹಾಗೂ ಕಾರ್ಯತಂತ್ರದ ಬಗ್ಗೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮುಂಜಾಗೃತೆ ಕ್ರಮಗಳನ್ನು ಕೈಗೊಂಡು ಡೆಂಗ್ಯೂ ಮಲೇರಿಯಾ ರೋಗ […]