ಅಂದವಾದ ಬಣ್ಣ ಹಚ್ಚಿ ಕನಕದಾಸ ಬಡಾವಣೆ ಸಿಟಿ ಬಸ್ ನಿಲ್ದಾಣ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು

ವಿಜಯಪುರ: ಗಾನಯೋಗಿ ಸಂಘದ ಯುವಕರು ವಿಜಯಪುರ ನಗರದ ಕನಕದಾಸ ಬಡಾವಣೆಯ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಬಸ್ ಸ್ಟಾಪ್ ಗೋಡೆಗಳಿಗೆ ಅಂದವಾಗಿ ಬಣ್ಣ ಹಚ್ಚಿ ಚಂದ ಮಾಡಿ ಗಮನ ಸೆಳೆದಿದ್ದಾರೆ.  ಅಷ್ಟೇ ಅಲ್ಲ, ಈ ಬಸ್ ನಿಲ್ದಾಣದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿ ವೀರ ಯೋಧರ ಹೆಸರುಗಳನ್ನು ಬರೆದಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ಕನಕದಾಸ ಬಡಾವಣೆಯ ಸಿಟಿ ಬಸ್ ನಿಲ್ದಾಣ ಗಲೀಜಾಗಿದ್ದು, ನೋಡಲು ತುಂಬಾ ಮುಜುಗರವಾಗಿತ್ತು.  ಬಸ್ ಸ್ಟಾಪ್ ನಲ್ಲಿ ಜನರು ನಿಂತರೆ ವಾಕರಿಕೆ ಬರುವ ದುಸ್ಥಿತಿ ಇತ್ತು.  ಇದು ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಬಸ್ ನಿಲ್ದಾಣದಲ್ಲಿ ಗಲಿಜಾಗಿದ್ದ ಹೊಲಸನ್ನು ತೊಳೆದು, ಸಾರಾಯಿ ಬಾಟಲಿ, ಗುಟ್ಕಾ ಚೀಟಿಗಳನ್ನು ತೆರವುಗೊಳಿಸಿದ್ದೇವೆ.  ನಂತರ ಬಸ್ ನಿಲ್ದಾಣಕ್ಕೆ ಅಂದವಾಗಿ ಪೇಂಟ್ ಮಾಡಿ ಅದಕ್ಕೊಂದು ಮೆರಗು ನೀಡಿದ್ದೇವೆ.  ಇನ್ನು ಮುಂದಾದರೂ ಸಾರ್ವಜನಿಕರು ಈ ಬಸ್ ನಿಲ್ದಾಣದ ಮೇಲೆ ಯಾವುದೇ ಜಾಹೀರಾತು ಫಲಕ ಅಂಟಿಸಬಾರದು.  ಇದರ ಗೋಡೆಗಳ ಮೇಲೆ ಉಗುಳಬಾರದು.  ಇದನ್ನು ಸ್ವಚ್ಛವಾಗಿಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯಪುರ ನಗರದ ಕನಕದಾಸ ಸಿಟಿ ಬಸ್ ಸ್ಟಾಪ್ ಗೆ ಹೊಸ ರೂಪ ನೀಡಿದ ಗಾನಯೋಗಿ ಸಂಘದ ಯುವಕರು

ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣವರ, ರಾಜಕುಮಾj ಹೊಸಟ್ಟಿ, ವೀರೇಶ ಸೊನ್ನಲಗಿ, ಸಚಿನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ರಾಹುಲ, ಸಚಿನ ಚವ್ಹಾಣ, ಬಾಬು, ಪ್ರಮೋದ ಚವ್ಹಾಣ, ರೇವಣಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌