ಮಹಿಳಾ ವಿವಿ ವುಮೆನ್ಸ್ ಸ್ಟಡಿ ವಿಭಾಗದಲ್ಲಿ ಐದು ದಿನಗಳ ಕಾರ್ಯಾಗಾರ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಮೇ 29ರಿಂದ ಜೂನ್ 2ರ ವರೆಗೆ ಸಂಶೋಧನೆ ಮತ್ತು ಪ್ರಕಟಣೆ ನೈತಿಕ ಸಂಗತಿಗಳು ವಿಷಯದ ಕುರಿತು ಐದು ದಿನಗಳ ಕಾರ್ಯಾಗಾರ ನಡೆಯಿತು. 

ಈ ಕಾರ್ಯಾಗಾರದಲ್ಲಿ ಪ್ರೊ. ಪಿ. ಜಿ. ತಡಸದ, ಪ್ರೊ. ಗವಿಸಿದ್ದಪ್ಪ, ಆನಂದ ಹಳ್ಳಿ, ಪ್ರೊ. ಶಾಂತಾದೇವಿ ಟಿ., ಡಾ. ಎಂ. ಎಂ. ಬಾಚಲಾಪುರ, ಡಾ. ಅಶೋಕಕುಮಾರ ಸುರಪುರ, ಹಾಗೂ ಡಾ. ಸೌಭಾಗ್ಯ ಜಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ನೈತಿಕತೆಯ ಮಹತ್ವ, ತಪ್ಪು ನಡವಳಿಕೆ ಮತ್ತು ಕೃತಿ ಚೌರ್ಯಗಳನ್ನು ತಡೆಗಟ್ಟ್ಟುವುದರ ಬಗ್ಗೆ ತಿಳಿಸಿಕೊಟ್ಟರು.

ಈ ಕಾರ್ಯಾಗಾರದ ಆಯೋಜನೆಯಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಡಾ. ಭಾಗ್ಯಶ್ರೀ ದೊಡಮನಿ, ಡಾ. ಸರೋಜಾ ಸಂತಿ, ಡಾ. ರಜೀಯಾ ಬೇಗಂ ನದಾಫ್ ಹಾಗೂ ವಿಶ್ವವಿದ್ಯಾಲಯದ ಎಲ್ಲ ಅಧ್ಯಯನ ವಿಭಾಗಗಳ ಸಂಶೋಧನೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಬಿ.ಎಸ್.ನಾವಿ ಅವರ ಮಾರ್ಗದರ್ಶದಲ್ಲಿ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು ಎಂದು ಪಿ. ಎಚ್. ಡಿ ಕೋಸ್ರ್ ವರ್ಕ್ ಸಂಯೋಜಕಿ ಪ್ರೊ. ಹೇಮಲತ ಎಚ್. ಎಂ. ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌