ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯ- ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯವಾಗಿದೆ.  ಬಡವ ಮತ್ತು ಶ್ರೀಮಂತ ಎಂಬ ಯಾವುದೇ ಭೇದಭಾವವಿಲ್ಲದೇ ಸೇವಾ ಮನೋಭಾವದಿಂದ ಕೆಲಸ ಮಾಡುವುದು ನಿಜವಾದ ಕರ್ತವ್ಯವಾಗಿದೆ ಎಂದು ಬೀದರ ದಕ್ಷೀಣ ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ ಹೇಳಿದರು.

ನಗರದ ಬಿ. ವಿ. ವಿ. ಎಸ್. ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜುಗಳು ಒಳ್ಳೆಯ ಪ್ರವೃತ್ತಿ ಬೆಳೆಸುವ ಕೇಂದ್ರಗಳಾಗಬೇಕು.  ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯ ಹಂತ ಅತ್ಯಂತ ಪ್ರಮುಖವಾಗಿದೆ.  ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ  ಶಿಕ್ಷಣ ದಾಸೋಹ ಸೇವೆ ಮಾಡುತ್ತಿರುವ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅವರ ಕಾರ್ಯ ಪವಿತ್ರ ಮತ್ತು ಶ್ಲಾಘನೀಯ ಎಂದು ಅವರು ಹೇಳಿದರು.

ಬಾಗಲಕೋಟೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿದರು

ಎಸ್. ನಿಜನಿಂಗಪ್ಪಾ ವೈದ್ಯಕೀಯ ಮಹಾವಿದ್ಯಾಲಯದ ಡೀನ ಡಾ. ಅಶೋಕ ಮಲ್ಲಾಪುರ ಮಾತನಾಡಿ, ತಾಳ್ಮೆ, ಶಿಸ್ತು, ಪರಿಶ್ರಮ ಹಾಗೂ ಪೋಷಕರ- ಗುರುಗಳ ಪ್ರೋತ್ಸಾಹವಿದ್ದರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಬಹುದು ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ. ನಮ್ಮ ಕಾಲೇಜನ ವಿದ್ಯಾರ್ಥಿಗಳು ಪಠ್ಯ, ಕ್ರೀಡೆ, ಕಲೆ ಹೀಗೆ ಸರ್ವಾಂಗಿಣ ಸಾಧನೆ ಮಾಡುತ್ತಿರುವದು ಸಂತಸ ತಂದಿದೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಡಾ. ಅರುಣ ಹೂಲಿ, ಹೋಮಿಯೋಪಥಿ ವೈದ್ಯರೊಬ್ಬರು ಪ್ರಪ್ರಥಮ ಬಾರಿಗೆ ಶಾಸಕರಾಗಿದ್ದು, ಹೋಮಿಯೋಪಥಿ ವೈದ್ಯರಿಗೆ ಹಾಗೂ ವಿಭಾಗಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ಡಾ. ಶೈಲೇಂದ್ರ ಬೆಲ್ದಾಳೆ ಅವರ ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಯೋಜಕ ಡಾ. ಮಂಜುನಾಥ ಪಾಟೀಲ. ಡಾ. ಕೆ. ಎಸ್. ಪ್ರದೀಪ ಉಪಸ್ಥಿತರಿದ್ದರು.  ವಿದ್ಯಾರ್ಥಿನಿಯರಾದ ಅಪೂರ್ವಾ ಮತ್ತು ದೀಪಾ ಪ್ರಾರ್ಥಿಸಿದರು.  ವಿದ್ಯಾರ್ಥಿ ಶ್ವೇತಾ ಸಜ್ಜನ ಸ್ವಾಗತಿಸಿದರು.  ಡಾ. ರವಿ ಕೋಟೆಣ್ಣವರ, ಡಾ. ಸುಧೀರ ಬೆಟಗೇರಿ ಪರಿಚಯಿಸಿದರು.  ವಿದ್ಯಾರ್ಥಿನಿ ಪ್ರಿಯಾಂಕಾ ಡೆಂಗಿ ವಂದಿಸಿದರು.  ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಸರ್ವಮಂಗಳಾ ನಿರೂಪಿಸಿದರು.

ಇದೇ ವೇಳೆ, ಕೇಲ ಔರ ಕಲಾ ಶಿರ್ಷಿಕೆ ಅಡಿಯಲ್ಲಿ ಆಯೋಜಿಸಿದ ನಾನಾ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪಾರಿತೋಶಕಗಳನ್ನು ವಿತರಿಸಲಾಯಿತು.  ಅಲ್ಲದೇ, ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ ಧರಿಸಿ ವೈದ್ಯಕೀಯ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು,

ಬಿ. ವಿ. ವಿ. ಎಸ್ ಸಂಘದ ಪದಾಧಿಕಾರಿಗಳು, ಸದಸ್ಯರು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಪ್ರಾಂಶಪಾಲರು ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.  ಕಾಲೇಜನ ಪ್ರಧಾನ ಕಾರ್ಯದರ್ಶಿ ಧನುಶ್ ಎಸ್., ಕ್ರೀಡಾ ಕಾರ್ಯದರ್ಶಿ ಶಂಕರ ಅಮರಣ್ಣವರ. ಸಾಂಸ್ಕೃತಿಕ ಕಾರ್ಯದರ್ಶಿ ಆನಂದ ಒಡೆಯರ ಸೇರಿದಂತೆ ಅನೇಕರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌