ದನ ತಿವಿದು ಗಾಯಗೊಂಡಿದ್ದ ಮಗುವಿನ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸಿದ ಜೆ ಎಸ್ ಎಸ್ ಆಸ್ಪತ್ರೆ ವೈದ್ಯರು

ವಿಜಯಪುರ: ದನ ತಿವಿದ ಕಾರಣ ಕೆಳತುಟಿಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಪುಟ್ಟ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಸವ ನಾಡಿನ ಜೆ ಎಸ್ ಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ತಿಕೋಟಾ ತಾಲೂಕಿನ ಮಲಕನದೇವರ ಹಟ್ಟಿಯ ಎರಡು ವರ್ಷದ ಬಾಲಗಿ ಮನೆಯ ಮುಂದೆ ಆಟವಾಡುವ ಸಂದರ್ಭದಲ್ಲಿ ದನ ತಿವಿದ ಪರಿಣಾಮ ಆಕೆಯ ಕೆಳತುಟಿಯ ಭಾಗದಲ್ಲಿ ಕೆನ್ನೆ ಕತ್ತರಿಸಿತ್ತು.  ಗಂಭೀರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ಆಕೆಯ ಪೋಷಕರು ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ […]

ಬಿಜೆಪಿಯವರು ಇಂಥದ್ದನ್ನು ಹೇಳಿಯೇ 65ಕ್ಕೆ ಬಂದು ನಿಂತಿದ್ದಾರೆ- ಲಕ್ಷ್ಮಣ ಸವದಿ ವಾಗ್ದಳಿ

ವಿಜಯಪುರ: ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಗಳ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳ ಕುರಿತು ಮಾಜಿ ಡಿಸಿಎಂ ಮತ್ತು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಇಂಚಗೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಈಗ 65 ಸ್ಥಾನಗಳಿಗೆ ಬಂತು ನಿಂತಿದ್ದಾರೆ.  ಒಳ್ಳೆಯ ಕೆಲಸ ಮಾಡುವ ಸರಕಾರವನ್ನು ಪ್ರೋತ್ಸಾಹಿಸಬೇಕು.  ಅನಾವಶ್ಯಕವಾಗಿ ಟೇಕೆ ಮಾಡುವುದು […]

ಬಸವ ನಾಡಿನಲ್ಲಿ ವಿನೂತನ ಕಾರ್ಯಕ್ರಮ- ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಕರೆತಂದು ಶಾಲೆ ಪ್ರಾರಂಭೋತ್ಸವ

ವಿಜಯಪುರ: ಬೇಸಿಗೆ ಬಿಡುವಿನ ನಂತರ ಇಂದಿನಿದ ಶಾಲೆಗಳು ಆರಂಭವಾಗಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಬವಸ ನಾಡಿನ ಶಾಲೆಯೊಂದು ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದೆ. ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವಿನೂತನವಾಗಿ ಸ್ವಾಗತಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.  ವಿದ್ಯಾರ್ಥಿಗಳನ್ನು ವಿಶೇಷವಾಗಿ ಸಿಂಗರಿಸಲಾಗಿದ್ದ ಎತ್ತಿನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಶಾಲೆಗೆ ಕರೆತರಲಾಯಿತು.  ಈ ಮೂಲಕ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಕಲ್ಪಿಸಲಾಯಿತು. ಈ ಕಾರ್ಯಕ್ರಮದದಲ್ಲಿ ಅತಿಥಿಯಾಗಿ ಪಾಲ್ಗೊಂಡ […]