ಮಕ್ಕಳಿಗಾಗಿ ಹಗಲಿರುಳು ದುಡಿಯುವ ತಂದೆಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆ- ಶಿವಾಜಿ ಗಾಯಕವಾಡ

ವಿಜಯಪುರ: ಮಕ್ಕಳಿಗಾಗಿ ಹಗಲಿರುಳು ದುಡಿದು ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ತಂದೆ. ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಕುಟುಂಬದ ಅಭ್ಯುದಯಕ್ಕೆ ಶ್ರಮಿಸುತ್ತಾನೆ ಎಂದು ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಶಿವಾಜಿ ಗಾಯಕವಾಡ ಹೇಳಿದ್ದಾರೆ.

ರವೀಂದ್ರನಾಥ ಠಾಗೋರ ಶಾಲೆಯಲ್ಲಿ ನಡೆದ ಫಾದರ್ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂದೆ ಮತ್ತು ಮಕ್ಕಳ ಪ್ರೀತಿ ವರ್ಣಿಸಲಸದಳ.  ತಂದೆಯ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆ ಎಂದು ಅವರು ಹೇಳಿದರು.

 

ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆಯ ಬಗ್ಗೆ ಮಾತನಾಡಿದರು

 

ಶಾಲೆಯ ಪ್ರಿನ್ಸಿಪಾಲ್ ಫರೀನ್ ಖಾನ್ ಮಾತನಾಡಿ, ತಂದೆಗೆ ಮಕ್ಕಳನ್ನು ದಾರಿದೀಪವಾಗಿರುತ್ತಾರೆ.  ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸುತ್ತಾರೆ.  ತಮ್ಮ ಸಕಲ ಸಂಕಷ್ಟಗಳನ್ನು ಮರೆತು ಮಕ್ಕಳು ಮತ್ತು ಕುಟುಂಬಕ್ಕಾಗಿ ದುಡಿಯುತ್ತಾನೆ.  ತನ್ನ ಮನಸ್ಸಿನಲ್ಲಿರುವ ನೋವನ್ನು ಹೊರಹಾಕದೇ ಎಲ್ಲರ ಮುಂದೆ ಧೈರ್ಯವಂತ, ಶಕ್ತಿವಂತ, ಆರೋಗ್ಯವಂತ ಎಂದು ನಟನೆ ಮಾಡುತ್ತ ಮಕ್ಕಳು ಮತ್ತು ಕುಟುಂಬಕ್ಕಾಗಿಯೇ ಜೀವನ ಮುಡುಪಾಗಿಡುತ್ತಾನೆ.  ತಾಯಿಯ ಮಮತೆಯನ್ನು ಹೇಳಲು ತಾಯಂದಿರ ಆಚರಿಸುವಂತೆ ತಂದೆಯ ಕೊಡುಗೆ ಸ್ಮರಿಸಲು ಅಪ್ಪಂದಿರ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

‌ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ.ಯ ಕುರಿತು ಮಾತನಾಡಿದರು.  ಇನ್ನೂ ಕೆಲ ವಿದ್ಯಾರ್ಥಿಗಳು ತಂದೆಯ ಹೆಸರಿನಲ್ಲಿ ಗ್ರಿಟಿಂಗ್ ತಯಾರಿಸಿದರು.  ಬಳಿಕ ವಿದ್ಯಾರ್ಥಿಗಳು ತಂದೆಯ ಕುರಿತು ಹಾಡುಗಳಿಗೆ ಕುಣಿಯುವ ಮೂಲಕ ಸಖತ್ ಸ್ಟೆಪ್ ಹಾಕಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ವಸಂತ ಗಾಯಕವಾಡ ಸೇರಿದಂತೆ ಶಿಕ್ಷಕರು ಹಾಗೂ ಶಿಕಕ್ಷೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌