ಬಾಲ್ಯ ವಿವಾಹ ತಡೆಗಟ್ಟಲು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಡಿಸಿ ಡಾ. ದಾನಮ್ಮನವರ ಸೂಚನೆ
ವಿಜಯಪುರ: ಬಾಲ್ಯ ವಿವಾಹ ತಡೆಗಟ್ಟುವ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಅಭಿಯಾನ ಕೈಗೊಂಡು ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ತಡೆಗಟ್ಟಲು ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಿನ್ನೆಲೆಯಲ್ಲಿ ನಗರ ಹಾಗೂ […]
ಕೊಲ್ಹಾರ ನೀರು ಶುದ್ಧೀಕರಣ ಘಟಕ ಸೇರಿ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿ. ಪಂ. ಸಿಇಓ ರಾಹುಲ ಶಿಂಧೆ
ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣ ಮತ್ತು ಕೊಲ್ಹಾರ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಗೂಳಿ ಸೇರಿದಂತೆ 35 ಗ್ರಾಮಗಳ ಬಹು ಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ತೆಲಗಿ ಗ್ರಾಮದ ಹತ್ತಿರ ಇರುವ ನೀರು ಶುದ್ಧೀಕರಣ ಘಟಕದ ವೀಕ್ಷಣೆ ಮಾಡಿದ ಅವರು, ಘಟಕದಲ್ಲಿ ನೀರು ಶುದ್ಧಿಕರಣದ ಬಗ್ಗೆ ಮಾಹಿತಿ ಪಡೆದರು. ಘಟಕ ನಿರ್ವಹಿಸುವ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ಯೋಜನೆಗೆ […]
ಸಚಿವ ಶಿವಾನಂದ ಪಾಟೀಲರಿಗೆ ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶ ಸಹಕಾರ ಸಂಘದ ಪದಾಧಿಕಾರಿಗಳಿಂದ ಸನ್ಮಾನ
ವಿಜಯಪುರ: ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಎಸ್. ಪಾಟೀಲ ಅವರನ್ನು ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಿಂಗಪ್ಪ ಎ. ನಾವಿ, ಉಪಾಧ್ಯಕ್ಷ ಚಿದಾನಂದ ಹ. ತೊರವಿ, ನಿರ್ದೇಶಕರಾದ ವಿರೂಪಾಕ್ಷಿ ಗಿ. ಕತ್ನಳ್ಳಿ, ಶಿವಾನಂದ ಆರ್. ನಾವಿ, ನರಸು ನಾವಿ ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ವಿವಿ ವುಮೆನ್ಸ್ ಸ್ಟಡಿ ವಿಭಾಗದಲ್ಲಿ ಐದು ದಿನಗಳ ಕಾರ್ಯಾಗಾರ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಮೇ 29ರಿಂದ ಜೂನ್ 2ರ ವರೆಗೆ ಸಂಶೋಧನೆ ಮತ್ತು ಪ್ರಕಟಣೆ ನೈತಿಕ ಸಂಗತಿಗಳು ವಿಷಯದ ಕುರಿತು ಐದು ದಿನಗಳ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಪ್ರೊ. ಪಿ. ಜಿ. ತಡಸದ, ಪ್ರೊ. ಗವಿಸಿದ್ದಪ್ಪ, ಆನಂದ ಹಳ್ಳಿ, ಪ್ರೊ. ಶಾಂತಾದೇವಿ ಟಿ., ಡಾ. ಎಂ. ಎಂ. ಬಾಚಲಾಪುರ, ಡಾ. ಅಶೋಕಕುಮಾರ ಸುರಪುರ, ಹಾಗೂ ಡಾ. ಸೌಭಾಗ್ಯ ಜಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, […]
ಚಿಣ್ಣರಿಗಾಗಿ ಗೊಂಬೆ ಬ್ಯಾಂಕ್- ಮನೆಮನೆಗೆ ತೆರಳಿ ಸಂಗ್ರಹಿಸಿದ ಬೊಂಬೆಗಳನ್ನು ಅಂಗನವಾಡಿಗೆ ತೆರಳಿ ಮಕ್ಕಳಿಗೆ ನೀಡಿದ ಕಾಲೇಜು ವಿದ್ಯಾರ್ಥಿಗಳು
ವಿಜಯಪುರ: ಸಾಮಾಜಿಕ ಕಾರ್ಯಗಳ ಮೂಲಕ ಮಕ್ಕಳನ್ನು ಶಾಲೆಗಳಲ್ಲ ಆಕರ್ಷಿಸಲು ಕಾಲೇಜು ವಿದ್ಯಾರ್ಥಿಗಳು ಕೈಗೊಂಡ ಕ್ರಮ ಗಮನ ಸೆಳೆದಿದ್ದಾರೆ. ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇಶಪಾಂಡೆ ಫೌಂಡೇಶನ್ ನ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಫೌಂಡೇಶನ್ ಸ್ಕಿಲ್ ಪ್ಲಸ್ ಯೋಜನೆಯ ರೂಪಿಸಿದೆ. ಅದರಂತೆ ಈ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಬಣ್ಣ ಬಣ್ಣದ ಗೊಂಬೆಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಿದರು. ಕಲಿಕೆಯಯ ಜೊತೆಗೆ ಮನರಂಜನೆ ಮತ್ತು ಮಕ್ಕಳನ್ನು […]