ಜಲ ಬಿರಾದಾರಿ ವತಿಯಿಂದ ಶ್ರಮದಾನ, ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ವಿಜಯಪುರ: ನಗರದ ಬಾಗಲಕೋಟ್ ರಸ್ತೆಯಲ್ಲಿರುವ ಅನಾಥಾಶ್ರಮದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯಪುರ ಜಲ ಬಿರಾದರಿ ವತಿಯಿಂದ ಶ್ರಮದಾನ ಮತ್ತು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಜಲ ಬಿರಾದರಿ ಜಿಲ್ಲಾಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಅವರು ಜಲ ಬಿರಾದರಿಯಿಂದ ಸಂಗ್ರಹಿಸಿಟ್ಟ 101ನದಿಗಳ ನೀರಿನಿಂದ ಪಂಚ ಭೂತಗಳಾದ ಬೆಂಕಿ, ನೀರು, ಗಾಳಿ, ಪೃಥ್ವಿ, ಆಕಾಶ, ಇವುಗಳಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದರು.  ಅಲ್ಲದೇ, ಸಸಿ ನೆಟ್ಟರು.

ಜಲ ಬಿರಾದರಿ ವತಿಯಿಂದ 01 ನದಿಗಳಿಂದ ಸಂಗ್ರಹಿಸ ತರಲಾದ ನೀರಿನಿಂದ ಪಂಚ ಮಹಾಭೂತಗಳನ್ನು ಪೂಜೆ ಮಾಡಲಾಯಿತು

ಬಳಿಕ ಮಾತನಾಡಿದ ಅವರು, ಇಂದು ಮನುಷ್ಯನ ದುರಾಸೆಯಿಂದಾಗಿ ಪ್ರಕೃತಿ ನಾಶವಾಗುತ್ತಿದೆ.  ವಿಪರೀತ ಪ್ಲಾಸ್ಟಿಕ್ ಬಳಕೆಯಿಂದಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯವಾಗಿ ಒಟ್ಟಾರೆ ಪರಿಸರವೇ ಮಾಲಿನ್ಯವಾಗುತ್ತಿದೆ.  ಪರಿಣಾಮ ನೈಸರ್ಗಿಕ ವಿಕೋಪಗಳು ಬರಗಾಲ, ಪ್ರವಾಹ, ಅಕಾಲಿಕ ಮಳೆ, ಸಾಂಕ್ರಾಮಿಕ ರೋಗಗಳು ಆತಂಕವನುಂಟು ಮಾಡುತ್ತಿವೆ.  ಸರಕಾರ, ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಈ ಸಮಸ್ಯೆಗಳು ಸವಾಲಾಗಿ ಪರಿಣಮಿಸುತ್ತಿವೆ.  ಅದಕ್ಕಾಗಿ ಪ್ರತಿಯೊಬ್ಬ ಪ್ರಜೆಗೂ ಈ ಕುರಿತು ಅರಿವು ಮೂಡಿಸುವ ಸಲುವಾಗಿ ಆಂದೋಲನ ನಡೆಸಬೇಕಾಗಿದೆ ಎಂದು ಹೇಳಿದೆ.

ಈ ಸಂದರ್ಭದಲ್ಲಿ ಜಲ ಬಿರಾದರಿಯ ಕಾರ್ಯಕರ್ತರಾದ ಬಾಳು ಜೇವೂರ, ಮಂಥನ ಜೋಶಿ, ಡಾ. ಪ್ರವೀಣಗೌಡ ಪಾಟೀಲ, ಆಕಾಶ್ ರಾಮತೀರ್ಥ, ಸಂದೇಶ ತಡಲಗಿ, ಅಕ್ಷಯ ವಜ್ರದ, ವಿಠ್ಠಲ ಚವ್ಹಾಣ, ಸಂಗಮೇಶ ಗೋಲಾಯಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌