ಸರಕಾರಿ ಎಸ್.ಸಿ., ಎಸ್.ಟಿ ನೌಕರರ ಸಮನ್ವಯ ಸಮಿತಿಯಿಂದ ಪದ್ಮಶ್ರಿ, ನಾಡೋಜ, ಕವಿ ಡಾ. ಸಿದ್ದಲಿಂಗಯ್ಯ ಅವರ ದ್ವಿತೀಯ ನುಡಿನಮನ ಕಾರ್ಯಕ್ರಮ

ವಿಜಯಪುರ: ಡಾ. ಸಿದ್ದಲಿಂಗಯ್ಯ ಅವರು ಬಡತನದಲ್ಲಿ ಬೆಳೆದು ರಾಜ್ಯದಲ್ಲಿ ಸಾಮಾಜಿಕ ಅಂಧಕಾರ ಹೋಗಲಾಡಿಸಲು ಕವನಗಳ ಮೂಲಕ ಹೊಸ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ರಾಜ್ಯ ಸರಕಾರಿ ಎಸ್. ಸಿ., ಎಸ್. ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ. ಎಚ್. ನಾಡಗಿರಿ ಹೇಳಿದ್ದಾರೆ.

ಸಮಿತಿ ವತಿಯಿಂದ ನಗರದಲ್ಲಿ ನಡೆದ ಡಾ. ಸಿದ್ದಲಿಂಗಯ್ಯ ಅವರ ದ್ವಿತೀಯ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಡಾ. ಸಿದ್ಧಲಿಂಗಯ್ಯ ಅವರ ವಿಚಾರಧಾರೆಗಳು ಸಮಾಜ ಸುಧಾರಣೆಗೆ ಸದಾಕಾಲ ಮಾರ್ಗದರ್ಶಿಯಾಗಿವೆ.  ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಬಿ. ಎಚ್. ನಾಡಗಿರಿ ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸುಜಾತಾ ಚಲವಾದಿ ಮಾತನಾಡಿದರು

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪನ್ಯಾಸಕಿ ಡಾ. ಸುಜಾತಾ ಚಲವಾದಿ ಮಾತನಾಡಿ, ಡಾ. ಸಿದ್ಧಲಿಂಗಯ್ಯ ಅವರ ವಿಚಾರಗಳು, ಅವರು ಹೊಂದಿದ್ದ ದೂರದೃಷ್ಠಿ, ಜನಪರವಿದ್ದ ಕಾಳಜಿ, ಅವರ ಸಂದೇಶಗಳನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

ಮುಖಂಡ ಅಭಿಷೇಕ ಚಕ್ರವರ್ತಿ ಅವರು ಡಾ. ಸಿದ್ಧಲಿಂಗಯ್ಯ ಅವರ ಒಡನಾಟಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಬಸವಂತಪ್ಪ ಗುಣದಾಳ, ಕೋಶಾಧ್ಯಕ್ಷ ಬಿ. ಟಿ. ವಾಘಮೋರೆ, ಮುಖಂಡರಾದ ಎಸ್. ಎಂ. ಡೋಣಿ, ಆರ್. ಎಲ್. ಯಲ್ಲಡಗಿ, ಡಿ. ಎಂ. ಮಾವುರ, ಸೂರ್ಯಕಾಂತ ಹೊಸಮನಿ, ನಿಜು ಮೇಲಿನಕೇರಿ, ವಿನೋದ್ ರತ್ನಾಕರ, ಎನ್. ಎಸ್‌. ಬನಸೋಡೆ, ರಾಮಕೃಷ್ಣ ಉತ್ತೂರ, ಶ್ರೀಕಾಂತ ಮಾದರ, ಬಿ. ಎನ್. ಜಾನಕರ, ಎಚ್. ಕೆ. ಸಿಂಗೆ, ಡಿ. ಸಿ. ಹರಿಜನ, ಎಂ. ಎಂ. ಮುಂಡೇವಾಡಿ, ಜಿ. ಎಂ. ಚಲವಾದಿ, ಶಾಂತಪ್ಪ ಓಲೇಕಾರ, ಶ್ರೀಶೈಲ ದೊಡಮನಿ, ಸಂತೋಷ ಮಾಸ್ತಿ, ನಾಗರಾಜ ಬರಗುಡಿ, ಸತೀಶ್ ಸವನಳ್ಳಿ, ಡಿ. ಎಸ್. ಖಜಾಪುರ, ಜಯಶ್ರೀ ಹೋಳಿನ, ಸತ್ಯವ್ವ, ಹರಿಜನ, ಎಸ್. ಬಿ. ನಿಂಬರಗಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿಯ ವಿಜಯಪುರ ಗ್ರಾಮೀಣ ತಾಲೂಕಿನ ಅಧ್ಯಕ್ಷ ವಿಜಯಕುಮಾರ ಸೂರ್ಯವಂಶಿ ಸ್ವಾಗತಿಸಿದರು.  ಬಸವರಾಜ ಹೊಸಮನಿ ನಿರೂಪಿಸಿದರು.  ಸಮಿತಿಯ ಬಬಲೇಶ್ವರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಾದರ ವಂದಿಸಿದರು.

Leave a Reply

ಹೊಸ ಪೋಸ್ಟ್‌