ವಿಜಯಪುರ: ದೇಶ ಸೇವೆ ಮಾಡುವ ಯೋಧರು ನಿವೃತ್ತರಾದ ಬಳಿಕ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಹೇಳಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇಂದ್ರಿಯ ಅರಸೇನಾ ಪಡೆಗಳ ಮಾಜಿ ಮತ್ತು ಹಾಲಿ ಯೋದರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯೋದರು ಸೇವೆಯಲ್ಲಿದ್ದಾಗ ಜೀವದ ಹಂಗು ತೊರೆದು ದೇಶ ಸೇವೆ ಮಾಡುತ್ತಾರೆ. ನಿವೃತ್ತರಾಗಿ ವಾಪಸ್ಸಾದ ಬಳಿಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸುಖಮಯ ಜೀವನ ಸಾಗಿಸಬೇಕು. ಅಷ್ಟೇ ಅಲ್ಲ, ತಮ್ಮ ಕುಟುಂಬದ ಸದಸ್ಯರ ಬಗ್ಗೆಯೂ ಗಮನ ಹರಿಸಬೇಕು. ಬಿ ಎಲ್ ಡಿ ಇ ಆಸ್ಪತ್ರೆ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಮಾಜದ ಎಲ್ಲ ವರ್ಗದ ಜನರ ಆರೋಗ್ಯ ಸೇವೆಗೆ ಸದಾ ಬದ್ದವಾಗಿದೆ ಎಂದು ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರೆಸೇನಾ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಶಕ್ಷ ಮಲ್ಲಿಕಾರ್ಜುನ ಮಸಳಿ, ಬಿ ಎಲ್ ಡಿ ಇ ಆಸ್ಪತ್ರೆ ವಿಜಯಪುರ ಜಿಲ್ಲೆಯ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಈವರೆಗೆ ಯಾರೂ ನಮ್ಮ ಸೈನಿಕರ ಬಗ್ಗೆ ಈ ರೀತಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿರಲಿಲ್ಲ. ಶ್ರೀ ಬಿ.ಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ನಮ್ಮ ಆರೋಗ್ಯ ತಪಾಸಣೆ ನಡೆಸಿರುವುದು ಎಂ.ಬಿ ಪಾಟೀಲರು ನಮ್ಮ ಬಗ್ಗೆ ಹೊಂದಿರುವ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಆರೋಗ್ಯ ಶಿಬಿರದಲ್ಲಿ ಯುರೋಲಜಿಸ್ಟ್ ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲ, ಹೃದಯರೋಗ ತಜ್ಞರಾದ ಡಾ ಸಂಜೀವ ಸಜ್ಜನರ, ಡಾ. ಮಡಿವಾಳಸ್ವಾಮಿ, ಡಾ. ಸೃಷ್ಟಿ, ಡಾ. ಸೌರಬ್ ಠಕ್ಕರ್, ಡಾ. ನವಾಜ, ಡಾ. ಮನೋಜ, ಡಾ. ವಿಕಾಸ, ಡಾ. ದ್ರುವˌ ಡಾ. ಗುಲ್ಶ್ಶನ, ಡಾ. ಕಿರಣ, ಡಾ. ಮಿಲಿಂದˌ ಡಾ. ಮಿಶ್ರಾ, ಸೇರಿದಂತೆ ನಾನಾ ವೈದ್ಯರು ಮತ್ತು ಸಿಬ್ಬಂದಿ 150ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಉಚಿತವಾಗಿ ಇ.ಸಿ.ಜಿ ಮತ್ತು ಇಕೊ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವೀರಣ್ಣ ಜುಮನಾಳಮಠ, ಪ್ರೀತು ದಶವಂತˌ ರವಿˌ ಅನೀಲ, ಅಂಬಿಕಾ, ಈರಣ್ಣ ತಾಲಬಾವಡಿ, ಪರಮೇಶ್ವರ ಮುಂತಾದವರು ಉಪಸ್ಥಿತರಿದ್ದರು.