ವಿಜಯಪುರ: ಲೋಕಸಭೆ ಟಿಕೆಟ್ ಕೈತಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ನನಗೆ ಅನ್ಯಾಯ ಮಾಡುವುದಿಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹಿರಿಯ ಸಂಸದರಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಹೊಟ್ಟೆ ಉರಿಯುವವರು ಹಿರಿಯರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳುತ್ತಾರೆ. ಯಾವುದೇ ಪಟ್ಟಿ ಇದ್ದರೂ ಅದರಲ್ಲಿ ರಮೇಶ ಜಿಗಜಿಣಗಿ ಹೆಸರನ್ನು ದುರುದ್ದೇಶದಿಂದ ಸೇರಿಸಿ ಅಪಪ್ರಚಾರ ಮಾಡುತ್ತಾರೆ ಎಂದು ಸ್ವಪಕ್ಷೀಯರ ವಿರುದ್ಧವೇ ಹರಿಹಾಯ ಅವರು, ವಿರೋಧಿಗಳಿಗೆ ನನ್ನ ಬಗ್ಗೆ ಹೆದರಿಕೆ ಇದೆ. ಎಲ್ಲಾದರೂ ಸೇರಿ ಟಿಕೆಟ್ ತಗೊಂಡು ಬಿಡ್ತಾನೆ ಎನ್ನುವ ಹೆದರಿಕೆ ಅವರಿಗೆ ಇದೆ. ಹೀಗಾಗಿ ನನ್ನನ್ನು ಸೇರಿಸಿ ಹಿರಿಯರಿಗೆ ಟಿಕೇಟ್ ಇಲ್ಲ ಎಂದು ಸುಳ್ಳು ಸುದ್ದಿ ಹರಡಿಸುತ್ತಾರೆ. ಪಾರ್ಟಿ ನನಗೆ ಮೋಸ ಮಾಡುವುದಿಲ್ಲ. ಪ್ರಧಾನಿಯೂ ನನಗೆ ಅನ್ಯಾಯ ಮಾಡುವುದಿಲ್ಲ. ನನಗೇ ಟಿಕೆಟ್ ಕೊಡುತ್ತಾರೆ. ನಾನೇ ಎಲೆಕ್ಷನ್ ನಿಲ್ಲುತ್ತೇನೆ ಎಂದು ಸಂಸದರು ಸ್ಪಷ್ಟಪಡಿಸಿದರು.
ಒಂದು ವೇಳೆ ಟಿಕೆಟ್ ಸಿಗದಿದ್ದರೆ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧರಾಮೇಶ್ವರನಿಗೆ ಟೆಂಗಿನಕಾಯಿ ಒಡೆಯುತ್ತೇನೆ. ದೇವರಿಗೆ ಎರಡೂ ಕೈ ಮುಗಿದು ಒಳ್ಳೆಯದನ್ನು ಮಾಡಿದ್ದೀಯಾ ಎಂದು ಆರಾಮವಾಗಿ ಮನೆಯಲ್ಲಿರುತ್ತೇನೆ ಎಂದು ತಿಳಿಸಿದರು.
45 ವರ್ಷಗಳಿಂದ ರಾಜಕಾರಣ ಮಾಡಿದ್ದೇನೆ ಯಾರನ್ನೂ ನೋಯಿಸಿಲ್ಲ
ದೇ ವೇಳೆ, ನಾನು 45 ವರ್ಷ ರಾಜಕಾರಣ ಮಾಡಿದ್ದೇನೆ. ಯಾರು ಮಾಡದ ರಾಜಕಾರಣ ನಾನು ಮಾಡಿದ್ದೇನೆ. ಯಾರಿಗೂ ನೋವಾಗದಂತೆ ರಾಜಕಾರಣ ಮಾಡಿದ್ದೇನೆ. ದಲಿತನಾಗಿ ಯಾವ ಸಮಾಜದ ಮನಸ್ಸಿಗೂ ನೋವಾಗದಂತೆ ರಾಜಕಾರಣ ಮಾಡಿದ್ದೇನೆ. ಇವತ್ತಿಗೂ ಹೀಗೆ ಇದ್ದೇನೆ. ಹೀಗೆ ಸಾಯುತ್ತೇನೆ. ಯಾರಿಗೂ ತೊಂದರೆ ಮಾಡಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆ ವಿಚಾರ
ಇದೇ ವೇಳೆ, ಲೋಕಸಭೆ ಚುನಾವಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಇರಲಿವೆ. ಚುನಾವಣೆ ನಂತರ ಎಲ್ಲ ಉಚಿತ ಯೋಜನೆಗಳನ್ನು ಕಟ್ ಮಾಡುತ್ತಾರೆ. ಕಾಂಗ್ರೆಸ್ ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದೆ. ಎಲೆಕ್ಷನ್ ಸಂದರ್ಭದಲ್ಲಿ ಎಲ್ಲರಿಗೂ ಫ್ರೀ ಅಂದ್ರು, ಗ್ಯಾರಂಟಿ ಕಾರ್ಡ ಹಂಚಿದ್ರು. ಈಗ ಫ್ರಿ ಅವರಿಗಿಲ್ಲ, ಇವರಿಗಿಲ್ಲ ಎನ್ನ್ನುತ್ತಿದ್ದಾರೆ. ಗ್ಯಾರಂಟಿ ಕಾರ್ಡುಗಳಲ್ಲಿ ಷರತ್ತುಗಳನ್ನು ಮೊದಲೇ ಸ್ಪಷ್ಟಪಡಿಸಬೇಕಿತ್ತು. ಈಗ ದಿನಕ್ಕೊಂದು ರೂಲ್ಸ್ ಮಾಡುತ್ತಿದ್ದಾರೆ ಎಂದು ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.
ಮಹಿಳೆಯರಿಗೆ ಫ್ರೀ ಕೊಟ್ಟಿದ್ದಕ್ಕೆ ನನಗೆ ಖುಷಿ ಇದೆ. ಆದರೆ, ಮನೆಯಲ್ಲಿ ಗಂಡ-ಹೆಂಡತಿ, ಅತ್ತೆ- ಸೊಸೆಯರ ನಡುವೆ ಜಗಳಗಳು ಶುರುವಾಗಿವೆ. ಪುಕ್ಸಟ್ಟೆ ಯೋಜನೆಯಿಂದ ಮನೆಯಲ್ಲಿ ಗಂಡ- ಹೆಂಡತಿ ನಡುವೆ ಜಗಳ, ಪುಕ್ಸಟ್ಟೆ ಬಸ್ ಎಂದು ಹೆಣ್ಣು ಮಕ್ಕಳು ದಿನ ಊಕಿಂದ ಊರಿಗೆ ಮಗಳ ಊರಿಗೆ ಅಪ್ಪನ ಊರಿಗೆ.. ಅವ್ವನ ಊರಿಗೆ ಅಂತಾ ಅಡ್ಡಾಡ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಲೋಕಲ್ ಸಮಸ್ಯೆಗಳು ಸಾಕಷ್ಟು ಇರುತ್ತವೆ. 108 ಸಮಾಜಗಳು, 108 ನಾಯಕರುಗಳು ಇರ್ತಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೂ ರಾಜ್ಯಕ್ಕೂ ಸಂಭಂದ ಇರುವುದಿಲ್ಲ. ರಾಜ್ಯ ಸರತಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ನಾವು ಸೊತಿದ್ದೇವೆ. ಆದರೆ, ಪುಕ್ಸಟ್ಟೆ ಕೊಡ್ತಿವಿ ಅಂತ ನಾವು ಎಂದೂ ಹೇಳಿಲ್ಲಾ.
ಪುಕ್ಸಟ್ಟೆ ಕೊಡ್ತೆವೆ ಎಂದು ಹೇಳಿ ಪಾರ್ಲಿಮೆಂಟ್ ಎಲೆಕ್ಷನ್ ಆದಮೇಲೆ ಎಲ್ಲ ಸ್ಕೀಂ ಗಳನ್ನು ಕಡ್ ಮಾಡಲಿದ್ದಾರೆ. ಇದು ನನ್ನ ವಯಕ್ತಿಕ ಅನುಭವ, ನನ್ನ ಅನಿಸಿಕೆ. ಜನರನ್ನು ನಪ್ಪುದಾರಿಗೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಗ್ಯಾರೆಂಟಿ ಕಾರ್ಡ್ ಕೊಡುವಾಗ ಯಾವುದಾದ್ರೂ ರೂಲ್ಸ್ ಹೇಳಿದ್ರಾ? ಎಲ್ಲರಿಗೂ ಕೊಡ್ತಿವಿ ಎಂದು ಕಾರ್ಡ್ ಕೊಟ್ಟಿದಾರೆ. ಈಗ ಎಲ್ಲಿಂದಲೋ ಕಂಡಿಷನ ಹಾಕುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಜೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಷಿ ಉಪಸ್ಥಿತಿದ್ದರು.