ಯಂಕಂಚಿಯಲ್ಲಿ ಜಡೆ ತಲೆ ಪೂಜಾರಿಗಳು, ಪಟ್ಟದ ಪೂಜಾರಿಗಳ ಆರನೇ ಧರ್ಮ ಸಭೆ

ವಿಜಯಪುರ : ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಡೆ ತೆಲೆ ಪೂಜಾರಿಗಳು ಹಾಗೂ ಪಟ್ಟದ ಪೂಜಾರಿಗಳ ಆರನೆಯ ಧರ್ಮಸಭೆ ಹಾಲುಮತದ ಕುಲದೇವರಾದ ಶ್ರೀ ಬೀರಲಿಂಗೇಶ್ವರನಿಗೆ ಎಲ್ಲ ಪೂಜಾರಿಗಳಿಂದ ವಿಶೇಷ ಪೂಜೆ ಮಾಡಿ ಧರ್ಮಸಭೆ ನಡೆಸಲಾಯಿತು. 

ಈ ಧರ್ಮಸಭೆಯ ಸಾನಿಧ್ಯವನ್ನು ಮಹಾಳಿಂಗರಾಯ ಮಾರಾಯರು, ನಾಗಠಾಣ ಕೆಂಚರಾಯ ಮುತ್ತ್ಯಾ, ಮಾಲಹಳ್ಳಿ ಲಕ್ಕಪ್ಪ ಮುತ್ತ್ಯಾ ಪೂಜಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಳಿಂಗರಾಯ ಮಹಾರಾಜರು, ಸಮಾಜದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದು, ರಾಜ್ಯದ ಎಲ್ಲಾ ಪೂಜಾರಿಗಳನ್ನು ಒಂದುಗೂಡಿಸುವದಕ್ಕಾಗಿ ಸತತವಾಗಿ ಪ್ರತಿಯೊಂದು ತಿಂಗಳು ಧರ್ಮ ಸಭೆಯನ್ನು ನಡೆಸುತ್ತಿದ್ದೇವೆ.  ಇದರಲ್ಲಿ ಯಾರೂ ವೈಯಕ್ತಿಕವಾಗಿ ಯಾವುದೇ ಆಸೆ ಅಮಿಷಗಳಿಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ.  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಗ್ರಾಮಗಳಿಂದ ಪಟ್ಟದ ಪೂಜಾರಿಗಳು ಜಡೆ ತೆಲೆ ಪೂಜಾರಿಗಳು ಭಾಗವಹಿಸಬೇಕು ಎಂದು ಹೇಳಿದರು.

ಮಲ್ಲಹಳಿಯ ಕೆಂಚರಾಯ  ಮಾರಾಯರು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಕೂಡ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಾಗುವುದಿಲ್ಲ.  ಯಾರೇ ಆದರೂ ಧರ್ಮದ ಚೌಕಟ್ಟಿನಲ್ಲಿ ನಡೆದರೆ ಮಾನವ ಜನ್ಮ ಹುಟ್ಟಿದ್ದಕ್ಕೆ ಸ್ವಾರ್ಥಕ ಎಂದು ಹೇಳಿದರು.

ಧರ್ಮಸಭೆಯಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು

ವಿಜಯಪುರ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಬೀರಪ್ಪ ಜುಮ್ಮನಾಳ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ.  ಪ್ರತಿಯೊಬ್ಬರೂ ಶಿಕ್ಷಣ ಕಲಿಯಲು ಮತ್ತು ಮಕ್ಕಳಿಗೆ ಕಲಿಸಲು ಪಣತೊಡಬೇಕಾಗಿದೆ.  ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಮ್ಮ ಮಕ್ಕಳಿಗೆ ಶಾಲೆಯನ್ನು ಕಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿದರು.

ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಎಲ್ಲರಿಗೂ ಧರ್ಮದ ಮಾರ್ಗದರ್ಶನದ ಅವಶ್ಯಕತೆ ಇದೆ.  ಪ್ರತಿ ತಿಂಗಳು ಇದೇ ರೀತಿಯಾಗಿ ಧರ್ಮಸಭೆಗಳನ್ನು ನಡೆಸಿ ಎಲ್ಲ ಭಕ್ತರಿಗೆ ಸನ್ಮಾರ್ಗವನ್ನು ತೋರಿಸಬೇಕು.  ಇಂದಿನ ದಿನಗಳಲ್ಲಿ ಧರ್ಮದ ಅವಶ್ಯಕತೆ ಬಹಳವಿದೆ.  ಎಲ್ಲರಿಗೂ ಒಳಿತನ್ನೆ ಬಯಸುತ್ತದೆ.  ಅದರಲ್ಲಿ ವಿಶೇಷವಾಗಿ ಹಾಲುಮತ ಧರ್ಮವೂ ಒಳ್ಳೆಯ ಧರ್ಮವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಕೂಡ ಹಾಲುಮತದವರೇ ಆಗಿದ್ದಾರೆ.  ರಾಜ್ಯಕ್ಕೆ ಜನಪ್ರಿಯ ಮುಖ್ಯಮಂತ್ರಿಯನ್ನು ನೀಡಿದ್ದು ಹಾಲುಮತದ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಮಣ್ಣ ಗಂಗನಳ್ಳಿ, ಬೀರು ಮಾಸ್ತರ್, ವೆಂಕಂಚಿ ಸತೀಶ್ ಅಡವಿ ಮಾತನಾಡಿದರು.

ಎಲ್ಲಾ ಪೂಜಾರಿಗಳನ್ನು ಗ್ರಾಮದ ಮುತ್ತಪ್ಪ ಮುತ್ತಿನ ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಓಲಗದೊಂದಿಗೆ ಮೆರವಣಿಗೆ ಮಾಡಿಸಲಾಯಿತು.  ಈ ವೇಳೆ ಮಹಿಳೆಯರು ಆರತಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು.  ನಂತರ ಶ್ರೀ ವೀರದೇವರ ಕರ್ತೃ ಗದ್ದುಗೆಗೆ ಎಲ್ಲ ಜಡೆ ತೆಲೆ ಪೂಜಾರಿಗಳ ಹಾಗೂ ಪಟ್ಟದ ಪೂಜಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

 

ಬನಸಿದ್ದ ಮಾರಾಯರು, ತಿರುಗುಂದಿ ಮಲ್ಲಪ್ಪ ಮಾರಾಯರು, ಹಿರೇರೂಗಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬೀರಪ್ಪ ಮಾರಾಯರು, ಹಂಚಿನಾಳ ಕುಮಾರ ಪೂಜಾರಿ, ಉತ್ತರ ಪೂಜಾರಿ, ಗೋಪಾಲ ಮಾರಾಯರು, ಉಚಾ ಅಮೋಘಸಿದ ಮಾರಾಯರು, ಕಲಬೀಳಗಿ ಕಲ್ಲಪ್ಪ ಮಾರಾಯರು, ಕಣಮುಚನಾಳ ಶಂಕರ ಮಾರಾಯರು, ಬರಟಗಿ ಜೀವ ಮಾರಾಯರು, ಕುಮಾರ ಮಾರಾಯರು, ಹುತ್ತೂರು ಮಾರಾಯರು, ಬೀರಪ್ಪ ಮಾರಾಯರು, ಪುಂಡಲಿಂಗೇಶ್ವರ ಶಾಖಾ ಮಠದ ಶ್ರೀಗಳು, ದೇವಕಾಂತ ಬಿಜ್ಜರಗಿ, ಸಿದ್ದು ಹಳ್ಳಿ, ಜಗದೀಶ ಹೂವಿನಹಳ್ಳಿ, ಬಸವರಾಜ ಮೋರಟಗಿ, ರಮೇಶ ಪೂಜಾರಿ, ದತ್ತಾತ್ರೇಯ ಅಡಿಗಿ, ಮಲ್ಲಣ್ಣ ಸಾಲಿ, ಅಮೋಘಸಿದ್ದ ಪೂಜಾರಿ ಉಪಸ್ಥಿತರಿದ್ದರು.

ಸಿದ್ದು ಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕೆಂಚಪ್ಪ ದೋಣಿ ವಂದಸಿದರು.

Leave a Reply

ಹೊಸ ಪೋಸ್ಟ್‌