ವಿಜಯಪುರ: ನಗರದ ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ವೃಕ್ಷ ದತ್ತು ಯೋಜನೆ ಪ್ರಾರಂಭಿಸಲಾಗಿದೆ.
ಈ ಯೋಜನೆಯಂತೆ ವಿದ್ಯಾರ್ಥಿಗಳು ಶಾಲೆಗೆ ಗಿಡಗಳನ್ನು ನೀಡಿ ಒಂದು ವರ್ಷಗಳ ಕಾಲ ಇವುಗಳನ್ನು ಪೋಷಣೆ ಮಾಡಲಿದ್ದಾರೆ. ಈ ಯೋಜನೆಗೆ ವಿದ್ಯಾರ್ಥಿಗಳೇ ಚಾಲನೆ ನೀಡಿದ್ದು ಗಮನಾರ್ಹವಾಗಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷ ಆನಂದ ಕುಲಕರ್ಣಿ ಮಾತನಾಡಿ, ಇಂಥ ಯೋಜನೆಗಳು ಪರಿಸರದ ಬಗ್ಗೆ ಕಾಳಜಿಯನ್ನು ಹೆಚ್ಚಿಸುವುದರ ಜೊತೆಗೆ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಮಕ್ಕಳಲ್ಲಿ ಪರಿಸರದ ಮೇಲೆ ಕಾಳಜಿ, ಆಸಕ್ತಿ ಹಾಗೂ ಜವಾಬ್ದಾರಿಗಳು ಬೆಳೆಯಲು ಕಾರಣವಾಗುತ್ತವೆ. ಶಾಲೆಯ ಎಲ್ಲ ಮಕ್ಕಳು ವೃಕ್ಞ ದತ್ತು ಯೋಜನೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಕ್ಕಳಿಂದ ಸಸಿಯನ್ನು ಪಡೆದ ಸಂಸ್ಥೆಯ ಅಧ್ಯಕ್ಷ ಅರುಣ ಸೊಲಾಪುರಕರ ಮಾತನಾಡಿ, ಮಕ್ಕಳು ಇಂಥ ಕಾರ್ಯಕ್ರಮ ಮಾಡುವುದರಿಂದ ಸಾಮಾಜಿಕ ಪ್ರಜ್ಞೆ, ಪರಿಸರದ ಕಾಳಜಿ ಕೂಡ ಬೆಳೆಯುತ್ತದೆ. ಪರಿಸರವನ್ನು ಉಳಿಸಿ ಮತ್ತು ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಶಾಲೆಯಲ್ಲಿ ಮಕ್ಕಳಿಗೆ ಬೋಧನೆಯೊಂದಿಗೆ ಇಂಥ ಸಾಮಾಜಿಕ ಕಾಳಜಿ ತೋರುವುದು ಶ್ಲ್ಯಾಘನೀಯ. ಬೆಳೆಯುತ್ತಿರುವ ಮಕ್ಕಳಿಗೆ ಪರಿಸರದ ಕಾಳಜಿ ಮಹತ್ವ ತಿಳಿಸಿಕೊಟ್ಟು ಸಸಿಗಳು ಮಕ್ಕಳಿದ್ದಂತೆ ಎಂಬುದನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ವಿದ್ಯಾರ್ಥಿ ವಿದ್ಯಾರ್ಥಿ ಲಕ್ಷ್ಮಿಕಾಂತ ಬಗಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ವಿ. ಎಚ್. ಕುಲಕರ್ಣಿ, ಎಂ. ವಿ. ಗಿರಗಾಂವಿ, ಎಸ್. ಯು. ಚವ್ಹಾಣ, ಎಲ್. ಕೆ. ಕುಲಕರ್ಣಿ, ಶಿಕ್ಷಕಿಯರಾದ ಎಸ್. ಎಸ್. ದೇಸಾಯಿ, ಪಿ. ಎಸ್. ಬಳ್ಳಾರಿ, ಎಸ್. ಎಸ್. ನಾಯಕ ಮುಂತಾದವರು ಉಪಸ್ಥಿತರಿದ್ದರು.