ರಕ್ತದಾನ ರೋಗಿಗಳ ಜೀವ ಉಳಿಸುವುದಷ್ಟೇ ಅಲ್ಲ, ದಾನಿಗಳ ಆರೋಗ್ಯಕ್ಕೂ ಪೂರಕವಾಗಿದೆ- ಶಾಲ್ಮೊನ್ ಚೋಪಡೆ

ವಿಜಯಪುರ: ರಕ್ತದಾನ ಮಹಾದಾನ. ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಲು ಸಾಧ್ಯ ಮತ್ತು ರಕ್ತದಾನ ಮಾಡುವುದರಿಂದ ದಾನಿಗಳೂ ಆರೋಗ್ಯವಂತರಾಗಲು ಸಹಾಯವಾಗುತ್ತದೆ ಎಂದು ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ ಹೇಳಿದ್ದಾರೆ.

ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ನಗರದ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯೆ ಪ್ರೋ. ಸುಚಿತ್ರಾ ರಾಟಿ, ಎನ್. ಎಸ್. ಎಸ್. ಸಂಯೊಜಕ ಅಪ್ಪನಗೌಡ ಪಾಟೀಲ, ಬಿ. ಎಲ್. ಡಿ. ಇ ಆಸ್ಪತ್ರೆಯ ರಕ್ತ ಭಂಡಾರದ ಮುಖ್ಯಸ್ಥ ಡಾ. ಪ್ರಕಾಶ ಪಾಟೀಲ, ಡಾ. ಸಂತೋಷ ಇಂಡಿ, ಡಾ. ಅಮಿತಕುಮಾರ ಬಿರಾದಾರ, ಅಕ್ಷತಾ ಬಿರಾದಾರ, ಸುಧೀರ ಬಾಳಿ, ಪ್ರಾನ್ಸಸ್ ಆಡಿನ್, ರೇಶ್ಮಾ ಗಣವಾರಿ, ಆನಂದ ಬಿರಾದಾರ, ಅನಿಲ ಪಡಗಾನೂರ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ 20ಕ್ಕೂ ಹೆಚ್ಚು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Leave a Reply

ಹೊಸ ಪೋಸ್ಟ್‌