ವಿಜಯಪುರ: ಸಾಮಾಜಿಕ ಕಾರ್ಯಗಳ ಮೂಲಕ ಮಕ್ಕಳನ್ನು ಶಾಲೆಗಳಲ್ಲ ಆಕರ್ಷಿಸಲು ಕಾಲೇಜು ವಿದ್ಯಾರ್ಥಿಗಳು ಕೈಗೊಂಡ ಕ್ರಮ ಗಮನ ಸೆಳೆದಿದ್ದಾರೆ.
ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇಶಪಾಂಡೆ ಫೌಂಡೇಶನ್ ನ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಫೌಂಡೇಶನ್ ಸ್ಕಿಲ್ ಪ್ಲಸ್ ಯೋಜನೆಯ ರೂಪಿಸಿದೆ. ಅದರಂತೆ ಈ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಬಣ್ಣ ಬಣ್ಣದ ಗೊಂಬೆಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಿದರು.
ಕಲಿಕೆಯಯ ಜೊತೆಗೆ ಮನರಂಜನೆ ಮತ್ತು ಮಕ್ಕಳನ್ನು ಆಟಗಳ ಜೊತೆಗೆ ಪಾಠದ ಕಡೆಗೆ ಸೆಳೆಯಲು ಸ್ಕಿಲ್ ಪ್ಲಸ್ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ಅಂಗನವಾಡಿ ಮಕ್ಕಳಿಗೆ ಬಣ್ಣ ಬಣ್ಣದ ಆಟಿಕೆಯ ಕಾರು ಮತ್ತು ಗೊಂಬೆಗಳನ್ನು ನೀಡಿದರು. ಇದಕ್ಕೂ ಮುನ್ನ ನಗರದ ನಾನಾ ಬಡಾವಣೆಗಳ ಮನಗಳಿಗೆ ತೆರಳಿ ಇನ್ನೂರಕ್ಕಿಂತ ಹೆಚ್ಚು ಆಟಿಕೆಗಳನ್ನು ಸಂಗ್ರಹಿಸಿದ ಈ ವಿದ್ಯಾರ್ಥಿಗಳು ಅತಾಲಟ್ಟಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಐ. ಬಿ. ಚಿಪ್ಪಲಕಟ್ಟಿ ವಿದ್ಯಾರ್ಥಿಗಳು ಕೈಗೊಂಡ ಈ ಯೋಜನೆಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಉಪನ್ಯಾಸಕ ಸತೀಶ ಮುರನಾಳ ಮಾತನಾಡಿ, ಕಲಿಕೆಯ ಜೊತೆಗೆ ಸಾಮಾಜಿಕ ಚುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾದಾಗ ಸಮಾಜದ ನೈಜ ಸಮಸ್ಯೆಗಳ ಕುರಿತು ಅರಿವು ಮೂಡಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೈಗೊಂಡಿರುವ ಗೊಂಬೆಗಳ ಬ್ಯಾಂಕ್ ಯೋಜನೆಯನ್ನು ಶ್ಲಾಘನೀಯ ಎಂದು ಹೇಳಿದರು.
ದೇಶಪಾಂಡೆ ಫೌಂಡೇಶನ್ ನ ವಿಭಾಗೀಯ ಮುಖ್ಯಸ್ಥ ಸಂತೋಷ ಬಿರಾದಾರ ಮಾತನಾಡಿ, ಮಕ್ಕಳಿಗೆ ಆಟಿಕೆಗಳನ್ನು ನೀಡಲು ಫೌಂಡೇಶನ್ ಗೊಂಬೆಗಳ ಬ್ಯಾಂಕ್ ಆರಂಭಿಸಿದೆ. ಇದರಡಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ಸಹಯೋಗದೊಂದಿಗೆ ಐದು ಸಾವಿರಕ್ಕೂ ಹೆಚ್ಚು ಆಟಿಕೆಯ ವಸ್ತುಗಳನ್ನು ಸಂಗ್ರಹಿಸಿ ನಾನಾ ಅಂಗನವಾಡಿಗಳಿಗೆ ನೀಡುವ ಯೋಜನೆಯಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ಎಸ್. ಎ. ಪಾಟೀಲ್, ಕೆ. ಐ. ಹಿರೇಮಠ, ಸ್ಕಿಲ್ ಪ್ಲಸ್ ಕಾರ್ಯಕ್ರಮದ ತರಬೇತುದಾರ ಶಿವಕುಮಾರ ಪಾಟೀಲ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.