ಗ್ರಾಮಗಳ ಅಭಿವೃದ್ಧಿ, ಗ್ರಾ. ಪಂ. ಸದಸ್ಯರ ಹಿತಕಾಯಲು ಸದಾ ಬದ್ಧನಾಗಿದ್ದೇನೆ- ಸುನೀಲಗೌಡ ಪಾಟೀಲ
ವಿಜಯಪುರ: ಗ್ರಾಮ ಪಂಚಾಯಿತಿಗಳು ಮತ್ತು ಗ್ರಾ. ಪಂ. ಜನಪ್ರತಿನಿಧಿಗಳ ಹಿತ ಕಾಪಾಡಲು ಸದಾ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಯಕ್ಕುಂಡಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ಮತ್ತು ಅರ್ಜುಣಗಿ ಗ್ರಾಮದಲ್ಲಿ ಎನ್. ಆರ್. ಎಲ್. ಎಂ. ಕಟ್ಟಡ, ಘನತ್ಯಾಜ್ಯ ಘಟಕ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಜಲ ಜೀವನ ಮಿಶನ್ ಯೋಜನೆ(ಜೆಜೆಎಂ) ಜಾರಿ ಸಂದರ್ಭದಲ್ಲಿ ಸರಕಾರ ಫಲಾನುಭವಿಗಳಿಂದ ವಂತಿಗೆ ಮತ್ತು ಮತ್ತು ಗ್ರಾಮ […]
ಅಂದವಾದ ಬಣ್ಣ ಹಚ್ಚಿ ಕನಕದಾಸ ಬಡಾವಣೆ ಸಿಟಿ ಬಸ್ ನಿಲ್ದಾಣ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು
ವಿಜಯಪುರ: ಗಾನಯೋಗಿ ಸಂಘದ ಯುವಕರು ವಿಜಯಪುರ ನಗರದ ಕನಕದಾಸ ಬಡಾವಣೆಯ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಬಸ್ ಸ್ಟಾಪ್ ಗೋಡೆಗಳಿಗೆ ಅಂದವಾಗಿ ಬಣ್ಣ ಹಚ್ಚಿ ಚಂದ ಮಾಡಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಈ ಬಸ್ ನಿಲ್ದಾಣದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿ ವೀರ ಯೋಧರ ಹೆಸರುಗಳನ್ನು ಬರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ಕನಕದಾಸ ಬಡಾವಣೆಯ ಸಿಟಿ ಬಸ್ ನಿಲ್ದಾಣ ಗಲೀಜಾಗಿದ್ದು, ನೋಡಲು ತುಂಬಾ ಮುಜುಗರವಾಗಿತ್ತು. ಬಸ್ ಸ್ಟಾಪ್ ನಲ್ಲಿ ಜನರು […]
ಬಾಲ ಕಾರ್ಮಿಕ ಪದ್ಧತಿ ಪಿಡುಗು ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ
ವಿಜಯಪುರ: ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ. ನಗರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ […]
ಯಂಕಂಚಿಯಲ್ಲಿ ಜಡೆ ತಲೆ ಪೂಜಾರಿಗಳು, ಪಟ್ಟದ ಪೂಜಾರಿಗಳ ಆರನೇ ಧರ್ಮ ಸಭೆ
ವಿಜಯಪುರ : ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಡೆ ತೆಲೆ ಪೂಜಾರಿಗಳು ಹಾಗೂ ಪಟ್ಟದ ಪೂಜಾರಿಗಳ ಆರನೆಯ ಧರ್ಮಸಭೆ ಹಾಲುಮತದ ಕುಲದೇವರಾದ ಶ್ರೀ ಬೀರಲಿಂಗೇಶ್ವರನಿಗೆ ಎಲ್ಲ ಪೂಜಾರಿಗಳಿಂದ ವಿಶೇಷ ಪೂಜೆ ಮಾಡಿ ಧರ್ಮಸಭೆ ನಡೆಸಲಾಯಿತು. ಈ ಧರ್ಮಸಭೆಯ ಸಾನಿಧ್ಯವನ್ನು ಮಹಾಳಿಂಗರಾಯ ಮಾರಾಯರು, ನಾಗಠಾಣ ಕೆಂಚರಾಯ ಮುತ್ತ್ಯಾ, ಮಾಲಹಳ್ಳಿ ಲಕ್ಕಪ್ಪ ಮುತ್ತ್ಯಾ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಳಿಂಗರಾಯ ಮಹಾರಾಜರು, ಸಮಾಜದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದು, ರಾಜ್ಯದ ಎಲ್ಲಾ ಪೂಜಾರಿಗಳನ್ನು ಒಂದುಗೂಡಿಸುವದಕ್ಕಾಗಿ […]
ವಿಜಯಪುರದಲ್ಲಿ ಜೂ. 29 ರಿಂದ ಎರಡು ದಿನ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ- ಡಾ. ಅರ್ಜುನ ಗೊಳಸಂಗಿ
ವಿಜಯಪುರ: ದಲಿತ ಪ್ರಜ್ಞೆಯೊಂದಿಗೆ, ಅಹಿಂದ ಪರಂಪರೆಯಲ್ಲಿ ಶೋಷಿತರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗದುಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಬೆಳ್ಳಿ ಸಂಭ್ರಮ ಅಂಗವಾಗಿ ಜೂ. 29 ಮತ್ತು 30 ರಂದು ಎರಡು ದಿನಗಳ ಕಾಲ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಈ ಸಮ್ಮೇಳನ ನಡೆಯಲಿದ್ದು, ಇದನ್ನು ಅರ್ಥಪೂರ್ಣವಾಗಿ, […]
ಕುಡಿಯುವ ನೀರು ಪೂರೈಕೆಗೆ ಆಗ್ರಹ- ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ- ಪಿಎಸ್ಐ ಜೊತೆ ಮಾತಿನ ಚಕಮಕಿ
ವಿಜಯಪುರ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಸ್ಥಳೀಯರು ನಗರದ ಜೋರಾಪುರ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರುದ್ರ ಬಾಲಕೋಟ, ನಗರಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಕುಡಿಯಲು ನೀರು ಪೂರೈಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡುವಂತೆ ಗಾಂಧಿಚೌಕ್ ಪಿ ಎಸ್ ಐ ರಬಕವಿ ಹೇಳಿದಾಗ […]
ಸರಕಾರಿ ಎಸ್.ಸಿ., ಎಸ್.ಟಿ ನೌಕರರ ಸಮನ್ವಯ ಸಮಿತಿಯಿಂದ ಪದ್ಮಶ್ರಿ, ನಾಡೋಜ, ಕವಿ ಡಾ. ಸಿದ್ದಲಿಂಗಯ್ಯ ಅವರ ದ್ವಿತೀಯ ನುಡಿನಮನ ಕಾರ್ಯಕ್ರಮ
ವಿಜಯಪುರ: ಡಾ. ಸಿದ್ದಲಿಂಗಯ್ಯ ಅವರು ಬಡತನದಲ್ಲಿ ಬೆಳೆದು ರಾಜ್ಯದಲ್ಲಿ ಸಾಮಾಜಿಕ ಅಂಧಕಾರ ಹೋಗಲಾಡಿಸಲು ಕವನಗಳ ಮೂಲಕ ಹೊಸ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ರಾಜ್ಯ ಸರಕಾರಿ ಎಸ್. ಸಿ., ಎಸ್. ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ. ಎಚ್. ನಾಡಗಿರಿ ಹೇಳಿದ್ದಾರೆ. ಸಮಿತಿ ವತಿಯಿಂದ ನಗರದಲ್ಲಿ ನಡೆದ ಡಾ. ಸಿದ್ದಲಿಂಗಯ್ಯ ಅವರ ದ್ವಿತೀಯ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಡಾ. ಸಿದ್ಧಲಿಂಗಯ್ಯ ಅವರ ವಿಚಾರಧಾರೆಗಳು ಸಮಾಜ ಸುಧಾರಣೆಗೆ ಸದಾಕಾಲ […]
ಕಾಖಂಡಕಿಯಲ್ಲಿ ಕಾರಹುಣ್ಣಿಕೆ ಕರಿ ಹರಿಯುವ ಕಾರ್ಯಕ್ರಮ- ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಎಂ. ಬಿ. ಪಾಟೀಲ
ವಿಜಯಪುರ: ಶನಿವಾರ ಕಾಖಂಡಕಿ ಗ್ರಾಮದಲ್ಲಿ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮದಲ್ಲಿ ಎತ್ತುಗಳ ತಿವಿತದಿಂದ ಪೆಟ್ಟಾಗಿರುವ ಗಾಯಾಳುಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಿದ ಅವರು, ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೇ, ಬೇಗ ಗುಣಮುಖರಾಗಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯರು, ಕಾಖಂಡಕಿ ಘಟನೆಯಲ್ಲಿ ಏಳು ಜನ […]